ಭಾನುವಾರ, ಡಿಸೆಂಬರ್ 8, 2019
24 °C
ಷೇರುಪೇಟೆ ಸೂಚ್ಯಂಕ

ಟೈಟಾನ್‌ ಷೇರು ಶೇ 9.3ರಷ್ಟು ಕುಸಿತ; ಇನ್ಫೊಸಿಸ್‌ ಮೇಲೆ ಮತ್ತೆ ಹೂಡಿಕೆದಾರರ ಭರವಸೆ

Published:
Updated:
ಟೈಟಾನ್‌ ಮತ್ತು ಇನ್ಫೊಸಿಸ್‌ ಷೇರುಗಳು

ಬೆಂಗಳೂರು: ಏರುಗತಿಯಲ್ಲಿದ್ದ ಭಾರತದ ಷೇರುಪೇಟೆಗಳ ಸಂವೇದಿ ಸೂಚ್ಯಂಕ ಬುಧವಾರ ಇಳಿಮುಖವಾಗಿದೆ. ವಹಿವಾಟು ಆರಂಭವಾಗುತ್ತಿದ್ದಂತೆ ಟೈಟಾನ್‌ ಕಂಪನಿ ಷೇರು ಬೆಲೆ ದಿಢೀರ್‌ ಕುಸಿತ ಕಂಡಿದೆ. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್‌ 40,100 ಅಂಶಗಳಿಗೂ ಕಡಿಮೆಯಾಗಿದೆ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ, ನಿಫ್ಟಿ 11,900 ಅಂಶಗಳಿಂದ ಇಳಿಕೆಯಾಗಿದೆ. ತ್ರೈಮಾಸಿಕ ಲಾಭಾಂಶ ಗಳಿಕೆಯಲ್ಲಿ ಕಡಿಮೆ ಸಾಧನೆ ತೋರಿರುವ ಗಡಿಯಾರ ಮತ್ತು ಆಭರಣ ತಯಾರಿಕಾ ಕಂಪನಿ ಟೈಟಾನ್‌, ಬೆಳಗಿನ ವಹಿವಾಟಿನಲ್ಲಿ ಶೇ 9.3ರಷ್ಟು ಕುಸಿದಿದೆ. 

ಇದನ್ನೂ ಓದಿ: ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿಲ್ಲ; ಇನ್ಫಿ

ಆಭರಣ ವ್ಯವಹಾರದಲ್ಲಿ ಶೇ 80ರಷ್ಟು ಆದಾಯ ಹೊಂದಿರುವ ಟೈಟಾನ್‌ ಕಂಪನಿ, ಆಭರಣ ಮಾರಾಟ ವಲಯದಲ್ಲಿನ ಇಳಿಕೆಯಿಂದ ಲಾಭ ಗಳಿಕೆಯಲ್ಲಿ ಕಡಿಮೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 1.8ರಷ್ಟು ಬೆಳವಣಿಗೆ ಕಾಣುವ ಮೂಲಕ ₹320.2 ಕೋಟಿ ಗಳಿಕೆಯಾಗಿದೆ. ಆದರೆ, ಆಭರಣ ವ್ಯವಹಾರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಆದಾಯದಲ್ಲಿ ಶೇ 1.5ರಷ್ಟು ಇಳಿಕೆ(₹3,528 ಕೋಟಿ ಗಳಿಕೆ) ದಾಖಲಾಗಿದೆ. ₹1,283ರಲ್ಲಿ ಮುಕ್ತಾಯಗೊಂಡಿದ್ದ ಷೇರು ಬೆಲೆ ಇಂದು ₹1,175ಕ್ಕೆ ಇಳಿಕೆಯಾಗಿದೆ. 

ಬ್ರಿಟನ್‌ನ ಆಸ್ಟ್ರಾಜೆನೆಕಾ ಮುಖೇನ ಸನ್‌ ಫಾರ್ಮಾ ಕಂಪನಿ ಕ್ಯಾನ್ಸರ್‌ ಚಿಕಿತ್ಸಕ ಔಷಧಿಗಳನ್ನು ಚೀನಾದಲ್ಲಿ ವಿತರಿಸುವ ಒಪ್ಪಂದಕ್ಕೆ ಬಂದಿರುವುದಾಗಿ ಹೇಳಿಕೆ ಪ್ರಕಟಗೊಂಡಿದ್ದು, ಸನ್‌ ಫಾರ್ಮಾ ಷೇರು ಶೇ 4.5ರಷ್ಟು ಹೆಚ್ಚಳ ಕಂಡಿತು. ಮಂಗಳವಾರ ₹700ಕ್ಕಿಂತಲೂ ಕಡಿಮೆ ದರದಲ್ಲಿ ವಹಿವಾಟು ಮುಕ್ತಾಯ ಕಂಡ ಇನ್ಫೊಸಿಸ್‌ ಷೇರು ಬುಧವಾರ ಶೇ 2.2ರಷ್ಟು ಏರಿಕೆ ದಾಖಲಿಸಿದೆ. 

ಇದನ್ನೂ ಓದಿ: ಸೂಚ್ಯಂಕದ ಸಾರ್ವಕಾಲಿಕ ದಾಖಲೆ

ದೂರಸಂಪರ್ಕ ವಲಯ ಹಾಗೂ ಬ್ಯಾಂಕಿಂಗ್‌ ವಲಯದ ಷೇರುಗಳು ಸಹ ಇಳಿಮುಖವಾಗಿವೆ. ಟಾಟಾ ಸ್ಟೀಲ್‌ ಲಿಮಿಟೆಡ್‌ ಷೇರು ಬೆಲೆ ಶೇ 1ರಷ್ಟು ಕುಸಿದಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು