ನವದೆಹಲಿ (ಪಿಟಿಐ): ಇನ್ಫೊಸಿಸ್ನಿಂದ ಮತ್ತೊಬ್ಬ ಹಿರಿಯ ಅಧಿಕಾರಿ ಹೊರನಡೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕಂಪೆನಿಯ ಹೊರಗುತ್ತಿಗೆ(ಬಿಪಿಒ) ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದ ಕಾರ್ತಿಕ್ ಜಯರಾಮನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೆಲ್ಬರ್ನ್ನಲ್ಲಿ ಆಕ್ಸೆಂಚರ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ತಿಕ್ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ತಿಕ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ಪಡೆಯಲು ಸುದ್ದಿಸಂಸ್ಥೆ ಸಿಬ್ಬಂದಿ ಇನ್ಫೊಸಿಸ್ ವಕ್ತಾರರನ್ನು ಸಂಪರ್ಕಿಸಿದಾಗ, ‘ಕಂಪೆನಿಯಿಂದ ಹೊರನಡೆಯುವವರ ಬಗ್ಗೆ ಮತ್ತು ಹೊಸದಾಗಿ ಕಂಪೆನಿಗೆ ಸೇರ್ಪಡೆಗೊಳ್ಳುವವರ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಈ ಕುರಿತು ಚರ್ಚೆ ಅನಗತ್ಯ’ ಎಂದು ಹೇಳಿದ್ದಾರೆ.