ಚಾಮರಾಜನಗರ: ಈ ರೈತನ ಹೆಸರು ಅಂಕಶೆಟ್ಟಿ. ಊರು ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು. ಇರುವ 3ಎಕರೆ ಜಮೀನಿನಲ್ಲಿ ಸಣ್ಣಈರುಳ್ಳಿ ಬೆಳೆದಿದ್ದಾರೆ. ಇದಕ್ಕಾಗ್ಙಿ 60 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಆದರೆ, ಈಗ ಒಂದು ಕೆಜಿ ಈರುಳ್ಳಿ ಬೆಲೆ ರೂ 1 ರ ಆಸುಪಾಸಿನಲ್ಲಿದೆ.

ಕಟಾವು ಮಾಡಿದರೆ ಕೂಲಿಯಾಳು ವೆಚ್ಚವೂ ಕೈ ಸೇರುವುದಿಲ್ಲ. ಹೀಗಾಗಿ, ಜಮೀನಿನಲ್ಲಿರುವ ಈರುಳ್ಳಿ ಕಟಾವು ಆಗಿಲ್ಲ. ಗ್ರಾಮಸ್ಥರೇ ತಮಗೆ ಇಷ್ಟ ಬಂದಷ್ಟು ಈರುಳ್ಳಿಯನ್ನು ಪುಕ್ಕಟೆಯಾಗಿ ಕಟಾವು ಮಾಡಿಕೊಂಡು ಹೋಗಲು ಹೊಲದಲ್ಲಿಯೇ ಬಿಟ್ಟಿದ್ದಾರೆ. ಪಕ್ಕದ ಜಮೀನಿನ ರೈತ ಎನ್. ಕುಮಾರ್ ಅವರದ್ದೂ ಇದೇ ಸ್ಥಿತಿ. ಉತ್ಪಾದನಾ ವೆಚ್ಚವೂ ಅವರ ಕೈಸೇರಿಲ್ಲ. ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದಿರುವ ಅವರು ಈಗ ಕಣ್ಣೀರಿಡುತ್ತಿದ್ದಾರೆ.

ಬಿತ್ತನೆ ಮಾಡಿದ ಮೂರು ತಿಂಗಳೊಳಗೆ ಸಣ್ಣ ಈರುಳ್ಳಿ ಕಟಾವಿಗೆ ಬರುತ್ತದೆ. ವರ್ಷದ ಮೂರು ಅವಧಿಯಲ್ಲಿ ಜಿಲ್ಲೆಯ ನೀರಾವರಿ ಪ್ರದೇಶದ ರೈತರು ಸಣ್ಣ ಈರುಳ್ಳಿ ಬೆಳೆಯುತ್ತಾರೆ. 2011-12ನೇ ಸಾಲಿನಡಿ ಜಿಲ್ಲೆಯ 17,500 ಎಕರೆಯಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಕಳೆದ ವರ್ಷದ ಡಿಸೆಂಬರ್ನಲ್ಲಿ ಬಿತ್ತನೆಯಾಗಿರುವ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಈರುಳ್ಳಿ ಈಗ ಕಟಾವಿಗೆ ಬಂದಿದೆ. ಆದರೆ, ಉತ್ತಮ ಧಾರಣೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಸಣ್ಣ ಈರುಳ್ಳಿಗೆ ನೆರೆಯ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಬೇಡಿಕೆಯಿದೆ. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಈರುಳ್ಳಿಯಲ್ಲಿ ಶೇ 65ರಷ್ಟು ಪಾಲು ತಮಿಳುನಾಡಿಗೆ ಪೂರೈಕೆ ಯಾಗುತ್ತದೆ. ತಮಿಳುನಾಡಿನ ವ್ಯಾಪಾರಿಗಳೇ ನೇರವಾಗಿ ಸ್ಥಳೀಯ ದಲ್ಲಾಳಿಗಳ ನೆರವಿನೊಂದಿಗೆ ರೈತರ ಮನೆ ಬಾಗಿಲಿಗೆ ಬಂದು ಬಿತ್ತನೆ ಈರುಳ್ಳಿ ಪೂರೈಕೆ ಮಾಡುತ್ತಾರೆ. ಕಟಾವು ವೇಳೆ ರೈತರ ಜಮೀನಿಗಳಿಗೆ ಬಂದು ನೇರವಾಗಿ ಖರೀದಿ ಮಾಡುತ್ತಾರೆ. ಆದರೆ, ಈ ಬಾರಿ ನೆರೆಯ ರಾಜ್ಯದ ವ್ಯಾಪಾರಿಗಳು ಜಿಲ್ಲೆಯತ್ತ ಮುಖ ಮಾಡಿಲ್ಲ.

ರೈತರು ಒಂದು ಕ್ವಿಂಟಲ್ ಬಿತ್ತನೆ ಈರುಳ್ಳಿಗೆ ರೂ. 1,500ಗಳಿಂದ ರೂ. 3 ಸಾವಿರ ನೀಡಬೇಕು. ಕನಿಷ್ಠ ಎಕರೆಯೊಂದಕ್ಕೆ 4 ಕ್ವಿಂಟಲ್ನಷ್ಟು ಬಿತ್ತನೆ ಈರುಳ್ಳಿ ಬೇಕಿದೆ. `ಕಳೆದ ವರ್ಷ ಇದೇ ಅವಧಿಯಲ್ಲಿ 1 ಕೆಜಿ ಸಣ್ಣ ಈರುಳ್ಳಿಗೆ ಕನಿಷ್ಠ ರೂ. 15 ಧಾರಣೆಯಿತ್ತು. ಈ ಬಾರಿ ತಮಿಳುನಾಡಿಯಲ್ಲಿಯೂ ಉತ್ಪಾದನೆ ಹೆಚ್ಚಿದೆ. ಜತೆಗೆ, ಜಿಲ್ಲೆಯಲ್ಲಿ ಬೆಳೆದಿರುವ ಈರುಳ್ಳಿ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ, ಬೆಲೆ ಕುಸಿದಿದ್ದು, ನೆರೆಯ ರಾಜ್ಯದಿಂದ ಖರೀದಿದಾರರು ಬರುತ್ತಿಲ್ಲ~ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.