ಬೆಂಗಳೂರು: ಸ್ಪೈಸ್ ಕಮ್ಯುನಿಕೇಷನ್ ಜತೆ ವಿಲೀನಗೊಂಡಿರುವ ಐಡಿಯಾ ಸೆಲ್ಯುಲರ್ನ ಮೊಬೈಲ್ ಸೇವೆಗೆ ಯಾವುದೇ ಧಕ್ಕೆ ಒದಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. `2ಜಿ~ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು 2008ರಲ್ಲಿ ನೀಡಿರುವ ಲೈಸನ್ಸ್ಗಳಿಗೆ ಮಾತ್ರ ಅನ್ವಯಗೊಳ್ಳುತ್ತದೆ.
ಸ್ಪೈಸ್ ಕಮ್ಯುನಿಕೇಷನ್ನಿಗೆ 1995 ರಲ್ಲಿಯೇ ಲೈಸನ್ಸ್ ದೊರೆತಿದೆ. ಹೀಗಾಗಿ ದೇಶದಾದ್ಯಂತ ಐಡಿಯಾ ಮೊಬೈಲ್ ಸೇವೆಗೆ ಯಾವುದೇ ಅಡಚಣೆ ಉಂಟಾಗಲಾರದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.