ನವದೆಹಲಿ(ಪಿಟಿಐ): ನ್ಯಾಯಯುತ ವಾಣಿಜ್ಯ ವಹಿವಾಟಿನತ್ತ ನಿಗಾ ಇಡುವ ಸಂಸ್ಥೆಯಾದ ‘ಭಾರತೀಯ ಸ್ಪರ್ಧಾತ್ಮಕ ಆಯೋಗ’(ಸಿಸಿಐ), ‘ಕೋಲ್ ಇಂಡಿಯಾ’ ಸಂಸ್ಥೆಗೆ ₨1,773 ಕೋಟಿ ದಂಡ ವಿಧಿಸಿದೆ. ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಯೊಂದಕ್ಕೆ ‘ಸಿಸಿಐ’, ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸಿರುವುದು ಇದೇ ಮೊದಲು.

ದೇಶದಲ್ಲಿನ ಇಂಧನ ಪೂರೈಕೆ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನ ಕ್ಕಾಗಿ ವಾಮಮಾರ್ಗ ಅನುಸರಿಸಿದ್ದಕ್ಕಾಗಿ ಹಾಗೂ ವಿದ್ಯುತ್ ಉತ್ಪಾದನಾ ಸಂಸ್ಥೆಗ ಳಿಗೆ ಅತ್ಯಗತ್ಯವಾದ ಕಲ್ಲಿದ್ದಲನ್ನು ಅಂಗ ಸಂಸ್ಥೆಗಳ ಮೂಲಕ ಪೂರೈಸುವ ವಿಚಾರ ದಲ್ಲಿ ನಿಯಮ ಬಾಹಿರ ಷರತ್ತುಗಳನ್ನು ವಿಧಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ‘ಸಿಸಿಐ’ ಮಂಗಳವಾರ ಪ್ರಕಟಣೆ ಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪೆನಿ(ಎಂಎಸ್‌ಪಿಜಿಸಿ) ಮತ್ತು ಗುಜರಾತ್ ರಾಜ್ಯ ವಿದ್ಯುತ್ ನಿಗಮಗಳೆರಡೂ(ಜಿಎಸ್‌ಇಸಿ) ‘ಕೋಲ್ ಇಂಡಿಯಾ’ ಮತ್ತು ಅದರ ಅಂಗಸಂಸ್ಥೆ ಗಳಾದ ‘ಮಹಾನದಿ ಕೋಲ್ ಫೀಲ್ಡ್’, ‘ವೆಸ್ಟರ್ನ್ ಕೋಲ್‌ಫೀಲ್ಡ್ಸ್’ ಮತ್ತು ‘ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್’ ವಿರುದ್ಧ ದೂರು ನೀಡಿದ್ದವು. ಕೋಲ್ ಇಂಡಿಯಾ ಮತ್ತು ಮೂರು ಅಂಗಸಂಸ್ಥೆಗಳು ಕಲ್ಲಿದ್ದಲು ಪೂರೈಸುವು ದಕ್ಕೆ ಸಂಬಂಧಿಸಿದಂತೆ ನ್ಯಾಯಯುತವ ಲ್ಲದ ಷರತ್ತುಗಳನ್ನು ವಿಧಿಸಿವೆ ಎಂದು ವಿದ್ಯುತ್ ಉತ್ಪಾದನಾ ಸಂಸ್ಥೆಗಳೆರಡೂ ಆರೋಪಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.