ಮಂಗಳೂರು: ಚಾಕ್ಲೇಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯು ಚಾಕ್ಲೇಟ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹಾಲು ಉತ್ಪಾದಕರ ಒಕ್ಕೂಟದ (ಸಾಂಚಿ) ಜೊತೆ ಜೂನ್ ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿದೆ.

ಈ ಕುರಿತು ಮಧ್ಯಪ್ರದೇಶ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಒಪ್ಪಂದಕ್ಕೆ ಸಹಿ ಹಾಕಲಿದ್ದು, ಅಧಿಕೃತವಾಗಿ ಮಾರುಕಟ್ಟೆಗೆ ಚಾಕ್ಲೇಟ್ ಬಿಡುಗಡೆ ಮಾಡಲಿದ್ದಾರೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇರಳದ `ಮಿಲ್ಮಾ~ ಮತ್ತು ಕರ್ನಾಟಕದ `ನಂದಿನಿ~ಯ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಬಿಹಾರದ `ಸುಧಾ~ ಜೊತೆ ಒಪ್ಪಂದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇದರ ನಂತರ ರಾಜಸ್ತಾನದ `ಸರಸ್~ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದರು.ಹಿಮಾಲಯ ಡ್ರಗ್ಸ್ ಕಂಪೆನಿಯ ಕೆಲವು ಉತ್ಪನ್ನಗಳು ಕ್ಯಾಂಪ್ಕೊ ಚಾಕ್ಲೇಟ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿವೆ. ಬಾಂಗ್ಲಾ, ಭೂತಾನ್, ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಚಾಕ್ಲೇಟ್ ರಫ್ತು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮಧ್ಯಪ್ರದೇಶದ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಭಾಷ್ ಮಾಂಡ್ಗೆ ಮಾತನಾಡಿ ಮಧ್ಯಪ್ರದೇಶದ ಮಿಲ್ಕ್ ಪಾರ್ಲರ್ ಹಾಗೂ ಮಿಲ್ಕ್ ಬೂತ್ಗಳಲ್ಲಿ ಈ ಚಾಕ್ಲೇಟ್ ಮಾರಾಟ ಮಾಡಲು ತೀರ್ಮಾನಿಸಿದ್ದು, ಪ್ರತಿ ದಿನ 18 ಗಂಟೆಗಳ ಕಾಲ ಅಲ್ಲಿ ಮಿಲ್ಕ್ ಪಾರ್ಲರ್ಗಳು ತೆರೆದಿರುತ್ತವೆ ಎಂದರು. ಕ್ಯಾಂಪ್ಕೊ ಉಪಾಧ್ಯಕ್ಷ ಕೆ.ಸತೀಶ್ಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಎಂ.ಸುರೇಶ್ ಭಂಡಾರಿ, ನಿರ್ದೇಶಕ ಕೆ.ಕರುಣಾಕರನ್ ನಂಬಿಯಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.