ಕಳೆದ ವರ್ಷ ಇದೇ ಅವಧಿಯಲ್ಲಿ ₹32,512 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು. ಆಗಸ್ಟ್ನಲ್ಲಿ ಚಿನ್ನದ ಆಮದು ₹7,104 ಕೋಟಿಗಳಿಂದ ₹12,032 ಕೋಟಿಗಳಿಗೆ ಏರಿಕೆಯಾಗಿದೆ. ಇದರಿಂದ ಅಮದು ಮತ್ತು ರಫ್ತು ನಡುವಣ ಅಂತರ (ವ್ಯಾಪಾರ ಕೊರತೆ) ₹49,280 ಕೋಟಿಗಳಿಂದ ₹77,496 ಕೋಟಿಗಳಿಗೆ ಹೆಚ್ಚಾಗಿದೆ. ಸರಣಿ ಹಬ್ಬಗಳು ಆರಂಭವಾಗುತ್ತಿರುವುದರಿಂದ ಚಿನ್ನದ ಆಮದು ಇನ್ನಷ್ಟು ಏರಿಕೆ ಕಾಣಲಿದೆ.