‘ಬೆಂಗಳೂರು, ಹೈದರಾಬಾದ್, ಠಾಣೆ ಹಾಗೂ ಅಹಮದಾಬಾದ್ ನಗರಗಳಲ್ಲಿ ಗ್ರಾಹಕರಿಗಾಗಿ ಸಂಸ್ಥೆಯು ಶುಲ್ಕ ರಹಿತ ಲಾಕರ್ ಸೌಲಭ್ಯ ಒದಗಿಸುತ್ತದೆ. ಅಲ್ಲದೇ ಎಂಎಂಟಿಸಿ–ಪಿಎಎಂಪಿ ಸಂಸ್ಥೆಯು ಪೇಟಿಎಂ ಜತೆ ಕೈಜೋಡಿಸಿದ್ದು, ಚಿನ್ನಕ್ಕೆ ಸುರಕ್ಷತೆ ನೀಡುತ್ತಿದೆ’ ಎಂದು ಹೇಳಿದರು.
‘ಸಂಸ್ಥೆಯು 24 ಕ್ಯಾರಟ್ನ 999.9 ಪರಿಶುದ್ಧ ಚಿನ್ನ ಒದಗಿಸುತ್ತಿದೆ. ಅದನ್ನು ಗ್ರಾಹಕರು ಕೊಳ್ಳುವ ಹಾಗೂ ಮಾರುವ ಸೌಲಭ್ಯವನ್ನು ಒದಗಿಸುತ್ತದೆ’ ಎಂದರು.
ಭಾರತದ ಎಂಎಂಟಿಸಿ–ಪಿಎಎಂಪಿ ಸಂಸ್ಥೆ ಅಧ್ಯಕ್ಷ ಮೆಹಿದ್ ಬಾರ್ಕೋರ್ಡರ್ ಮಾತನಾಡಿ, ‘ಪೇಟಿಎಂ ಜತೆಗಿನ ಸಹಭಾಗಿತ್ವದಿಂದ ಜನರಿಗೆ ಶುದ್ಧ ಚಿನ್ನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ’ ಎಂದರು.