ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ಮಾರಾಟದ ಒತ್ತಡ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗುರುವಾರ ಸಾಕಷ್ಟು ಏರಿಳಿತ ಕಂಡಿತು.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾರುಕಟ್ಟೆ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದರಿಂದ ಒಂದು ಹಂತದಲ್ಲಿ  239 ಅಂಶಗಳಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 31,523 ಅಂಶಗಳಿಗೆ ಏರಿಕೆ ಕಂಡಿತ್ತು.

ಹೆಚ್ಚು ಹೊತ್ತು ಈ ಏರಿಕೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದ್ದರಿಂದ ಷೇರುಪೇಟೆಯಲ್ಲಿ ಲಾಭಗಳಿಕೆ ಉದ್ದೇಶದ ವಹಿವಾಟು ಮಾರಾಟದ ಒತ್ತಡ ಸೃಷ್ಟಿಸಿತು. ಸೂಚ್ಯಂಕ ಮತ್ತೆ ಇಳಿಕೆ ಹಾದಿ ಹಿಡಿದು, ಕೇವಲ 7 ಅಂಶ ಏರಿಕೆಯೊಂದಿಗೆ 31,291 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಇನ್ನೊಂದೆಡೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ‘ನಿಫ್ಟಿ’ ಕೂಡ ಗರಿಷ್ಠ ಮಟ್ಟವನ್ನು ತಲುಪಿದರೂ ನಂತರ ಅಲ್ಪ ನಷ್ಟದೊಂದಿಗೆ ವಹಿವಾಟು ಅಂತ್ಯಕಂಡಿತು. ದಿನದ ವಹಿವಾಟಿನಲ್ಲಿ 4 ಅಂಶ ಇಳಿಕೆ ಕಂಡು, 9,630ರಲ್ಲಿ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT