ಬೀಜಿಂಗ್(ಐಎಎನ್ಎಸ್): ಪರಿಷ್ಕೃತ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಚೀನಾ ಪ್ರಕಟಿಸಿದ್ದು, ಅಮೆರಿಕ ನಂತರ ಪ್ರಪಂಚದಲ್ಲಿಯೇ ಎರಡನೆಯ ಅತಿದೊಡ್ಡ ಆರ್ಥಿಕ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ.
2010ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಜಪಾನ್ ‘ಜಿಡಿಪಿ’ ದರ ಶೇ 1.1ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಚೀನಾ 6.03 ಲಕ್ಷ ಕೋಟಿ ಡಾಲರ್ಗಳಷ್ಟು ವರಮಾನ ದಾಖಲಿಸಿದರೆ, ಜಪಾನ್ ವರಮಾನವು 5.47 ಲಕ್ಷ ಕೋಟಿ ಡಾಲರ್ಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ 1968ರಿಂದ ಎರಡನೇ ಸ್ಥಾನದಲ್ಲಿದ್ದ ಜಪಾನ್ ಮೂರನೆಯ ಸ್ಥಾನಕ್ಕೆ ಇಳಿದಿದೆ.
ಪ್ರಸಕ್ತ ಸಾಲಿನಲ್ಲಿ ಚೀನಾದ ವಿದೇಶಿ ವಿನಿಮಯ ಶೇ 44ರಷ್ಟು, ರಫ್ತು ಶೇ 37ರಷ್ಟು, ಆಮದು ಶೇ 51ರಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಜಪಾನನ್ನು ಹಿಂದಿಕ್ಕಿದೆ.