ನವದೆಹಲಿ (ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳು, ಔಷಧ ಮತ್ತು ಚಿನ್ನಾಭರಣಗಳ ರಫ್ತು ಕ್ಷೀಣಿಸಿದ ಹಿನ್ನೆಲೆಯಲ್ಲಿ ದೇಶದ ಒಟ್ಟಾರೆ ರಫ್ತು ವಹಿವಾಟು ನವೆಂಬರ್ ತಿಂಗಳಲ್ಲಿ 5 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಕೇವಲ ಶೇ 5.86ರಷ್ಟು ಪ್ರಗತಿ ದಾಖಲಾಗಿದೆ.

ಪ್ರಸಕ್ತ ಅವಧಿಯಲ್ಲಿ ರೂ.15,252 ಕೋಟಿ ಮೊತ್ತದ ರಫ್ತು ವಹಿವಾಟು ನಡೆದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ.14,384 ಕೋಟಿ ಮೊತ್ತದ ರಫ್ತು ದಾಖಲಾಗಿತ್ತು ಎಂದು ವಾಣಿಜ್ಯ ಕಾರ್ಯದರ್ಶಿ ಎಸ್.ಆರ್. ರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆಮದು ಇಳಿಕೆ
ಚಿನ್ನ ಮತ್ತು ಬೆಳ್ಳಿ ಆಮದು ಗಣನೀಯವಾಗಿ ತಗ್ಗಿರುವುದರಿಂದ ಒಟ್ಟಾರೆ ಆಮದು ನವೆಂಬರ್‌ನಲ್ಲಿ ಶೇ 16.3ರಷ್ಟು ತಗ್ಗಿದೆ. ಒಟ್ಟು ರೂ.20,956 ಕೋಟಿ ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಮಾರ್ಚ್ 2011ರ ನಂತರ ದಾಖಲಾಗಿರುವ ಕನಿಚ್ಠ ಮಟ್ಟ ಇದು. ಇದರಿಂದ ವಿತ್ತೀಯ ಕೊರತೆ ಅಂತರ ರೂ.5,704 ಕೋಟಿಗೆ ಇಳಿಕೆ ಕಂಡಿದೆ. ಸೆಪ್ಟೆಂಬರ್ ನಂತರ ದಾಖಲಾಗಿರುವ ಕನಿಷ್ಠ ಮಟ್ಟ ಇದು.

ತಗ್ಗಿದ ಚಿನ್ನ, ಕಚ್ಚಾತೈಲ
ಚಿನ್ನ ಮತ್ತು ಬೆಳ್ಳಿ ಆಮದು ನವೆಂಬರ್‌ನಲ್ಲಿ ಶೇ 80.49ರಷ್ಟು ತಗ್ಗಿದೆ. ರೂ.620 ಕೋಟಿ ಮೊತ್ತದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ರೂ.3,348 ಕೋಟಿಯಷ್ಟಿತ್ತು. ಕಚ್ಚಾ ತೈಲ ಆಮದು ಸಹ ಶೇ 1.1ರಷ್ಟು ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.