ನವದೆಹಲಿ(ಪಿಟಿಐ): ಭಾರತ್ ಹೆವಿ ಎಲೆಕ್ಟ್ರಿಕಲ್ ಲಿ.(ಬಿಎಚ್‌ಇಎಲ್), ಕೋಲ್ ಇಂಡಿಯಾ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳ(ಪಿಎಸ್ ಯು) ಷೇರು ವಿಕ್ರಯ ಮತ್ತು ಲಾಭಾಂಶ ಹಂಚಿಕೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಬೃಹತ್ ಕೈಗಾರಿಕೆ ಮತ್ತು ಕಲ್ಲಿದ್ದಲು ಸಚಿವಾ ಲಯಗಳಿಗೆ ಸೂಚಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಪಿಎಸ್‌ಯು’ ಕಂಪೆನಿಗಳ ಷೇರು ವಿಕ್ರಯ ಮೂಲಕ ಒಟ್ಟು ₨40 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಆದರೆ, ಹಣ ಕಾಸು ವರ್ಷದಲ್ಲಿ ಅದಾಗಲೇ ಎಂಟು ತಿಂಗಳುಗಳೇ ಕಳೆದಿದ್ದರೂ ಕೇವಲ ಆರು ಕಂಪೆನಿಗಳ ಷೇರು ವಿಕ್ರಯ ಮಾತ್ರ ನಡೆ ದಿದೆ. ಇದರಿಂದ ₨1,325 ಕೋಟಿ ಯಷ್ಟೇ ಸಂಗ್ರಹವಾಗಿದೆ. ಆರ್ಥಿಕ ಅಸ್ಥಿ ರತೆ, ಹಣಕಾಸು ಮಾರುಕಟ್ಟೆಯ ಲ್ಲಿನ ಬಿಕ್ಕಟ್ಟಿನಿಂದಾಗಿ ಹಲವು ಕಂಪೆನಿ ಗಳು ಷೇರು ಮಾರಾಟವನ್ನು ಮುಂದೂ ಡಿವೆ. ಈ ಕುರಿತು ಅಗತ್ಯ ಕ್ರಮ ಕೈಗೊ ಳ್ಳುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಬಿಎಚ್‌ಇಎಲ್ ಮತ್ತು ಕೋಲ್ ಇಂಡಿಯಾ ಕೆಲವು ಪರ್ಯಾಯ ಆಯ್ಕೆಗಳನ್ನು ಮುಂದಿಟ್ಟಿವೆ. ಇದರಲ್ಲಿ ಷೇರು ಮರು ಖರೀದಿ ಆಯ್ಕೆ ಕೂಡ ಒಂದು. ಆ ವಿಚಾರವನ್ನೂ ಪರಿಶೀಲಿಸ ಲಾಗುವುದು ಎಂದು ಕೇಂದ್ರ ಹಣ ಕಾಸು ಸಚಿವ ಪಿ.ಚಿದಂಬರಂ ಹೇಳಿದರು.
ಅವರು ಇಲ್ಲಿ ಪ್ರಧಾನಿ ಜತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದರು.

ಕೋಲ್ ಇಂಡಿಯಾದ ಶೇ 10 ರಷ್ಟು ಷೇರು ಮಾರಾಟ ಮಾಡಲು ಸರ್ಕಾರ ಯೋಜನೆ ಪ್ರಕಟಿಸಿತ್ತು. ಆದರೆ, ವಿರೋಧ ಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿ ಇದನ್ನು ಶೇ 5ಕ್ಕೆ (31.58 ಕೋಟಿ ಷೇರುಗಳು) ತಗ್ಗಿಸಲಾಗಿದೆ. ಆ ಮೂಲಕ ₨8,600 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ‘ಬಿಎಚ್‌ಇಎಲ್’ನ ಶೇ 5ರಷ್ಟು ಷೇರು ಮಾರಾಟದ ಮೂಲಕ ₨1,300 ಕೋಟಿ ಸಂಗ್ರ ಹಿಸುವ ಗುರಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.