ನವದೆಹಲಿ (ಪಿಟಿಐ): ಈಗಾಗಲೇ ಬೆಲೆಗಳೆಲ್ಲಾ ಗಗನಕ್ಕೇರಿ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆಯೂ ಜಾಸ್ತಿಯಾಗಿ ಶ್ರೀಸಾಮಾನ್ಯ ಉಸ್ಸಪ್ಪಾ ಎನ್ನುತ್ತಿರುವಾಗಲೇ ಭಾರತೀಯ ರಿಸರ್ವ್ ಬ್ಯಾಂಕು ಮತ್ತೊಂದು ಶಾಕ್ ನೀಡಿದೆ. ತನ್ನ ಹಣಕಾಸು ನೀತಿಯ ತ್ರೈಮಾಸಿಕ ಅವಧಿಯ ಮಧ್ಯಂತರ ಪರಾಮರ್ಶೆ ನಡೆಸಿರುವ ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿದರಗಳಾದ ರೆಪೊ ಹಾಗೂ ರಿವರ್ಸ್ ರೆಪೊ ದರಗಳನ್ನು ಶೇ. 0.25ರಷ್ಟು ಹೆಚ್ಚಿಸಿದೆ. ಇದರಿಂದ ಎಲ್ಲಾ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚಳವಾಗುವುದು ನಿಚ್ಚಳವಾಗಿದೆ.

ರಿಸರ್ವ್ ಬ್ಯಾಂಕ್ ಕ್ರಮದ ಪರಿಣಾಮವಾಗಿ ಶೇಕಡಾ 8 ರಷ್ಟಿದ್ದ ರೆಪೊ ದರ ಇದೀಗ ಶೇ. 8.25 ರಷ್ಟಾಗಿದ್ದು, ಶೇ. 7 ರಷ್ಟಿದ್ದ ರಿವರ್ಸ್ ರೆಪೊ ದರ ಶೇ. 7.25 ರಷ್ಟನ್ನು ತಲುಪಿದೆ. ಇದರಿಂದಾಗಿ ವಾಣಿಜ್ಯ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸಾಲಗಳ ಮೇಲೆ ಇನ್ನಷ್ಟು ಅಧಿಕ ಬಡ್ಡಿದರಗಳನ್ನು ವಿಧಿಸಲಿವೆ.

ಮಾರ್ಚಿ 2010ರ ನಂತರ ಇಲ್ಲಿಯವರೆಗೆ 12 ಬಾರಿ ತನ್ನ ಅಲ್ಪಾವಧಿ ಬಡ್ಡಿದರಗಳನ್ನು ಹೆಚ್ಚಿಸಿದಂತಾಗಿದೆ.
ಈ ಕ್ರಮದಿಂದ ಈಗಾಗಲೇ ಎರಡಂಕಿ ಸನಿಹ ಇರುವ ಹಣದುಬ್ಬರ ಪ್ರಸಕ್ತ ಹಣಕಾಸು ವರ್ಷದಲ್ಲಿ ಅರ್ಧಕ್ಕರ್ಧ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಆರ್‌ಬಿಐ ತಿಳಿಸಿದೆ. ಕಳೆದ ಕೆಲವು ವಾರಗಳಲ್ಲಿ ಜಾಗತಿಕ ಆರ್ಥಿಕ ಸ್ಥಿತಿಯಲ್ಲಿ ಕಂಡು ಬಂದಿರುವ ಕೆಲವು ಬದಲಾವಣೆಗಳು ಆತಂತಕಾರಿಯಾಗಿದೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.