ಬಳ್ಳಾರಿ:  ಕಳೆದ ಹಣಕಾಸಿನ ವರ್ಷ ಒಟ್ಟು ರೂ234 ಕೋಟಿ ವಹಿವಾಟು ನಡೆಸಿರುವ ಸುಕೋ ಬ್ಯಾಂಕ್ ಒಟ್ಟು ರೂ1.36 ಕೋಟಿ ನಿವ್ವಳ ಲಾಭ ಗಳಿಸಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಬ್ಯಾಂಕ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ ಅವರು, ರಾಜ್ಯದಾದ್ಯಂತ ಒಟ್ಟು 9 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಒಟ್ಟು ರೂ138 ಕೋಟಿಗಳಷ್ಟು ಠೇವಣಿ ಹೊಂದಿದ್ದು, ಕಳೆದ ಹಣಕಾಸು ವರ್ಷದಲ್ಲಿ ಶೇ. 32.68ರಷ್ಟು ಪ್ರಗತಿ ಸಾಧಿಸಿ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣ ಸಹಕಾರಿ ಬ್ಯಾಂಕ್ ಆಗಿದೆ ಎಂದರು.

ಗೋದಾಮಿನಲ್ಲಿ ರೈತರು ಶೇಖರಿಸಿರುವ ಆಹಾರ ಧಾನ್ಯದ ಮೇಲೆ ಸಾಲ ವಿತರಣೆಯಲ್ಲಿ ಬ್ಯಾಂಕ್ ಮುಂಚೂಣಿಯಲ್ಲಿದ್ದು, ಕೃಷಿಕರ ನೆರವಿಗೆ ಬಂದಿದೆ. ಇತರ ಬ್ಯಾಂಕ್ಗಳು ಸಾಲ ನೀಡಲು ಹಿಂದೇಟು ಹಾಕಿದ ಸಂದರ್ಭಗಳಲ್ಲಿ, ಬಳ್ಳಾರಿ, ಸಿರುಗುಪ್ಪ ಮತ್ತು ರಾಯಚೂರು ಜಿಲ್ಲೆಗಳ ಗೋದಾಮಿನಲ್ಲಿ ಭತ್ತ ಶೇಖರಿಸಿರುವ ರೈತರಿಗೆ ಪ್ರಸಕ್ತ ವರ್ಷ ರೂ15 ಕೋಟಿ ಸಾಲ ನೀಡಿ ಅವರ ನೆರವಿಗೆ ಬಂದಿರುವುದು ಬ್ಯಾಂಕ್ನ ಹೆಗ್ಗಳಿಕೆಯಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷಕ್ಕಿಂತ ಬ್ಯಾಂಕ್ನ ಒಟ್ಟು ವಹಿವಾಟು ಶೇ 38.4ರಷ್ಟು ಏರಿಕೆಯಾಗಿದ್ದು, ಲಾಭದ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಸಹಕಾರಿ ತತ್ವದಲ್ಲಿ ನಡೆಯುತ್ತಿರುವ ಬ್ಯಾಂಕ್ಗಳಲ್ಲೇ ಸುಕೋ ಬ್ಯಾಂಕ್ ಉತ್ತಮ ರೀತಿಯ ವ್ಯವಹಾರ ನಡೆಸಿದೆ ಎಂದರು.

ಬಳ್ಳಾರಿ, ಕೊಪ್ಪಳ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಸ್ತುತ ಒಟ್ಟು 9 ಶಾಖೆಗಳಿದ್ದು, ಬೆಂಗಳೂರು ಮತ್ತು ತುಮಕೂರಿನಲ್ಲೂ ನೂತನ ಶಾಖೆ ಆರಂಭಿಸಲು ನಿರ್ಧರಿಸಿ, ಭಾರತೀಯ ರಿಸರ್ವ್ ಬ್ಯಾಂಕ್ಗೆ ಅನುಮತಿ ಕೋರಲಾಗಿದೆ. ಪ್ರಸಕ್ತ ವರ್ಷ ಬೆಂಗಳೂರಿನಲ್ಲಿ ನೂತನ ಶಾಖೆ ತೆರೆಯಲು ಅನುಮತಿ ದೊರೆತಿದೆ. ಇದೇ 24ಕ್ಕೆ ಎಟಿಎಂ ಸೌಲಭ್ಯ ಪರಿಚಯಿಸುವ ಮೂಲಕ ಈ ಸೌಲಭ್ಯ ಹೊಂದಿರುವ ರಾಜ್ಯದ ಪ್ರಥಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೂ ಬ್ಯಾಂಕ್ ಪಾತ್ರವಾಗಲಿದೆ ಎಂದರು.

ಈ ಕುರಿತು ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಒಟ್ಟು ಏಳು ಶಾಖೆಗಳಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ ಎಲೆಕ್ಟ್ರಾನಿಕ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಬರಲಿದೆ. ಬ್ಯಾಂಕ್ ತನ್ನ ಸ್ವಂತ ಡೆಬಿಟ್ ಕಾರ್ಡ್ಗಳನ್ನು ಗ್ರಾಹಕರಿಗೆ ವಿತರಿಸುವ ಮೂಲಕ ದೇಶದ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳ ಎಟಿಎಂಗಳಲ್ಲೂ ಗ್ರಾಹಕರು ಹಣ ಪಡೆಯುವ ಸೌಲಭ್ಯ ಪರಿಚಯಿಸಲಿದೆ ಎಂದು ಮಸ್ಕಿ ಹೇಳಿದರು.

ಆದ್ಯತಾ ವಲಯಕ್ಕೆ ಶೇ 80ರಷ್ಟು ಮಹತ್ವ ನೀಡಿರುವ ಬ್ಯಾಂಕ್, ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಕಲೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನೂ ಆರಂಭಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.