ಮುಂಬೈ (ಪಿಟಿಐ): ಬಜೆಟ್ ಒತ್ತಡದ ನಡುವೆಯೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 84 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17,587 ಅಂಶಗಳಿಗೆ ಏರಿಕೆ ಕಂಡಿದೆ.

ದೇಶದ ಕೈಗಾರಿಕೆ ಉತ್ಪಾದನೆ ಸೂಚ್ಯಂಕ (ಐಐಪಿ) ಕಳೆದ 7 ತಿಂಗಳಲ್ಲೇ ಗರಿಷ್ಠ ಮಟ್ಟ ಶೆ 6.8ಕ್ಕೆ ಏರಿಕೆ ಕಂಡಿರುವುದು ಸೂಚ್ಯಂಕ ಚೇತರಿಸುವಂತೆ ಮಾಡಿದೆ.

ಬ್ಯಾಂಕಿಂಗ್, ವಾಹನ ಉದ್ಯಮ, ಭಾರಿ ಯಂತ್ರೋಪಕರಣ, ಲೋಹ ವಲಯದ ಷೇರುಗಳು ದಿನದ ವಹಿವಾಟಿನಲ್ಲಿ ಲಾಭ ಮಾಡಿಕೊಂಡವು. ಭಾರತೀಯ ಸ್ಟೇಟ್ ಬ್ಯಾಂಕ್, ಎಲ್ ಅಂಡ್ ಟಿ, ಜಿಂದಾಲ್ ಸ್ಟೀಲ್, ಷೇರುಗಳು ಏರಿಕೆ ಕಂಡವು. ಸಿಪ್ಲಾ, ಒಎನ್ಜಿಸಿ, ಇನ್ಪೋಸಿಸ್ ಕುಸಿತ ಕಂಡವು.

ರಾಷ್ಟೀಯ ಷೇರು ಸೂಚ್ಯಂಕ `ನಿಫ್ಟಿ~ 26 ಅಂಶಗಳಷ್ಟು ಏರಿಕೆ ಕಂಡು, 5,359 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.