ಬೆಂಗಳೂರು: ಭಾರತದಲ್ಲಿ ಸ್ವಿಟ್ಜರ್ಲೆಂಡ್ನ ದುಬಾರಿ ವಾಚ್ಗಳನ್ನು ಮಾರಾಟ ಮಾಡಲು ಮಲ್ಟಿ ಬ್ರ್ಯಾಂಡ್ ವಾಚ್ ರಿಟೇಲರ್ ಹೆಲಿಯೋಸ್ ಕಂಪೆನಿಯು ರೇಮಂಡ್ ವೇಲ್ಸ್ ಜತೆ ಪಾಲುದಾರಿಕೆ ಮಾಡಿಕೊಂಡಿದೆ.
ಹೆಲಿಯೋಸ್, ಟೈಟಾನ್ ಕಂಪೆನಿಯ ಭಾರತದ ಒಂದು ಅಂಗಸಂಸ್ಥೆಯಾಗಿದ್ದು, ದೇಶದಾದ್ಯಂತ 48 ಮಳಿಗೆಗಳಲ್ಲಿ ಸ್ವಿಸ್ ವಾಚ್ಗಳು ಮಾರಾಟವಾಗಲಿವೆ. ₹ 50 ಸಾವಿರದಿಂದ ₹2.5 ಲಕ್ಷದ ಬೆಲೆಯ ವಾಚ್ಗಳು ಲಭ್ಯ ಇವೆ.
‘ಭಾರತದ ಗ್ರಾಹಕರಿಗೆ ಐಷಾರಾಮಿ ಬ್ರ್ಯಾಂಡ್ಗಳನ್ನು ಕೈಗೆಟುಕುವ ದರದಲ್ಲಿ ನೀಡಲು ಸಂಸ್ಥೆ ಬದ್ಧವಾಗಿದೆ. ರೇಮಂಡ್ ವೇಲ್ ಜೊತೆಗಿನ ಪಾಲುದಾರಿಕೆ ನಮ್ಮ ಬದ್ಧತೆ ಬಲಗೊಳಿಸುವ ಮತ್ತೊಂದು ಯಾಗಿದೆ’ ಎಂದು ಟೈಟಾನ್ ಕಂಪೆನಿಯ ಸಿಇಒ ಎಸ್.ರವಿಕಾಂತ್ರವಿಕಾಂತ್ ತಿಳಿಸಿದರು.