ಮುಂಬೈ (ಪಿಟಿಐ): `ಹಣದುಬ್ಬರ ನಿರ್ಧರಿಸಲು ಸದ್ಯ ಜಾರಿಯಲ್ಲಿರುವ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ವ್ಯವಸ್ಥೆಯು ಸಮರ್ಪಕವಾಗಿಲ್ಲ. ಇದರ ಬದಲಿಗೆ ಉತ್ಪಾದಕರ ದರ ಸೂಚ್ಯಂಕ (ಪಿಪಿಐ) ಮೂಲಕ ಸರಕು ಮತ್ತು ಸೇವೆಗಳ ನೈಜ ಬೆಲೆ ಏರಿಳಿತ ನಿರ್ಧರಿಸಬಹುದು~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ.

ಈಗಿರುವ `ಡಬ್ಲ್ಯುಪಿಐ~ ವ್ಯವಸ್ಥೆ ತೆಗೆದುಹಾಕಿ, ಇನ್ನಷ್ಟು ವೈಜ್ಞಾನಿಕವಾದ `ಪಿಪಿಐ~ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಪ್ರಸ್ತಾವವನ್ನು ಸುಬ್ಬರಾವ್ ಮಂಗಳವಾರ ಇಲ್ಲಿ ನಡೆದ ಆರನೇ ಅಂಕಿ ಅಂಶ ಸಮ್ಮೇಳನದಲ್ಲಿ ಮುಂದಿಟ್ಟಿದ್ದಾರೆ.
`ಡಬ್ಲ್ಯುಪಿಐ~ ಹಳೆಯ ವ್ಯವಸ್ಥೆ ಮತ್ತು ಇದು ಗ್ರಾಹಕ ಮತ್ತು ಉತ್ಪಾದಕ ಸೂಚ್ಯಂಕದ ಮಿಶ್ರ ರೂಪ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಬೆಲೆ ನಿಖರವಾಗಿ ತಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

`ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ `ಡಬ್ಲ್ಯುಪಿಐ~ನಲ್ಲಿ ಪ್ರಮುಖ ಪಾಲುದಾರರು. ಆದರೆ, ಸರ್ಕಾರ ನೀಡುವ ಸಬ್ಸಿಡಿ, ಅಬಕಾರಿ ತೆರಿಗೆ, ವಿತರಣೆ ವೆಚ್ಚಗಳಿಂದ ಮಾರಾಟಗಾರ ಮತ್ತು ಖರೀದಿದಾರ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಈ ನಿಟ್ಟಿನಲ್ಲಿ ಹೊಸ `ಉತ್ಪಾದಕ ದರ ಸೂಚ್ಯಂಕ (ಪಿಪಿಐ) ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದ್ದಾರೆ.

`ಮುಖ್ಯವಾಗಿ ಆಹಾರ ಪದಾರ್ಥಗಳು, ಇಂಧನ ಮತ್ತು ತೈಲ ಬೆಲೆ ಆಧರಿಸಿ ಒಟ್ಟಾರೆ ಹಣದುಬ್ಬರ ನಿರ್ಧರಿಸಲಾಗುತ್ತದೆ. ಆದರೆ, ಮಾರುಕಟ್ಟೆ ಬೆಲೆಗೂ ಈ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ ಎಂದಿರುವ ಸುಬ್ಬರಾವ್, `ಡಬ್ಲ್ಯುಪಿಐ~ಗೆ ಹೋಲಿಸಿದರೆ `ಪಿಪಿಐ~ ಉತ್ತಮ ವ್ಯವಸ್ಥೆ. ಇದರ ಮೂಲಕ ಮುಖ್ಯವಾಗಿ ಸೇವೆಗಳ ಬೆಲೆ ಏರಿಳಿತ ನಿರ್ಧರಿಸಬಹುದು ಎಂದು ಹೇಳಿದ್ದಾರೆ.

`ಜಿಡಿಪಿ~ ಇನ್ನಷ್ಟು ಕುಸಿತ

ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಮತ್ತೊಮ್ಮೆ 2008ರ ಮಟ್ಟವಾದ ಶೇ 7.5ಕ್ಕೆ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಸುಬ್ಬರಾವ್ ಹೇಳಿದ್ದಾರೆ. ಕಳೆದ ಹಣಕಾಸು ವರ್ಷದ (2011-12) ನಾಲ್ಕನೇಯ ತ್ರೈಮಾಸಿಕ ಅವಧಿಯಲ್ಲಿ `ಜಿಡಿಪಿ~ 9 ವರ್ಷಗಳ ಹಿಂದಿನ ಮಟ್ಟವಾದ ಶೇ 6.7ಕ್ಕೆ ಕುಸಿತ ಕಂಡಿತ್ತು.
ಬಡ್ಡಿ ದರ ಕಾರಣವಲ್ಲ

`ಜಿಡಿಪಿ~ ಕುಸಿಯಲು ಅಲ್ಪಾವಧಿ ಬಡ್ಡಿ ದರ ಏರಿಕೆ ಮಾತ್ರ ಕಾರಣವಲ್ಲ ಎಂದು ಸುಬ್ಬರಾವ್ ಹೇಳಿದ್ದಾರೆ. ಜುಲೈ 31ರಂದು `ಆರ್‌ಬಿಐ~ ಮೊದಲ ತ್ರೈಮಾಸಿಕ ಹಣಕಾಸು ಪರಾಮರ್ಷೆ ಪ್ರಕಟಿಸಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಡ್ಡಿದರ ಮತ್ತು ಹೂಡಿಕೆ ಚಟುವಟಿಕೆಗಳ ನಡುವೆ ಇರುವ ಸಂಬಂಧದ ಕುರಿತು ಪರಿಶೀಲನೆ ನಡೆಸುವಂತೆ ಆರ್ಥಿಕ ಅಧ್ಯಯನ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.