ಕಾರ್ಬನ್‌ ಡೈ ಆಕ್ಸೈಡ್‌ ದಾಖಲೆ ಏರಿಕೆ

ಶುಕ್ರವಾರ, ಏಪ್ರಿಲ್ 26, 2019
33 °C

ಕಾರ್ಬನ್‌ ಡೈ ಆಕ್ಸೈಡ್‌ ದಾಖಲೆ ಏರಿಕೆ

Published:
Updated:
Prajavani

ಬರ್ಲಿನ್‌: ವಾತಾವರಣದಲ್ಲಿ ಸದ್ಯ ಇರುವ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಮಟ್ಟವು ಕಳೆದ 30 ಲಕ್ಷ ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟದ್ದಾಗಿದೆ ಎಂದು ಅಧ್ಯಯನವೊಂದು ಹೇಳಿದೆ. 

ಜರ್ಮನಿಯ ಪಾಟ್ಸ್‌ಡಂ ಹವಾಮಾನ ಬದಲಾವಣೆ ಸಂಶೋಧನಾ ಸಂಸ್ಥೆ ಈ ಅಧ್ಯಯನ ನಡೆಸಿದೆ. 

ಇಂಧನಗಳ ಅತಿಯಾದ ಬಳಕೆಯಿಂದ ವಾತಾವರಣ ಸೇರುತ್ತಿರುವ ವಿಷಾನಿಲ ಮಟ್ಟವು ಹೆಚ್ಚಾಗುತ್ತಿದೆ. ಹಸಿರುಮನೆ ಅನಿಲಗಳ ಪ್ರಮಾಣವೂ ಏರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಾಗತಿಕ ಸರಾಸರಿ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದ್ದು, ಇದು ಕಳೆದ 30 ಲಕ್ಷ ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ. ಇದೇ ಸ್ಥಿತಿ ಮುಂದುವರಿದರೆ, ಮುಂದಿನ 50 ವರ್ಷಗಳಲ್ಲಿ ಮತ್ತೆ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗುವ ಅಪಾಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಸಾಗರವನ್ನು ಸೇರುತ್ತಿರುವ ಕಲುಷಿತ ಕೆಸರಿನ ಪ್ರಮಾಣ ಮತ್ತು ಕರಗುತ್ತಿರುವ ಮಂಜುಗಡ್ಡೆಯ ಆಧಾರದ ಮೇಲೆ ವಿಜ್ಞಾನಿಗಳು ಈ ಅಧ್ಯಯನ ವರದಿ ಸಿದ್ಧಪಡಿಸಿದ್ದಾರೆ. 

‘ಭೂಮಿಯ ಮೇಲೆ ನಾಗರಿಕತೆ ಪರ್ವ ಆರಂಭವಾಗಿ ಕೇವಲ 11 ಸಾವಿರ ವರ್ಷಗಳಾಗಿವೆ. ನಾವು, 30 ಲಕ್ಷ ವರ್ಷಗಳಿಂದ ವಾತಾವರಣದಲ್ಲಾದ ಬದಲಾವಣೆಯನ್ನು ಅಧ್ಯಯನ ಮಾಡಿದ್ದೇವೆ. ಅಂದರೆ, ಆಧುನಿಕ ಯುಗದಲ್ಲಿ ಹವಾಮಾನ ಬದಲಾವಣೆಯು ಇನ್ನೂ ತೀವ್ರತರವಾದ ದುಷ್ಪರಿಣಾಮವನ್ನುಂಟು ಮಾಡುವ ಅಪಾಯವಿದೆ’ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !