ಅತಿಯಾದ ಮೊಬೈಲ್ ಬಳಕೆಯಿಂದಲೋ ಟಿ.ವಿ. ನೋಡುವ ಹುಚ್ಚಿನಿಂದಲೋ ಮಕ್ಕಳು ಚಿಕ್ಕವಯಸ್ಸಿನಲ್ಲೇ ದೃಷ್ಟಿದೋಷದ ಸಮಸ್ಯೆ ಎದುರಿಸುತ್ತಾರೆ. ಆ ಕಾರಣಕ್ಕೆ ಕನ್ನಡಕವನ್ನೂ ಧರಿಸಬೇಕಾಗುತ್ತದೆ. ಆದರೆ ಮಕ್ಕಳಿಗೆ ಕನ್ನಡಕ ಕೊಡಿಸುವ ಮುನ್ನ ಫ್ರೇಮ್, ಲೆನ್ಸ್, ಗುಣಮಟ್ಟವನ್ನು ಪರೀಕ್ಷಿಸುವುದು ಅಷ್ಟೇ ಮುಖ್ಯ.

ಕೆಲವು ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ಕಣ್ಣುಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಅಕ್ಷರಗಳು ಹಾಗೂ ದೂರದ ವಸ್ತುಗಳು ಮಂಜು ಮಂಜಾಗಿ ಕಾಣುವುದು ಹಾಗೂ ಗಾಳಿಗೆ ಕಣ್ಣೀರು ಸೋರುವುದು ಹೀಗೆ ಅನೇಕ ದೃಷ್ಟಿ ದೋಷಗಳು ಕಾಣಿಸಿಕೊಳ್ಳುತ್ತವೆ. ಇಂತಹ ದೋಷಗಳಿರುವ ಮಕ್ಕಳು ಕನ್ನಡಕ ಧರಿಸಬೇಕಾಗುತ್ತದೆ. ಅವರಿಗೆ ಕನ್ನಡಕ ಆಯ್ಕೆಯಲ್ಲಿ ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

ಇದನ್ನೂ ಓದಿ:ಮಕ್ಕಳಾಗದ ಮಹಿಳೆಯರಿಗೆ ಅಸಿಸ್ಟೆಡ್ ಹ್ಯಾಚಿಂಗ್ ವಿಧಾನ ಸಹಕಾರಿ

ನಾಲ್ಕು ಮಕ್ಕಳಲ್ಲಿ ಒಬ್ಬರಿಗೆ ದೃಷ್ಟಿದೋಷವಿರುತ್ತದೆ ಎಂಬುದು ವೈದ್ಯರ ಅಭಿಪ್ರಾಯ. ಈ ದೋಷ ಮಕ್ಕಳ ಓದಿನ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕನ್ನಡಕ ಧರಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಫ್ರೇಮ್ಗಳಿರುವ ಹಾಗೂ ಹೊಸ ಹೊಸ ಶೈಲಿಯ ಕನ್ನಡಕಗಳು ಲಭ್ಯವಿವೆ. ಆದರೆ ಅವುಗಳ ಆಯ್ಕೆಗಿಂತ ಮೊದಲು ನಿಮ್ಮ ಮಕ್ಕಳ ದೃಷ್ಟಿದೋಷದ ಬಗ್ಗೆ ವೈದ್ಯರಿಂದ ಸ್ಪಷ್ಟಪಡಿಸಿಕೊಳ್ಳಿ. ನಂತರ ಯಾವ ಕನ್ನಡಕ ಅಗತ್ಯವಿದೆ ಎಂದು ವೈದ್ಯರ ಸಲಹೆ ಪಡೆಯಿರಿ. ಕನ್ನಡಕ ಧರಿಸಲು ಮಕ್ಕಳು ಸಿದ್ಧರಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಗಾಜಿನ ಗಾತ್ರ

ವೈದ್ಯರು ಕಣ್ಣು ಪರೀಕ್ಷಿಸಿ, ಕನ್ನಡಕ ಧರಿಸುವ ಸಲಹೆ ಸೂಚಿಸಿದರೆ ಅದನ್ನು ಆಯ್ಕೆ ಮಾಡುವ ಮುನ್ನ ಹೆಚ್ಚು ಗಮನಿಸಬೇಕಾದ ಅಂಶವೆಂದರೆ, ಗಾಜಿನ ದಪ್ಪ ಹಾಗೂ ಅದರ ಲೆನ್ಸ್ನ ಬಗ್ಗೆ. ವೈದ್ಯರು ಯಾವ ರೀತಿಯ ಕನ್ನಡಕ ಧರಿಸಲು ಹೇಳಿದ್ದಾರೆ ಎಂಬುದರ ಆಧಾರದ ಮೇಲೆ ಆಯ್ಕೆ ಇರಲಿ. ಕನ್ನಡಕಗಳು ದಪ್ಪ, ಸಣ್ಣವಾಗಿರುತ್ತವೆ. ಕನ್ನಡಕದ ಗಾಜು ದಪ್ಪವಾಗಿದ್ದರೆ ಅದರ ಚೌಕಟ್ಟು ಇನ್ನೂ ದೊಡ್ಡದಿರುತ್ತದೆ. ಅಂತಹ ಕನ್ನಡಕಗಳನ್ನು ಮಕ್ಕಳು ಧರಿಸಲು ಹಿಂದೇಟು ಹಾಕುತ್ತಾರೆ. ಚೌಕಟ್ಟು ಗಾಜಿಗೆ ತಕ್ಕಂತೆ ಹೊಂದಿಕೆಯಾಗಿದ್ದರೆ, ಅಂತಹ ಕನ್ನಡಕ ಧರಿಸಲು ಸೂಕ್ತವಾಗಿರುತ್ತದೆ.

ಗುಣಮಟ್ಟ ಪರೀಕ್ಷಿಸಿ

ಆಕರ್ಷಕ ಶೈಲಿ ಹಾಗೂ ಹೊಸ ಲುಕ್ ನೀಡುವ ಕನ್ನಡಕಗಳ ಹುಡುಕಾಟದ ನಡುವೆ ಅದರ ಬಾಳಿಕೆ ಹಾಗೂ ಗುಣಮಟ್ಟ ಗಮನಿಸುವುದು ಬಹು ಮುಖ್ಯ. ಕನ್ನಡಕದ ಚೌಕಟ್ಟು ಪ್ಲಾಸ್ಟಿಕ್ ಅಥವಾ ಸ್ಟೀಲ್ನದ್ದೇ ಎಂಬುದನ್ನು ಗಮನಿಸಿ. ಕನ್ನಡಕದ ತೂಕ ಹಾಗೂ ಅದರ ಬಣ್ಣ, ಬಾಳಿಕೆ ಬಗ್ಗೆ ತಿಳಿದ ನಂತರ ಖರೀದಿಸುವುದು ಸೂಕ್ತ. ತೂಕವಿರುವ ಕನ್ನಡಕ ಮಕ್ಕಳಿಗೆ ಕಿರಿಕಿರಿ ಎನ್ನಿಸಬಹುದು. ಹಗುರವಾಗಿದ್ದಷ್ಟೂ ಧರಿಸಲು ಅನುಕೂಲಕರ. ಕೆಲವು ಕನ್ನಡಕಗಳು ಚೌಕಟ್ಟಿನ ಬಣ್ಣ ಕಳೆದುಕೊಳ್ಳುವುದು, ಸೀಳುವುದು, ಕೈಜಾರಿ ಬಿದ್ದಾಗ ಮುರಿದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕನ್ನಡಕಗಳ ಗುಣಮಟ್ಟ ಪರೀಕ್ಷಿಸಿ ಖರೀದಿಸುವುದು ಉತ್ತಮ.

ಮುಖದ ಆಕಾರಕ್ಕೆ ತಕ್ಕ ಆಯ್ಕೆ

ಮುಖ ದುಂಡಗಿರಬಹುದು ಅಥವಾ ಕೋಲು ಮುಖವಾಗಿರಬಹುದು. ಕೆಲವು ಕನ್ನಡಕಗಳ ಆಕಾರಗಳು ಮಕ್ಕಳ ಮುಖಕ್ಕೆ ಹೊಂದುವುದಿಲ್ಲ. ಅಂತಹ ಕನ್ನಡಕಗಳನ್ನು ಧರಿಸಿದ ಮಕ್ಕಳ ಮುಖ ಬೇರೆ ರೀತಿ ಕಾಣುತ್ತದೆ. ಇದರಿಂದ ಮಕ್ಕಳಿಗೆ ಬೇಸರ ಉಂಟಾಗಬಹುದು. ಆಯ್ಕೆ ಮಾಡುವಾಗ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಮುಖಕ್ಕೆ ಸೂಕ್ತವೆನಿಸುವ ಕನ್ನಡಕಗಳನ್ನು ಆಯ್ಕೆ ಮಾಡಿ.

ಮಕ್ಕಳು ಬೆಳೆಯುವ ಹಂತದಲ್ಲಿರುವ ಕಾರಣ ಅವರ ಮೂಗು ಚಿಕ್ಕದಾಗಿರುತ್ತದೆ. ಹೀಗಾಗಿ ಕನ್ನಡಕವನ್ನು ಧರಿಸಿದಾಗ ಅವು ಜಾರಿ ಬೀಳುತ್ತವೆ. ಆಯ್ಕೆ ಮಾಡುವಾಗ ಕಣ್ಣುಗಳ ಅಳತೆಗೆ ಸರಿಯಾಗಿ ಕೂಡುವ ಮತ್ತು ಮೂಗಿನ ಮೇಲೆ ಆರಾಮವಾಗಿ ಕೂರುವಂತಹ ಚೌಕಟ್ಟಿನ ಪ್ಯಾಡ್ ಇರಲಿ. ಜತೆಗೆ ಕಿವಿಯ ಭಾಗದಲ್ಲಿ ಹೇಗೆ ಕೂರುತ್ತದೆ ಎಂಬುದನ್ನು ಗಮನಿಸಿ ಆಯ್ಕೆ ಮಾಡಿ.

ಮಕ್ಕಳು ಆಟವಾಡುವಾಗ ಅಥವಾ ಓಡಾಡುವಾಗ ಕನ್ನಡಕ ಜಾರಿ ಬೀಳಬಹುದು. ಕನ್ನಡಕ ಖರೀದಿಸುವಾಗ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ. ಕಡಿಮೆ ಬೆಲೆಯ ಕನ್ನಡಕಗಳ ಹುಡುಕಾಟ ಬೇಡ. ಬೆಲೆ ಹೆಚ್ಚಾಯಿತು ಎಂಬ ಕಾರಣಕ್ಕೆ ಗುಣಮಟ್ಟ ಹೊಂದಿರುವ ಕನ್ನಡಕಗಳನ್ನು ಕೈ ಬಿಡಬೇಡಿ. ಆಲೋಚಿಸಿ ಖರೀದಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.