ಇದು ಅತ್ಯಂತ ಪ್ರಸಿದ್ಧನಾದ ಸೂಫೀಸಂತ ಗಿಲಾನಿಯ ಅಬ್ದುಲ್ಖಾದಿರ್ ಹೇಳಿದ ಕಥೆ.
ಒಂದು ದಿನ ಒಬ್ಬ ಕಳ್ಳ ಮುದುಕಿಯ ಮನೆಯಲ್ಲಿ ಕಳ್ಳತನ ಮಾಡಲೆಂದು ನಡೆದ. ಕೋಣೆಯ ಕಿಟಕಿ ತೆರೆದಿತ್ತು. ಅದರೊಳಗಿಂದ ಇಣುಕಿದ. ಮುದುಕಿ ಹತ್ತಿರದ ಮಂಚದ ಮೇಲೆಯೇ ಮಗ್ಗುಲಾಗಿ ಮಲಗಿದ್ದಳು. ಆಕೆಗೆ ಯಾವುದೋ ರೋಗ ತಗುಲಿದಂತಿತ್ತು. ಅವಳು ಒಂದೇ ಸಮನೆ ನರಳುತ್ತಿದ್ದಳು ಅಯ್ಯೋ ನಿನ್ನ ಮನೆ ಹಾಳಾಗಿ ಹೋಗ, ಈ ಡಿಬ್ ಡಿಬ್ ಸಾಕಾಗಿ ಹೋಗಿದೆ. ಇದರಿಂದ ನನಗೆ ಮುಕ್ತಿ ಇಲ್ಲ. ಇದು ನನ್ನ ಪ್ರಾಣವನ್ನೇ ಹೀರುತ್ತದೆ.

ಅಯ್ಯೋ ಡಿಬ್ ಡಿಬ್ . ಇದಾವ ವಿಚಿತ್ರ ರೋಗ ಡಿಬ್ ಡಿಬ್? ಈ ಮುದುಕಿಯನ್ನು ಹಿಂಡಿಬಿಟ್ಟಿದ್ದರೆ ಅದೊಂದು ಅಪರೂಪವಾದ ರೋಗವೇ ಇರಬೇಕು. ಅದು ಸಾಂಕ್ರಾಮಿಕವೋ ಏನೋ? ಅವನಿಗೆ ಗಾಬರಿಯಾಯಿತು. ತಾನು ಇಷ್ಟು ಹೊತ್ತು ಅವಳಿಗೆ ಹತ್ತಿರವಾಗಿಯೇ ನಿಂತಿದ್ದೇನೆ. ತನಗೂ ತಗಲುತ್ತ್ತದೆಯೋ ಏನೋ ಈ ದರಿದ್ರ ಡಿಬ್ ಡಿಬ್ ರೋಗ? ಹೀಗೆ ಯೋಚಿಸಿದಾಗ ಅವನಿಗೆ ಮೈಯಲ್ಲಿ ನಡುಕ ಬಂದಂತಾಯಿತು. ತಲೆ ಸುತ್ತಿ ಬಂದಿತು. ಓಡುತ್ತ ಮನೆಗೆ ಬಂದ.

ಅವನ ಹೆಂಡತಿಗೆ ಗಾಬರಿ. ಈತ ಬಂದವನೇ ಹಾಸಿಗೆಯ ಮೇಲೆ ಬಿದ್ದು ಹೊರಳಾಡಿ ಅಯ್ಯೋ ಆ ದರಿದ್ರ ಡಿಬ್-ಡಿಬ್ ನನ್ನನ್ನು ಮೆಟ್ಟಿಬಿಟ್ಟಿದೆ! ನಾನಿನ್ನು ಬದುಕಿ ಉಳಿಯುವುದು ಸಾಧ್ಯವಿಲ್ಲ ಎಂದ. ಅವನಿಗೆ ಮೈ ಕಾಯಿಸಲು ಬಿಸಿ ನೀರು ಕೊಟ್ಟು ಆಕೆ ಹೊರಗೆ ಓಡಿದಳು. ಬಹುಶ: ನನ್ನ ಗಂಡನನ್ನು ಯಾವುದೋ ದೆವ್ವ ಹಿಡಿದುಕೊಂಡಿದೆ. ಅದರಿಂದ ಅವನನ್ನು ಪಾರುಮಾಡುವುದು ಸಂತ ಫಾಕೀಗೆ ಮಾತ್ರ ಸಾಧ್ಯ. ಅವನನ್ನು ಆದಷ್ಟು ಬೇಗ ಕರೆತರಬೇಕೆಂದು ಫಾಕೀ ಮನೆಗೆ ಹೋದಳು.

ಫಾಕೀ ವಿಷಯ ಕೇಳಿಸಿಕೊಂಡ. ಅವನು ಅದುವರೆಗೂ ಇಂಥ ದೆವ್ವದ ಹೆಸರು ಕೇಳಿರಲಿಲ್ಲ. ಆದರೆ ತನಗೆ ಗೊತ್ತಿಲ್ಲವೆಂದರೆ ಊರಿನಲ್ಲಿ ಮರ್ಯಾದೆ ಕಡಿಮೆಯಾಗುತ್ತದೆ. ತಕ್ಷಣ ತನ್ನ ಕೆಲವು ಪರಿಕರಗಳನ್ನು ತೆಗೆದುಕೊಂಡು ಕಳ್ಳನ ಹೆಂಡತಿಯ ಜೊತೆಗೆ ಆಕೆಯ ಮನೆಗೆ ಬಂದ. ಕಳ್ಳನ ಪರಿಸ್ಥಿತಿ ತುಂಬ ಕಷ್ಟವಾಗಿತ್ತು. ಸನ್ನಿ ಬಂದವರಂತೆ ಆತ ಬಡಬಡಿಸುತ್ತಿದ್ದ.

ಆ ಮೂಲೆಯ ಮನೆಯ ಮುದುಕಿಗೆ ಬಡಿದುಕೊಂಡ ಡಿಬ್-ಡಿಬ್ ನನಗೂ ಬಡಿದಿದೆ. ದೇವರೇ ಪಾರುಮಾಡು . ಸಂತ ಫಾಕೀ ತನ್ನ ಮಂತ್ರದ ಪಾತ್ರೆಯಲ್ಲಿಯ ನೀರನ್ನು ತೆಗೆದು ಕಳ್ಳನ ಮುಖಕ್ಕೆ ಚಿಮುಕಿಸಿದ. ಈತ ಕಣ್ಣು ತೆರೆದು ಫಾಕೀಯನ್ನು ನೋಡಿ, ನೀವು ಬಂದಿರಾ? ದಯವಿಟ್ಟು ನನ್ನನ್ನು ಈ ಡಿಬ್ ಡಿಬ್ನಿಂದ ಪಾರು ಮಾಡಿ ಎಂದು ಕೇಳಿಕೊಂಡ. ಕರುಣೆಯಿಂದ ಕಳ್ಳನ ಮುಖವನ್ನು ನೋಡಿ ಫಾಕೀ ಹೇಳಿದ, ಬಂಧು, ನಿನ್ನನ್ನು ಬದುಕಿಸುವುದು ಯಾರಿಂದಲೂ ಸಾಧ್ಯವಿಲ್ಲ ದೇವರನ್ನು ಧ್ಯಾನಿಸು. ನಿನಗೆ ಇನ್ನು ಹೆಚ್ಚು ಸಮಯವಿಲ್ಲ . ಕಳ್ಳ ಬಿಳಿಚಿಕೊಂಡು ಕಣ್ಣು ಮುಚ್ಚಿದ. ಅವನ ಕೊನೆಯ ಆಸರೆಯೂ ಕುಸಿದು ಬಿತ್ತು.

ಫಾಕೀ ಸರಸರನೇ ಮೂಲೆಯ ಮನೆಯ ಮುದುಕಿಯ ಕಡೆಗೆ ಹೋದ. ತೆರೆದ ಕಿಟಕಿಯಿಂದ ಮನೆಯೊಳಗೆ ಬಗ್ಗಿ ನೋಡಿದ. ಮುದುಕಿಯ ನರಳಾಟ ನಡೆದೇ ಇತ್ತು. ಈ ಮಂತ್ರವಾದಿಗೂ ಭಯ ಹುಟ್ಟಿತು. ಆ ಡಿಬ್ ಡಿಬ್ ದೆವ್ವ ತನ್ನನ್ನೇ ಮೆಟ್ಟಿದರೆ? ಮೈ ಚಳಿ ಬಂದು ಹಲ್ಲು ಕಟಕಟಿಸಿ ಅಯ್ಯೋ ಎಂದ. ಈ ಧ್ವನಿ ಮುದುಕಿಗೆ ಕೇಳಿಸಿ ಆಕೆ ಠಣಕ್ಕನೇ ಹಾರಿ ಕುಳಿತು ಈ ಮಂತ್ರವಾದಿಯ ಕುತ್ತಿಗೆಯ ಪಟ್ಟಿಯನ್ನು ಹಿಡಿದು, ಎಲಾ ಚಂಡಾಲಾ, ಮನೆಯಲ್ಲಿ ಒಬ್ಬಳೇ ಹೆಂಗಸಿದ್ದಾಗ ಕಿಟಕಿಯಲ್ಲಿ ಕತ್ತು ತೋರಿಸಿ ನೋಡುತ್ತೀಯಲ್ಲ. ನಿನಗೆ ನಾಚಿಕೆ ಇಲ್ಲವೇ? ನೀನೇನೋ ಒಬ್ಬ ಸಂತ ಎಂದುಕೊಂಡರೆ ನೀನು ಲಂಪಟನಾಗಿದ್ದೀ ಎಂದು ಕೂಗತೊಡಗಿದಳು. ಆತ, ತಾಯೀ, ನಾನು ನಿನ್ನನ್ನು ನೋಡಲು ಬರಲಿಲ್ಲ. ನಿನ್ನನ್ನು ಹಿಡಿದುಕೊಂಡ ಆ ಡಿಬ್-ಡಿಬ್ ದೆವ್ವದ ಪರೀಕ್ಷೆಗೆ ಬಂದಿದ್ದೆ ಎಂದ. ಮುದುಕಿ ಬೊಚ್ಚುಬಾಯಿ ತೆರೆದು ನಕ್ಕು ಡಿಬ್-ಡಿಬ್ ದೆವ್ವವೇ? ಅದೆಲ್ಲಿದೆ? ಮೂರ್ಖ ಅದು ದೆವ್ವವಲ್ಲ, ತೋರಿಸುತ್ತೇನೆ ಬಾ ಎಂದು ಅವನನ್ನು ಕರೆದುಕೊಂಡು ಪಕ್ಕದಲ್ಲಿದ್ದ ನಲ್ಲಿಯನ್ನು ತೋರಿದಳು. ಅದು ಸೋರುತ್ತಲಿತ್ತು. ಕೆಳಗೆ ಒಂದು ಸಣ್ಣ ತೆಗ್ಗಾಗಿ ನಿಂತ ನೀರಿನಲ್ಲಿ ಹೊಸ ಹನಿ ಬಿದ್ದಾಗ ಡಿಬ್ ಡಿಬ್ ಎಂಬ ಸದ್ದಾಗುತ್ತಿತ್ತು. ಇಡೀ ದಿನ ಈ ಸಪ್ಪಳ ಕೇಳಿ ಆಕೆಗೆ ತಲೆ ಕೆಟ್ಟಿತ್ತು.

ಈಗ ಫಾಕೀ ಕಳ್ಳನ ಮನೆಗೆ ಹೋಗಿ ಮಂತ್ರವಾದಿಯ ಹಾಗೆ ನಟಿಸಿ ಈಗ ಡಿಬ್ ಡಿಬ್ ಭೂತ ಹೋಯಿತು ಎಂದ. ಅದನ್ನು ಕಳ್ಳನೂ ನಂಬಿ ಸರಿಯಾದ. ಅವನ ಹೆಂಡತಿಗೂ ನಿರಾಳವಾಯಿತು. ಫಾಕೀಗೆ ಬೇಕಾದಷ್ಟು ಹಣ ಸಿಕ್ಕಿತು. ಆದರೆ ಮುಂದೆ ಯಾರೂ ಡಿಬ್ ಡಿಬ್ ದೆವ್ವದ ಬಗ್ಗೆ ಮಾತನಾಡಲಿಲ್ಲ.
ನಮ್ಮ ಸಮಾಜದಲ್ಲಿ ಹಬ್ಬುವ ಅನೇಕ ವದಂತಿಗಳು ಈ ಡಿಬ್ ಡಿಬ್ ಮಾದರಿಯವೇ. ಆಗಿರುವುದು ಪುಟ್ಟ ಇಲಿಯಷ್ಟು ಆದರೆ ಆ ಸುದ್ದಿಗೆ ರೆಕ್ಕೆ ಪುಕ್ಕ ಹುಟ್ಟಿ, ಕೋಡು ಮೂಡಿ, ಅದೊಂದು ಅಸಾಧ್ಯವಾದ ಮಹಾ ದುರ್ಭರ ಪ್ರಸಂಗವೇ ಎನ್ನವಂತಹ ವಾತಾವರಣ ಸಷ್ಟಿಯಾಗುತ್ತದೆ. ಈ ಸಮಯದಲ್ಲಿ ಸಮಯಸಾಧಕರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ, ನಿರಪರಾಧಿಗಳು ಬಲಿಯಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.