ಹಾಂಗ್ಝೌ: ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಮನದೀಪ್ ಸಿಂಗ್ ಅವರ ಹ್ಯಾಟ್ರಿಕ್ ಸಾಧನೆಗಳಿಂದ ಭಾರತ ತಂಡವು ಏಷ್ಯನ್ ಕ್ರೀಡಾಕೂಟದ ಪುರುಷರ ಹಾಕಿ ಪಂದ್ಯದಲ್ಲಿ ಸಿಂಗಪುರದ ವಿರುದ್ಧ ಗೋಲುಗಳ ಮಳೆ ಸುರಿಸಿತು.

ಗುಂಪಿನಲ್ಲಿ ಸತತ ಎರಡನೇ ಪಂದ್ಯ ಜಯಿಸಿದ ಭಾರತವು ವಿಜೃಂಭಿಸಿತು. ಹರ್ಮನ್ಪ್ರೀತ್ ಸಿಂಗ್ ಬಳಗವು 16–1ರಿಂದ ಸಿಂಗಪುರ ವಿರುದ್ಧ ಗೆದ್ದಿತು.

ಹರ್ಮನ್ಪ್ರೀತ್ (24ನೇ ನಿಮಿಷ, 39ನಿ, 40ನಿ, 42ನಿ), ಮನದೀಪ್ (12ನಿ, 30ನಿ, 51ನಿ), ಅಭಿಷೇಕ್ (51ನೇ ನಿ, 52ನಿ), ವರುಣಕುಮಾರ್ (55ನಿ,, 56ನಿ), ಲಲಿತ್ ಕುಮಾರ್ ಉಪಾಧ್ಯಾಯ (16ನಿ), ಗುರ್ಜಂತ್ ಸಿಂಗ್ (22ನಿ), ವಿವೇಕ್ ಸಾಗರ್ ಪ್ರಸಾದ್ (23ನೇ ನಿ), ಮನ್ಪ್ರೀತ್ ಸಿಂಗ್ (37ನಿ) ಮತ್ತು ಶಂಶೇರ್ ಸಿಂಗ್ (38ನಿ) ಗೋಲು ಗಳಿಸಿದರು.

ಸಿಂಗಪುರದ ಪರವಾಗಿ ಝಾಕಿ ಝುಲ್ಕಮೈನ್ 53ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಪಂದ್ಯದ ಆರಂಭದಿಂದಲೂ ಪಾರಮ್ಯ ಮೆರೆದ ಭಾರತ ತಂಡವು 12ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಆರನೇ ನಿಮಿಷದಲ್ಲಿ ಲಭಿಸಿದ್ದ ಗೋಲು ಗಳಿಕೆಯ ಅವಕಾಶ ಕೈತಪ್ಪಿತ್ತು. ಸಿಂಗಪುರ ಗೋಲ್ಕೀಪರ್ ಸಂದರನ್ ಗುಗಾನ್ ಅವರು ಸುಖಜೀತ್ ಸಿಂಗ್ ಹೊಡೆದ ಚೆಂಡನ್ನು ತಡೆದರು. ಆದರೆ ನಂತರದಲ್ಲಿ ಭಾರತದ ಆಟಗಾರರ ದಾಳಿಯನ್ನು ಹಿಮ್ಮೆಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಆದರೂ ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಹೆಚ್ಚು ಗೋಲು ಗಳಿಸಲಿಲ್ಲ. 22 ಪೆನಾಲ್ಟಿ ಅವಕಾಶಗಳಲ್ಲಿ ಗೋಲುಗಳಾಗಿ ಪರಿವರ್ತಿತ ಗೊಂಡಿದ್ದು ಎಂಟು ಮಾತ್ರ!

ಅದರಲ್ಲಿ ವರುಣ್ ಅವರು ಸತತ ಎರಡು ಪೆನಾಲ್ಟಿ ಕಾರ್ನರ್ಗಳಲ್ಲಿ ಗೋಲು ದಾಖಲಿಸಿದರು.

ಗುಂಪಿನ ಮೊದಲ ಪಂದ್ಯದಲ್ಲಿಯೂ ಭಾರತವು 16–0 ಗೋಲುಗಳಿಂದ ಉಜ್ಬೇಕಿಸ್ತಾನ ವಿರುದ್ಧ ಗೆದ್ದಿತ್ತು. ಹರ್ಮನ್ ಬಳಗವು ಗುರುವಾರ ತನ್ನ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಭಾರತದ ಸಾಮರ್ಥ್ಯಕ್ಕೆ ನಿಜವಾದ ಸವಾಲು ಎದುರಾಗಲಿದೆ. ಅದರಲ್ಲೂ ಪೆನಾಲ್ಟಿ ಕಾರ್ನರ್ಗಳಲ್ಲಿ ಗೋಲು ಗಳಿಕೆಯ ಅವಕಾಶಗಳನ್ನು ಬಳಸಿಕೊಳ್ಳುವ ಕೌಶಲಕ್ಕೆ ಹೆಚ್ಚು ಒತ್ತು ನೀಡಬೇಕಾದ ಸವಾಲು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.