ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ನಾರದನಿಗೆ ಶಿವತತ್ವ ಬೋಧಿಸಿದ ಬ್ರಹ್ಮ

ಭಾಗ 81
ಅಕ್ಷರ ಗಾತ್ರ

ರುದ್ರಸಂಹಿತೆಯ ಮೊದಲನೇ ಖಂಡವಾದ ಸೃಷ್ಟಿಖಂಡದ ಆರನೆಯ ಅಧ್ಯಾಯವಾದ ‘ವಿಷ್ಣುವಿನ ಉತ್ಪತ್ತಿ ವರ್ಣನ’ದಲ್ಲಿ ಬ್ರಹ್ಮನು ನಾರದ ನಿಗೆ ಶಿವತತ್ವವನ್ನ ಬೋಧಿಸುತ್ತಾನೆ. ಬ್ರಹ್ಮ ಹೇಳುತ್ತಾನೆ: ‘ಎಲೈ ಮಹಾಜ್ಞಾನಿ ಯಾದ ವತ್ಸನೇ, ಸದಾ ಪ್ರಪಂಚಕ್ಕೆ ಉಪಕಾರವನ್ನು ಮಾಡುತ್ತಿರುವ ನಿನಗೆ ಯಾವುದನ್ನು ಕೇಳಿದೊಡನೆಯೇ ಜನರೆಲ್ಲರ ಪಾಪಗಳೆಲ್ಲವೂ ನಶಿಸಿ ಹೋಗು ವುವೋ, ಅಂತಹ ವಿಕಾರರಹಿತವಾದ ಶುದ್ಧ ಶಿವತತ್ವವನ್ನು ಬೋಧಿಸುತ್ತೇನೆ. ಶಿವತತ್ವವನ್ನು, ಆತನ ಅದ್ಭುತ ರೂಪವನ್ನು ನಾನಾಗಲಿ, ವಿಷ್ಣುವಾಗಲಿ, ಮತ್ತಿನ್ನಾರಾದರೂ ಆಗಲಿ, ಯಥಾರ್ಥವಾಗಿ ಯಾರೂ ಅರಿಯರು.

‘ಮಹಾಪ್ರಳಯದ ಸಮಯದಲ್ಲಿ ಚರಚರಾತ್ಮಕವಾದ ಈ ಪ್ರಪಂಚವೆಲ್ಲ ನಾಶವಾದ ನಂತರ ಗ್ರಹಗಳೂ ನಕ್ಷತ್ರಗಳೂ ಇಲ್ಲದೆ ಎಲ್ಲ ಕತ್ತಲಿನಿಂದ ಆವರಿಸಲ್ಪ
ಟ್ಟಿತ್ತು. ಅಂದರೆ ಜಗತ್ ಪ್ರಳಯದ ನಂತರ ಇಡೀ ಜಗತ್ತಿನ ಎಲ್ಲೆಡೆ ಕತ್ತಲೆ ತುಂಬಿ ಹೋಗಿತ್ತು. ಆಗ ಬಾನಲ್ಲಿ ಚಂದ್ರನಿರಲಿಲ್ಲ. ಹಗಲು ರಾತ್ರಿಗಳಿರಲಿಲ್ಲ. ಬೆಂಕಿ, ಗಾಳಿ, ನೀರು, ನೆಲ ಯಾವುದೂ ಇರಲಿಲ್ಲ. ಬೇರಾವ ತೇಜಸ್ಸೂ ಇಲ್ಲದೆ, ಎಲ್ಲಿ ನೋಡಿದರೂ ಬರೀ ಶೂನ್ಯವೇ ತೋರುತ್ತಿತ್ತು. ನೋಡುವುದಕ್ಕೆ ಸಾಧ್ಯವಾದ ಯಾವ ವಸ್ತುಗಳು ಇಲ್ಲದ್ದರಿಂದ ಶಬ್ದ ಸ್ಪರ್ಶಗಳು ಕಂಡುಬರುತ್ತಿ ರಲಿಲ್ಲ. ಗಂಧ ಮತ್ತು ರೂಪಗಳ ಗೋಚರವೇ ಆಗುತ್ತಿರಲಿಲ್ಲ. ರಸವಿರಲೇ ಇರಲಿಲ್ಲ. ದಿಕ್ಕುಗಳೇ ಗೊತ್ತಾಗುತ್ತಿರಲಿಲ್ಲ.

‘ಈ ರೀತಿಯಾಗಿ ಸೂರ್ಯಚಂದ್ರಾದಿಯಾದ ಚರಾಚರಾತ್ಮಕ ಪ್ರಪಂಚ ವಿಲ್ಲದೆ ಶೂನ್ಯ ಆವರಿಸಿತ್ತು. ಎಲ್ಲೆಲ್ಲೂ ನೀರವ ಸ್ಮಶಾನಮೌನ, ಕಗ್ಗತ್ತಲು. ಒತ್ತಾದ ತಮಸ್ಸಿನಿಂದ ಆವೃತವಾಗಿರುವ ಆ ಸಮಯದಲ್ಲಿ ಪರಬ್ರಹ್ಮವಸ್ತು ಒಂದೇ ಗೋಚರಿಸುತ್ತಿತ್ತು. ಯಾವ ಪರಬ್ರಹ್ಮವಸ್ತುವನ್ನು ‘ತತ್ ಸದ್ ಬ್ರಹ್ಮ’ ಎಂದು ಕರೆಯಲಾ ಗುತ್ತೋ, ಶ್ರುತಿಯು ತ್ರಿಕಾಲಾಬಾಧಿ ತವಾದ ಏಕಮಾತ್ರ ವಸ್ತುವೆಂದು ಪ್ರತಿಪಾದಿಸುವುದೋ, ಯಾವುದು ಸದ್ರೂಪದಿಂದ ಮತ್ತು ಅಸದ್ರೂಪದಿಂದ ಗೋಚರಿಸುವುದೋ, ಆ ಪರಬ್ರಹ್ಮವಸ್ತುವೊಂದೇ ಪ್ರಕಾಶಿಸುತ್ತಿದ್ದಿತು.

‘ಯೋಗಿಗಳು ಮಾತ್ರ ಆ ಪರಬ್ರಹ್ಮವಸ್ತುವನ್ನು ಅಂತರ್ಹಿತವಾದ ಹೃದಯಾಕಾಶದಲ್ಲಿ ಎಡೆಬಿಡದೆ ಸಾಕ್ಷಾತ್ಕರಿಸುವರು. ಆ ವಸ್ತುವೆಂದಿಗೂ ಮನಸ್ಸಿಗೆ ಗೋಚರವಾಗಲಾರದು. ಮಾತುಗಳಿಗೆ ನಿಲುಕಲಾರದು. ಅದಕ್ಕೆ ಹೆಸರು, ರೂಪ, ಬಣ್ಣ, ಯಾವುದೊಂದು ಇಲ್ಲ. ಅದು ದಪ್ಪವಾದುದೂ ಅಲ್ಲ, ಕೃಶವಾ ದುದೂ ಅಲ್ಲ. ಅಲ್ಲದೆ ಅದು ಗಿಡ್ಡಾಗಿಯೂ ಇಲ್ಲ, ಹಗುರವಾ ಗಿಯೂ ಇಲ್ಲ, ಭಾರವಾಗಿಯೂ ಇಲ್ಲ. ಅದಕ್ಕೆ ಬೆಳವಣಿಗೆಯೂ ಇಲ್ಲ, ಸವೆದುಹೋಗು ವಿಕೆಯೂ ಇಲ್ಲ. ಶ್ರುತಿಯೂ ಸಹ ಹೆದರಿ ಹೆದರಿಕೊಂಡೇ ‘ಅಸ್ತಿ’ (ಇದೆ) ಎಂಬುದಾಗಿ ಅದನ್ನು ಬಣ್ಣಿಸುವುದು. ಆ ಪರಬ್ರಹ್ಮವು ಸತ್ಯಸ್ವರೂಪವಾದುದು.

‘ಅದಕ್ಕೆ ಯಾವಾಗಲೂ ಹುಟ್ಟೂ ಇಲ್ಲ-ನಾಶವೂ ಇಲ್ಲ. ಅಲ್ಲದೆ ಜ್ಞಾನಮಯವಾದುದು (ಸ್ವಪ್ರಕಾಶವಾದುದು) ಮತ್ತು ಅನಂತವಾದುದು (ಕೊನೆಯಿಲ್ಲ ದುದು). ಅದೂ ಅಲ್ಲದೆ, ಉತ್ತಮೋತ್ತಮವಾದ ಆನಂದಸ್ವರೂಪವಾದುದು, ಅದ್ಭುತವಾದ ತೇಜಸ್ಸಿನಿಂದ ಬೆಳಗುವಂಥದ್ದೂ ಆಗಿರುವುದು. ಪ್ರಮಾಣಗಳಿಗೆ ಅದು ನಿಲುಕು ವುದಿಲ್ಲ. ಅದಕ್ಕೆ ಬೇರೊಂದು ಆಧಾರವಾದುದೂ ಇಲ್ಲ. ಅದು ವಿಕಾರವನ್ನು ಹೊಂದತಕ್ಕುದಲ್ಲ, ಮತ್ತೆ ಅದಕ್ಕೆ ಆಕಾರವೇ ಇಲ್ಲ. ಸತ್ವರಜ ಸ್ತಮೋಗುಣಗಳಿಗೆ ಅಲ್ಲಿ ಅವಕಾಶವಿಲ್ಲ. ಯೋಗಿಗಳು ಮಾತ್ರ ಆ ವಸ್ತುವನ್ನು ಸಾಕ್ಷಾತ್ಕರಿಸಬಲ್ಲರು.

ಆ ವಸ್ತುವು, ಎಲ್ಲವನ್ನೂ ವ್ಯಾಪಿಸಿ ಎಲ್ಲೆಲ್ಲಿಯೂ ತಾನೇತಾನಾಗಿದೆ. ಅದನ್ನು ನಿರ್ವಿಕಲ್ಪವೆಂತಲೂ, ನಿರಾರಂಭವೆಂತಲೂ (ಕ್ರಿಯಾರಹಿತ ವಾದುದು) ನಿರ್ಮಾಯ (ಮಾಯೆಗೆ ಸಿಲುಕದೆ ಇರುವಂಥದು), ನಿರುಪದ್ರವ (ಯಾವ ಉಪದ್ರವಗಳೂ ಅದನ್ನು ಕೋಟಲೆಗೊಳಿ ಸಲಾರವು), ಅದ್ವಿತೀಯ (ಅದ ಕ್ಕಿಂತಲೂ ಎರಡನೆಯ ವಸ್ತುವಿಲ್ಲ), ಅವಕಾಶ, ಚಿದಾತ್ಮಕ ಎಂದು ಮುಂತಾದ ಸಂಜ್ಞಾ ವಚನಗಳಿಂದಲೂ, ನಾನಾವಿಧವಾಗಿ ಯೋಗಿಗಳು ಊಹಿಸಬಲ್ಲರು.

‘ಅಂಥ ಪರಬ್ರಹ್ಮವಸ್ತುವು ಜಗತ್ತಿನಲ್ಲಿ ಬಹುಕಾಲ ನಿಶ್ಚಲವಾಗಿತ್ತು. ಬಹು
ಕಾಲದ ನಂತರ ಕ್ರಿಯಾಶೀಲವಾಗುವ ಇಚ್ಛೆಯಾಯಿತು. ನಿಷ್ಕ್ರಿಯವಾಗಿದ್ದ ಪರಬ್ರಹ್ಮವಸ್ತುವು. ತನ್ನ ಲೀಲಾಮಾತ್ರದಿಂದಲೇ ತನ್ನ ಶರೀರವನ್ನು ಸೃಷ್ಟಿಸಿತು. ಆ ಶರೀರವು ಸರ್ವೈಶ್ವರ್ಯಗುಣಗಳಿಂದ ಕೂಡಿತ್ತು. ಸರ್ವಜ್ಞಾನಮಯವಾದು ದಾಗಿತ್ತು. ಮಂಗಳಮಯವಾಗಿತ್ತು. ಆ ಬ್ರಹ್ಮವಸ್ತು ಮೂರ್ತಿಯು ಎಲ್ಲೆಡೆಯಲ್ಲೂ ಇರುವಂಥದ್ದಾಗಿತ್ತು. ಸರ್ವರೂಪವಾಗಿತ್ತು. ಎಲ್ಲವನ್ನೂ ಸೃಷ್ಟಿ ಮಾಡುವಂಥ ಮತ್ತು ಎಲ್ಲರಿಂದಲೂ ನಮಸ್ಕರಿಸಲ್ಪಡುವಂಥದ್ದಾಗಿತ್ತು. ಎಲ್ಲಕ್ಕೂ ಮೊದಲನೆಯ ದಾಗಿಯೂ, ಎಲ್ಲವನ್ನೂ ಕೊಡುವಂಥದ್ದೂ, ಎಲ್ಲ ರೀತಿಯ ಸಂಸ್ಕಾರರೂಪ ವಾದುದೂ ಆಗಿತ್ತು‘ ಅಂತ ನಾರದನಿಗೆ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT