ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ ಅಂಕಣ: ಶೀಘ್ರಸ್ಖಲನಕ್ಕೆ ಪರಿಹಾರವೇನು?

Published 23 ಡಿಸೆಂಬರ್ 2023, 0:40 IST
Last Updated 23 ಡಿಸೆಂಬರ್ 2023, 0:40 IST
ಅಕ್ಷರ ಗಾತ್ರ

ನನಗೆ 35ವರ್ಷ, ನನ್ನ ಮಡದಿ 30ವರ್ಷ.  3ತಿಂಗಳ ಹಿಂದೆ ಮದುವೆಯಾಗಿದ್ದು ನನ್ನ ಹೆಂಡತಿ ದಪ್ಪಗಿದ್ದಾಳೆ.  ಲೈಂಗಿಕ ಕ್ರಿಯೆಯ ನಂತರ ಬೇಗನೆ ವೀರ್ಯ ಸ್ಖಲನವಾಗುತ್ತದೆ. ಏನು ಮಾಡಲಿ?

ನಿಮಗಾಗುತ್ತಿರುವುದು ಶ್ರೀಘ್ರಸ್ಖಲನ. ಇದು ಅತಿ ಸಾಮಾನ್ಯ. ನಿಮ್ಮ ಹೆಂಡತಿ ದಪ್ಪಗಾಗಿರುವುದಕ್ಕೆ ಇದಕ್ಕೂ ಸಂಬಂಧವಿಲ್ಲ. ಯೋನಿ ಪ್ರವೇಶಕ್ಕೂ ಮೊದಲೇ ಅಥವಾ ಯೋನಿ ಪ್ರವೇಶಿಸುತ್ತಲೇ ಸ್ಖಲನವಾಗುವುದು. ಇದಕ್ಕೆ ಮುಖ್ಯವಾಗಿ ನಿಮ್ಮಲ್ಲಿರುವ ಮಾನಸಿಕ ಆತಂಕ ಕಾರಣವಾಗಿರಬಹುದು. ನಿಮಗೆ ಹೊಸದಾಗಿ ಮದುವೆಯಾಗಿರುವುದರಿಂದ ಹೊಸ ಅನುಭವ, ಹೊಸಹುರುಪು, ಉದ್ರೇಕ, ಸಂಗಾತಿಯನ್ನು ಸಂತೋಷಪಡಿಸುವ ಹಂಬಲ ಹಾಗೂ ಆತಂಕಗಳು ಶ್ರೀಘ್ರಸ್ಖಲನಕ್ಕೆ ಎಡೆಮಾಡಬಹುದು. ನೀವು ಯಾವುದೇ ದುಗುಡ, ಆತಂಕ ನಿರಾಸೆಇಲ್ಲದ ಹಾಗೆ ನೋಡಿಕೊಳ್ಳಿ.

ಸತಿ-ಪತಿಯರಾದ ನಿಮ್ಮಿಬ್ಬರಲ್ಲೂ ಪರಸ್ಪರ ಪ್ರೀತಿ, ಸಹಕರಿಸುವ ಭಾವನೆ ಇರಬೇಕು. ನಿಮ್ಮಿಬ್ಬರಲ್ಲೂ ತೂಕ ಅತಿಯಾಗಿದ್ದರೆ ತೂಕನಿಯಂತ್ರಣ ಮಾಡಿಕೊಳ್ಳಬೇಕು. ಉಸಿರಾಟ ನಿಯಂತ್ರಣದ ಅಭ್ಯಾಸ, ದೇಹ ಸಡಿಲಿಕೆಯ ವ್ಯಾಯಾಮಗಳನ್ನ, ಯೋಗಾಭ್ಯಾಸಗಳನ್ನ ಅಳವಡಿಸಿಕೊಳ್ಳಬೇಕು. ನಿಮಗೆ ಮಧುಮೇಹ ಹಾಗೂ ಇನ್ನಿತರ ದೈಹಿಕ ಸಮಸ್ಯೆಗಳಿದ್ದಲ್ಲಿ ಆ ಬಗ್ಗೆ ಸೂಕ್ತ ತಪಾಸಣೆಗೊಳಗಾಗಿ. ಕೆಗಲ್ಸ್ ವ್ಯಾಯಾಮ ಮಾಡುವುದರಿಂದಲೂ ಪುರುಷರು ತಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳಬಹುದು. ನಿಮ್ಮಿಬ್ಬರಲ್ಲಿಯೂ ಏಕಾಂತ ವಾತಾವರಣ, ಪರಸ್ಪರ ನಿರೀಕ್ಷೆ, ಕಾತರ ಪರಸ್ಪರ ಗೌರವ ಭರವಸೆಗಳು, ಪ್ರೀತಿ-ಪ್ರೇಮ ವ್ಯಕ್ತಪಡಿಸುತ್ತಿರುವುದು ಇವೆಲ್ಲವೂ ಉತ್ತಮ ಲೈಂಗಿಕಕ್ರಿಯೆಗೆ ಪೂರಕ ವಾತಾವರಣ ಸೃಷ್ಟಿಸುತ್ತವೆ.

ಎಲ್ಲಕ್ಕಿಂತ ಮೊದಲು ನೀವು ಹೀಗೆಯೇ ಲೈಂಗಿಕ ಕ್ರಿಯೆ ಆಗಬೇಕು ಎಂಬ ಧೋರಣೆ, ಆತಂಕ ಬಿಡಿ. ಸೂಕ್ತ ತಪಾಸಣೆ ಹಾಗೂ ಆಪ್ತಸಮಾಲೋಚನೆಗೆ ಒಳಗಾಗಲು ಹಿಂಜರಿಯಬೇಡಿ. ತಜ್ಞರ ಸಲಹೆ ಪಡೆಯಿರಿ. ಹಸ್ತಮೈಥುನ ಮಾಡಿಕೊಳ್ಳುವುದು ಶ್ರೀಘ್ರಸ್ಖಲನ ತಡೆಗೆ ಸಹಕಾರಿಯಾಗಬಹುದು. ಸ್ತ್ರೀ ಮೇಲಿರುವ ಭಂಗಿಯನ್ನು ಅನುಸರಿಸಿದರೆ ಸಹಾಯವಾಗಬಹುದು.  ಶೀಘ್ರಸ್ಖಲನ ಚಿಕಿತ್ಸೆಗಾಗಿ ತಜ್ಞರ ಸಲಹೆಯ ಮೇರೆಗೆ ಅನುಸರಿಸಿದಾಗ  ಸಮಸ್ಯೆ ಪರಿಹಾರವಾಗಬಲ್ಲದು.  

ಪ್ರ

ನನ್ನ ವಯಸ್ಸು 30, ಹೆಂಡತಿ 24. ಮದುವೆಯಾಗಿ ಮೂರು ವರ್ಷವಾಯಿತು. ಮಕ್ಕಳಿಲ್ಲ. ಪ್ರೀತಿಯಿಂದ ಇದ್ದೇವೆ. ಯಾವುದೇ ಸಮಸ್ಯೆಯಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಆದರೂ ಮಕ್ಕಳಾಗುತ್ತಿಲ್ಲ. 

ಉತ್ತರ: ನಿಮ್ಮಿಬ್ಬರಿಗೂ ಹೆಚ್ಚು ವಯಸ್ಸಾಗಿಲ್ಲ. ಇನ್ನೂ ಮಕ್ಕಳಾಗಲು ಹೆಚ್ಚಿನ ಸಮಯ, ಅವಕಾಶಗಳು ಇವೆ. ನಿರಾಶರಾಗದೇ   ಪ್ರಯತ್ನವನ್ನು ಮುಂದುವರೆಸಿ. ಪುರುಷರ ವೀರ‍್ಯಾಣುಗಳ ಪ್ರಮಾಣ, ಗುಣಮಟ್ಟ, ಚಲನಾಸಾಮರ್ಥ್ಯ ಎಲ್ಲವೂ ಸರಿಯಿದ್ದು ಮಹಿಳೆಯಲ್ಲಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಿ, ಆ ಸಂದರ್ಭದಲ್ಲಿ ಲೈಂಗಿಕ ಸಂಪರ್ಕವಾಗಿ ವೀರ‍್ಯಾಣುವೂ ಅಂಡಾಣುವಿನ ಹೊರಕವಚವನ್ನ ಬೇಧಿಸಿ ಅಂಡಾಣುವಿನ ಹೊರ ಸಂಪರ್ಕವನ್ನು ಸಾಧಿಸಿ ಫಲಿತಗೊಂಡು ಗರ್ಭಶಯದಲ್ಲಿ ಚಲಿಸಿ ಅಲ್ಲಿ ಅಂಟಿಕೊಂಡು ಭ್ರೂಣ ಬೆಳೆಯುತ್ತಾ ಹೋಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆ ಹಾಗೂ ಪುರುಷರಲ್ಲಿ ನಿರ್ದಿಷ್ಟ ಕಾರಣಗಳನ್ನು ಹೇಳಲು ಸಾಧ್ಯವಿಲ್ಲವಾದರೂ ಕೆಲವೊಮ್ಮೆ ಅಂಡಾಣು ಮತ್ತು ವೀರ‍್ಯಾಣುವಿಗಳ ಗುಣಮಟ್ಟ ಕಡಿಮೆ ಇರಬಹುದು. ಮದ್ಯಪಾನ, ಧೂಮಪಾನಚಟಗಳಿಂದಲೂ, ಚಟುವಟಿಕೆರಹಿತ ಅನಾರೋಗ್ಯಕರ ಜೀವನಶೈಲಿಯಿಂದಲೂ ಮಕ್ಕಳಾಗಲು ಸಮಸ್ಯೆಯಾಗಬಹುದು.

ಅಂಡಾಣು ಬಿಡುಗಡೆಯಾಗುವ ಸಂದರ್ಭದಲ್ಲಿ ಅಂದರೆ ಪ್ರತಿತಿಂಗಳು ಸರಿಯಾಗಿ ಮುಟ್ಟಾಗುತ್ತಿರುವವರಲ್ಲಿ ಮುಟ್ಟಾದ ದಿನದಿಂದ 8ರಿಂದ 18ದಿನಗಳ ವರೆಗೆ (ಈ ದಿನಗಳನ್ನ ಋತುಫಲಪ್ರದ ದಿನಗಳು ಎನ್ನುತ್ತೇವೆ.) ಲೈಂಗಿಕ ಸಂಪರ್ಕ ಸರಿಯಾಗಿ ಆಗದೇ ಇದ್ದಾಗಲೂ ಕೂಡಾ ಬಂಜೆತನ ಉಂಟಾಗಬಹುದು. ನಿಮ್ಮ ಮಡದಿಯಲ್ಲಿ ಯಾವುದೇ ರೀತಿಯ ಜೈವಿಕ ಕಾರಣಗಳಾದ ನಿರ್ಬಂಧಿತ ಗರ್ಭನಾಳಗಳು, ಎಂಡೋಮೆಟ್ರಿಯೋಸಿಸ್, ಪಿ.ಸಿ.ಒ.ಎಸ್‌ನಂತಹ ಸಮಸ್ಯೆಯಿಂದ ಹಾರ್ಮೋನು ವ್ಯತ್ಯಾಸವಾಗಿ ಅಂಡಾಣು ಬಿಡುಗಡೆ ಸರಿಯಾಗಿ ಆಗದಿರುವುದು ಇತ್ಯಾದಿ ಸಮಸ್ಯೆಗಳು ಇಲ್ಲವಾದಲ್ಲಿ, ನಿಮ್ಮಲ್ಲಿ ವೀರ್ಯಾಣುಗಳ ಸಂಖ್ಯೆ, ಗಾತ್ರ, ಸ್ವರೂಪ ದೋಷಗಳಿಲ್ಲದ್ದಿದ್ದಲ್ಲಿ ಚಿಂತಿಸಬೇಕಿಲ್ಲ. ಎಲ್ಲದಕ್ಕಿಂತ ಮುಖ್ಯ ಆಶಾಭಾವನೆಯಿಂದ ಇರುವುದು. ಎಷ್ಟೋ ಜನರಿಗೆ ಮಕ್ಕಳಾಗಿಲ್ಲ ಎಂದು ಮಗು ದತ್ತು ತೆಗೆದುಕೊಂಡ ನಂತರ ಮನಸ್ಸು ನಿರಾಳವಾಗಿ ಅವರಿಗೆ ಮಕ್ಕಳಾದ ಉದಾಹರಣೆಗಳು ಸಾಕಷ್ಟಿವೆ. ಆತಂಕ ಬಿಡಿ ಪ್ರಯತ್ನ ಮುಂದುವರಿಸಿ. 

<div class="paragraphs"><p>&nbsp;</p></div>

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT