ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡನಾಡು, ಇನ್ನು ಚಿನ್ನದ ಬೀಡು

ಅಕ್ಷರ ಗಾತ್ರ

ಪೆಕರ ಬಹಳ ಉದ್ವೇಗದಲ್ಲಿದ್ದ. ಏನಾದರೂ ಮಾಡಿ ಇವತ್ತು ಅಯ್ಯ ಅವರನ್ನು ಭೇಟಿ ಯಾಗಿ ಎಲ್ಲ ವಿಷಯ ಹೇಳಿಬಿಡಬೇಕು ಎನು್ನವ ಆತುರ, ಕಾತುರದಲ್ಲಿ ತುಡಿಯುತ್ತಿದ್ದ. ಆದರೆ, ಮೈಸೂರು ದಸರಾವನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ ಸಂತೃಪ್ತಿಯಲ್ಲಿ ಅಯ್ಯ ಅವರು ಮುಳುಗಿ ಹೋಗಿದ್ದರಿಂದ ಅವರ ಭೇಟಿ ಕಷ್ಟ ಕಷ್ಟ ಎನ್ನುವಂತಿತ್ತು.

ದಸರಾ ಟೈಂನಲ್ಲಿ ಮೈಸೂರಿನಲ್ಲಿ ಒಂದು ವಾರ ಕಳೆದಿದ್ದರಿಂದ ರಾಜಧಾನಿಯಲ್ಲಿ ಬಹಳ ಕೆಲಸ ಪೆಂಡಿಂಗ್‌ ಇದೆ. ಅಲ್ಲೇ ಪತ್ರಕರ್ತರೊಂದಿಗೆ ಸಾಕಾಗುವಷ್ಟು ಮಾತನಾಡಿದ್ದಾರೆ ಯಾರ್‍ನೂ ಬಿಡಬೇಡ ಅಂತ ಹೇಳಿದ್ದಾರೆ ಎಂದು ಅಯ್ಯ ಅವರ ಆಪ್ತ ಕಾರ್ಯದರ್ಶಿ ಪರಿಪರಿಯಾಗಿ ವಿನಂತಿಸಿಕೊಂಡರೂ, ಪೆಕರ ಜಗ್ಗಲಿಲ್ಲ.

‘ನಾನೂ ಸರ್ಕಾರಿ ಕೆಲಸಕ್ಕೇ ಬಂದಿರೋದು, ಅಯ್ಯ ಅವರಿಗೆ ಅರ್ಜೆಂಟಾಗಿ ಒಂದು ವಿಷ್ಯ ಹೇಳೋದಿದೆ. ಬಹಳ ತುರ್ತು ಅಂತ ಹೇಳಿ, ಲೋಕ ಕಲ್ಯಾಣದ ವಿಷಯ. ಈ ವಿಷಯವನ್ನು ನಾನು ನಮ್ಮ ಸಂಪಾದಕರಿಗೂ ಹೇಳಿಲ್ಲ. ಗೊತ್ತಾ? ಅಷ್ಟೊಂದು ಗೋಪ್ಯ ಸಂಗತಿ ಇದು. ಇಡೀ ರಾಜ್ಯಾನೇ ಖುಷಿ ಪಡೋ ಅಂತ ವಿಷಯ, ಅಯ್ಯ ಅವರ್‍ನ ಬಿಟ್ರೆ ಇದನ್ನ ಯಾರ ಹತ್ರಾನೂ ಹೇಳೋಕೆ ಆಗಲ್ಲ.

ಸುಮ್‌ಸುಮೆ್ನ ಪೆಕರ ಈ ರೀತಿಯೆಲ್ಲಾ ಬರಲ್ಲ ಗೊತ್ತಾಯ್ತಾ? ಅವರ ಕೆಲಸಾನೇ ಇದು, ಹೋಗಿ ಹೇಳಿ, ಬಂದ ವಿಷಯ ಹೇಳ್ದೆ ನಾನಿಲ್ಲಿಂದ ಹೋಗಲ್ಲ’ ಎಂದು ಪೆಕರ ಆ ಉದ್ವೇಗದಲ್ಲೂ ರೋಫು ಹೊಡೆದ. ಗತ್ಯಂತರವಿಲ್ಲದೆ ಆಪ್ತ ಕಾರ್ಯದರ್ಶಿ, ಅಯ್ಯ ಅವರಿಗೆ ವಿಷಯ ತಿಳಿಸಿದ.

‘ಅದೇನ್ರಿ ಅಷ್ಟೊಂದು ಹಟ?! ಪೆಕರ ಅಷ್ಟೊಂದು ಹಟ ಹಿಡಿದಿದ್ದಾರೆ ಅಂದ್ರೆ ಏನೋ ವಿಷಯ ಇರುತ್ತೆ. ಅವರು ಹಂಗೆಲ್ಲಾ ರಾಜ್ಯೋತ್ಸವ ಪ್ರಶಸಿ್ತಗೆ, ಅಕಾಡೆಮಿ ನೇಮಕಕ್ಕೆ ಯಾರನ್ನಾದ್ರೂ ಶಿಫಾರಸು ಮಾಡೋಕೆ ಬರೋವ್ರಲ್ಲ. ಏನೋ ಘನಂದಾರಿ ವಿಷ್ಯಾನೇ ಇರಬೇಕು, ಕರ್‍ಕಂಬನ್ನಿ ಒಳೀಕೆ ಅದೇನ್‌ ಕೇಳೇ ಬಿಡೋಣ’ ಎಂದು ಅಯ್ಯ ಅವರು ಅಪ್ಪಣೆ ಕೊಡಿಸಿದರು.

ಪೆಕರ, ಅವಸರದಿಂದ ಅಯ್ಯ ಅವರ ಕೊಠಡಿಗೆ ನುಗ್ಗಿದ. ‘ಬನ್ನಿ, ಪೆಕರ ಅವರೇ, ನೀವು ಐದು ರಾಜ್ಯಗಳ ಚುನಾವಣಾ ಕವರೇಜ್‌ಗೆ ಹೋಗಿದ್ದೀರಿ ಅಂದ್ಕೊಂಡಿದ್ದೆ, ಇನ್ನು ಇಲ್ಲೇ ಇದ್ದೀರಾ, ಬಹಳ ಉದ್ವೇಗದಲ್ಲಿಯೂ ಇದ್ದೀರಿ? ಯಾಕೆ ಟೆನ್ಶನ್‌? ನನ್ನ ತರ ಕೂಲ್‌ ಆಗಿ ಇರಿ, ನೋಡಿ, ನನಗೆ ಮೂಗುದಾರ ಹಾಕೋಕೆ ಸಮನ್ವಯ ಸಮಿತಿ ರಚಿಸಿದ್ರು ನಾನು ಟೆನ್ಶನ್‌ ಮಾಡ್ಕೊಳ್ಳಿಲ್ಲ, ಇಪ್ಪತ್ತು ಶಾಸಕರು ಹೈ ಕಮಾಂಡ್‌ಗೆ ಕಂಪ್ಲೇಂಟ್‌ ಕೊಟ್ರು ನಾನು ಅಲ್ಲಾಡಲಿಲ್ಲ. ಕೆಲವು ಮಠಪತಿಗಳೆಲ್ಲಾ ಸೇರಿ ಶಾಪ ಹಾಕೋದಿಕ್ಕೆ ಶುರುಮಾಡಿದ್ರು, ಶಿವಾ ಅಂತ ಸುಮ್ನಿದ್ದೆ...... ಏನ್‌ ಆಗೋಯು್ತ? ಏನೂ ಆಗಲ್ಲ.

ಸುಮ್‌ಸುಮೆ್ನ ಟೆನ್ಶನ್‌ ಮಾಡ್ಕೊ ಬಾರ್‍ದು, ಈಗ ಹೇಳಿ ಏನ್‌, ಬಂದಿದ್ದು? ಏನೋ ಅರ್ಜೆಂಟ್‌ ಅಂತ ಹೇಳಿದ್ರಂತೆ?’
ಅಯ್ಯ ಅವರು ಫೈಲುಗಳನ್ನು ತಿರುವಿ ಹಾಕುತ್ತ ನಿಧಾನವಾಗಿ ಕೇಳಿದರು. ‘ಸಾರ್‌, ಚಾಮರಾಜನಗರಕ್ಕೆ ಹೋಗಿ ಬಂದ ಮೇಲೆ ನಿಮ್ಮ ಅದೃಷ್ಟ ಖುಲಾಯಿಸಿದೆ.

ಅಲ್ಲಿಗೆ ಹೋದ್ರೆ, ಅಧಿಕಾರ ಹೋಗುತ್ತೆ ಅಂತಾರೆ, ನಿಮಗೆ ಅದೃಷ್ಟದ ಬಾಗಿಲೇ ತೆರೆದಂತಾಗಿದೆ ಸಾರ್‌, ನಮ್ಮ ರಾಜ್ಯದ ಎಲ್ಲ ಕಡೆ ಕೋಟೆ ಕೊತ್ತಲಗಳ ಅವಶೇಷಗಳ ಕೆಳಗಡೆ ಐದು ಸಾವಿರ ಟನ್‌ ಚಿನ್ನ ಇದೆ ಅಂತ ವಿಜಯನಗರದ ಬುಕ್ಕ ರಾಜರು ನನ್ನ ಕನಸಿನಲ್ಲಿ ಬಂದು ಹೇಳಿದ್ದಾರೆ ಸಾರ್‌, ದಯವಿಟ್ಟು ಅದನ್ನು ಹೊರಕ್ಕೆ ತೆಗೆ ಯುವ ಕೆಲಸ ಆರಂಭಿಸಿ ಸಾರ್‌, ಅದು ಸಿಕ್ಕಿ ಬಿಟ್ಟರೆ ನಾವು ಉತ್ತರಪ್ರದೇಶಕ್ಕಿಂತಲೂ ರಿಚ್‌ ಸ್ಟೇಟ್‌ ಆಗುತ್ತೇವೆ. ಕರ್ನಾಟಕ ಚಿನ್ನದ ನಾಡು ಆಗುವುದರಲ್ಲಿ ಸಂಶಯವೇ ಇಲ್ಲ’ ಪೆಕರ ಉತ್ಸಾಹದಿಂದ ತನ್ನ ಕನಸಿನ ಸ್ವರೂಪವನ್ನು ವಿವರಿಸಲಾರಂಭಿಸಿದ.

ಫೈಲುಗಳನ್ನು ತಿರುವಿಹಾಕುತ್ತಿದ್ದ ಅಯ್ಯ ಅವರು ಒಂದು ಕ್ಷಣ ಬೆಚ್ಚಿಬಿದ್ದರು. ಫೈಲುಗಳನ್ನು ಪಕ್ಕಕ್ಕಿಟ್ಟು, ಕನ್ನಡಕ ತೆಗೆದು ಸೈಡಿಗಿಟ್ಟು, ಹೆಗಲ ಮೇಲಿದ್ದ ಟವೆಲ್ಲನ್ನು ಒದರಿ, ಮತ್ತೆ ಹೆಗಲಿಗೇರಿಸಿ, ‘ಏನ್‌ ಹೇಳಿದ್ರಿ?’ ಎಂದು ಪ್ರಶಿ್ನಸಿ, ಪೆಕರನನ್ನೇ ನಿಟ್ಟಿಸಿದರು.

‘ಅದೇ ಸಾರ್‌, ನಮ್ಮ ರಾಜ್ಯದಲ್ಲಿ ಬಹಳ ಕೋಟೆ ಕೊತ್ತಳಗಳಿವೆ. ಎಲ್ಲದರ ಕೆಳಗೂ ಗೋಲು್ಡ ತುಂಬಿ ತುಳುಕಿ್ತದೆ, ಅದನ್ನೆಲ್ಲಾ ಎತ್ಕೊಂಡು ನಮ್‌ ರಾಜ್ಯಾನ ಸುಭಿಕ್ಷ ಮಾಡಿ ಅಂತ ನನ್ನ ಕನಸಿನಲ್ಲಿ ರಾಜರು, ಪಾಳೇಗಾರರು ದಿನಾ ಬಂದು ಹೇಳ್ತಾ ಇದಾರೆ....’

‘ಪೆಕರಾ ಅವರೇ, ಇಂಥದ್ದನ್ನೆಲ್ಲಾ ನಂಬಕ್ಕೆ ನಾನು ಕಿವೀಲಿ ಹೂ ಇಟ್ಕೊಂಡಿದ್ದೀನಾ? ಯಾವನೋ ಸಾಧು ಹೇಳ್ದಾ ಅಂತಾ ಮುಲಾಯಂ, ಅಖಿಲೇಶು ನೆಲ ಅಗೀತಾರೆ ಅಂತ ನಾನೂ ಅದನ್ನೆಲ್ಲಾ ಮಾಡಾಕಾಯ್ತದ? ಚಿನ್ನದ ಸಿಂಹಾಸನ, ಚಿನ್ನದ ಅಂಬಾರಿನೇ ಇಟ್ಕೊಂಡಿರೋ ರಾಜ್ಯ ನಮ್ದು, ನೋಟಿನ ಬೆಡ್‌ಮೇಲೆ ಮಲಗಿ ಎಂಜಾಯ್‌ ಮಾಡೋ ದೇಶ ನಮು್ದ, ಸಿ್ವಸ್‌ ಬ್ಯಾಂಕ್‌ನಲ್ಲೇ 35 ಲಕ್ಷ ಕೋಟಿ ರೂಪಾಯಿ ಕಳ್ಳಹಣ ಇಟ್ಟು ತಮಾಷೆ ನೋಡ್ತಾ ಇರೋ ಜನ ಇರುವ ಕಂಟ್ರಿ ಇದು. ನಾನು ಮೌಢ್ಯಗಳನ್ನು ತೊಲಗಿಸೋಕೆ ಪಣ ತೊಟ್ಟಿದ್ದೀನಿ, ಮೂಢ ನಂಬಿಕೆ ವಿರೋಧಿ ಕಾನೂನು ತರಬೇಕು ಅನ್ನೋ ಯೋಚ್ನೆಯಲ್ಲಿದ್ದೇನೆ. ಅಂಥಾದ್ರಲ್ಲಿ, ಕನಸು ನಂಬ್ಕೊಂಡು ನಗೆಪಾಟಲು ಆಗೋಕೆ ಆಗುತ್ತಾ?’ ಅಯ್ಯ ಅವರು ಸಿಡಿಮಿಡಿಗೊಂಡರು.

‘ಆದ್ರೂ ಒಂದು ಚಾನ್ಸ್ ತಗೋಬಹುದಲ್ಲಾ ಸಾರ್‌, ಅಷ್ಟೊಂದು ಚಿನ್ನ ಸಿಕ್ಕರೆ, ನಿಮ್ಮ ಯೋಜನೆಗಳು ಇನ್ನು ಮಜಭೂತಾಗಿ ನಡೆ ಯುತ್ತಲ್ಲಾ? ನೆಲ ಅಗೆಯುವುದರಿಂದ ನಿಮಗೆ, ಆಗುವ ತೊಂದರೆಯಾದರೂ ಏನು? ಸಿಕ್ಕರೆ ಚಿನ್ನ, ಇಲ್ಲದಿದ್ದರೆ ಮಣ್ಣು! ಅಷ್ಟೇ ತಾನೇ?’ ಪೆಕರ ತನ್ನ ಕನಸನ್ನು ಕಾರ್ಯಗತಗೊಳಿಸುವ ಸಿದ್ಧತೆಯಲ್ಲೇ ಇದ್ದ.

‘ಚಿನ್ನ ತಕೊಂಡು ಏನ್‌ ಮಾಡ್ತೀರಾ? ಜನರಿಗೆ ಒಂದ್ರೂಪಾಯಿಗೆ ಒಂದ್‌ ಕೆಜಿ ಚಿನ್ನ ಕೊಡೋಕಾಗುತ್ತಾ? ನಾನು ‘ಅನ್ನಭಾಗ್ಯ’ ಯೋಜನೆಯಲ್ಲಿ ಸಾಮಾನ್ಯ ಜನರಿಗೆ ಒಂದು ರೂಪಾಯಿಗೆ ಒಂದ್‌ ಕೆಜಿ ಅಕಿ್ಕ ಕೊಡ್ತಾ ಇದೀನಿ ನೋಡ್ರಿ, ಅದೇ ಚಿನ್ನದಂಥ ಯೋಜನೆ. ಅದರ ಮುಂದೆ ಇನ್ಯಾವ ಗೋಲ್‌್ಡ ಖಜಾನೆ?’ ಅಯ್ಯ ಅವರು ತಿರಸ್ಕಾರದಿಂದಲೇ ಹೇಳಿದರು.

‘ನೀವು ಸಿಎಮ್ಮಾಗಿ ಅಧಿಕಾರ ತಕೊಂಡ ತಕ್ಷಣ, ರೈತರಿಗೆ ಭಾರೀ ಯೋಜನೆ ಅನೌನ್‌್ಸ ಮಾಡಿದ್ರಿ, ಅನ್ನಭಾಗ್ಯ, ರಾಗಿಭಾಗ್ಯ, ಜೋಳಭಾಗ್ಯ, ಕ್ಷೀರ ಭಾಗ್ಯ, ತಾಳಿಭಾಗ್ಯ, ಶಾದಿಭಾಗ್ಯ, ಹೀಗೆ ನಾನಾ ಭಾಗ್ಯಗಳನ್ನು ಕರುಣಿಸಿ, ಬಡವರ ಮನೆ ಬೆಳಗಿಸಿದಿ್ರ. ರಾಷ್ಟ್ರದಲ್ಲಿ ಆಹಾರಭದ್ರತೆ ಅನ್ನೋ ಹೆಸರಲ್ಲಿ 80 ಕೋಟಿ ಜನರಿಗೆ ಆಹಾರ ಖಾತರಿ ಮಾಡಿ ಓಟುಗಟ್ಟಿ ಮಾಡ್ಕಂಡ್ರಿ, ನಿಮ್ತಲೇಲಿ ಇನ್ನೂ ಐಡಿಯಾಗಳಿರಬೇಕಲ್ಲ ಸಾರ್‌, ಅದಕ್ಕೆಲ್ಲಾ ದುಡೆ್ಡಲ್ಲಿಂದ ತರ್‍ತೀರಿ? ಸುಮ್ನೆ ಕೋಟೆ ಕೆಳಗೆ ಹಳ್ಳ ತೋಡಿ ಚಿನ್ನ ತಕ್ಕೊಂಡು ಇನ್ನೊಂದಷ್ಟು ‘ಭಾಗ್ಯ’ ಕರುಣಿಸಿ ಸಾರ್‌. ಜನ ಈಗ್ಲೇ ‘ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ’ ಎಂದು ಜನ ನಾಡಗೀತೆ ತರಹ ಹಾಡ್ತಾ ನಿಮ್ಮ ಗುಣಗಾನ ಮಾಡ್ತಾ ಇದಾರೆ, ಚಿನ್ನ ಸಿಕಿ್ಕಬಿಟ್ರೆ, ನಿಮ್‌ ಸೀಟು ಇನ್ನೂ ಗಟ್ಟಿ ಅಲ್ಲವೇ?’ ಪೆಕರ ಚಿನ್ನದ ಪರಿಣಾಮವನ್ನು ವಿವರಿಸ ಲಾರಂಭಿಸಿದ.

‘ನಾನು ಇಂಥದ್ದಕ್ಕೆಲ್ಲಾ ಆಸೆಪಡೋನಲ್ಲ ಪೆಕರ ಅವರೇ, ಪಂಚೆ, ಜುಬ್ಬ, ಟವೆಲ್ಲು ಬಿಟ್ರೆ ನನಗೆ ಬೇರೇನೂ ಬೇಡ. ಇದೆಲ್ಲಾ ದೊಡ್ಡೇಗೌಡ್ರಿಗೆ ಬುಟ್ಬುಟ್ಟಿದ್ದೀನಿ. ನಾನು ಎಲೆಕ್ಷನ್‌ನಲ್ಲಿ ಗೆದ್ದು, ಯಾವಾಗ ಸಿಎಂ ಆದ್ನೋ ಆಗ್ಲೇ ಚಿನ್ನದ ನಿಧೀನಾ ರಾಜ್ಯದ ಎಲ್ಲಾ ಕಡೆ ತೋಡಿ, ತೆಗೆದು ಕೊಂಡು ಬಂದು ಕ್ಯಾಬಿನೆಟ್‌ನಲ್ಲಿ ಇಟ್ಕೊಂಬಿ ಟ್ಟಿದ್ದೀನಿ. ನನಗೆ ಅಷ್ಟು ಸಾಕು’ ಎಂದು ಅಯ್ಯ ಅವರು ನಿಗೂಢವಾಗಿ ಹೇಳಿದರು.

‘ಆಗ್ಲೇ ತೋಡಿ, ತೆಗೆದುಕೊಂಡು ಬಂದು ಬಿಟ್ರಾ? ಹೇಗೆ? ಹೇಗೆ?!’ ಪೆಕರ ಆಶ್ಚರ್ಯ ತಡೆದುಕೊಳ್ಳಲಾರದೆ ಕೇಳಿದ.
‘ನಿಮಗೆ ಗೊತ್ತೇ ಇದೆ, ಮೈಸೂರು, ನಂಜನಗೂಡು ಕಡೆಯಿಂದ ಪ್ರಸಾದ ತಂದಿದ್ದೀನಿ, ಶಿರಾದಿಂದ ಚಂದ್ರನ್ನ ತಂದಿದ್ದೀನಿ, ಸರ್ವಜ್ಞ ನಗರದಿಂದ ಜಾರ್ಜ್‌ ತಂದಿದ್ದೀನಿ, ಮಂಡ್ಯದಿಂದ ರೆಬೆಲ್‌ ಹಿಡ್ಕೊಂಬಂದಿದ್ದೀನಿ. ನನ್ನ ಚಿನ್ನದ ಗಣಿ ಇಲ್ಲೇ ಇದೆ ಕಣ್ರೀ.... ನನ್ನ ಸಂಪುಟದಲ್ಲೇ ಇಂತಹ ‘ಅಪ್ಪಟ ರತ್ನ’ ಗಳಿರುವಾಗ ನಾನ್ಯಾಕೆ ಕೋಟೆ ಕೊತ್ತಳ ತೋಡ್ಲಿ? ನಾನು ದುಡಿದು ಬದುಕಬೇಕು ಎಂದು ಹೇಳುವವನು. ಸುಮ್ನೆ ಬಂದ ಆಸ್ತಿ ಯಾರಿಗೂ ಬೇಡ.... ಈ ಕನಸು, ಗಿನಸು ನಾನು ನಂಬಲ್ಲ, ನಡೀರಿ’ ಎಂದು ಅಯ್ಯ ಅವರು ಖಡಕ್‌ ಆಗಿಯೇ ಉತ್ತರಿಸಿದರು.

ಕಲ್ಲಿದ್ದಲು ಹಗರಣದಲ್ಲಿ ಮುಖಕ್ಕೆ ಮಸಿ ಬಳಿದುಕೊಂಡಿರುವ ಪಿಎಮ್‌ ತರಹ ಬಾಡಿದ ಮುಖ ಹಾಕಿಕೊಂಡು ಪೆಕರ ವಿಧಾನಸೌಧದಿಂದ ಹೊರಬಂದ. ಯಾರೂ ನನ್ನ ಕನಸು ನಂಬುತ್ತಿಲ್ಲ. ಅವಶೇಷಗಳಡಿ ಬಿದ್ದಿರುವ ಕೋಟಿಗಟ್ಟಳೆ ಚಿನ್ನ ಅನ್ಯಾಯವಾಗಿ ಯಾರ ಕಣ್ಣಿಗೂ ಬೀಳದಂತೆ, ಮರೆಯಾಗಿದೆಯಲ್ಲಾ ಇದರ ಸದ್ಬಳಕೆ  ಹೇಗೆ? ಎನ್ನುವ ಚಿಂತೆಯಲ್ಲೇ ಕಚೇರಿ ದಾರಿ ಹಿಡಿದ.

ಸಹೋದ್ಯೋಗಿಗಳು ಪೆಕರನ ಚಿಂತೆಗೆ ಕಾರಣ ಕೇಳಿದರು. ಹೇಳಿಕೊಂಡರೆ ಸ್ವಲ್ಪ  ನಿರಾಳವಾಗ ಬಹುದು ಎಂದು ಪೆಕರ, ಅವರ ಮುಂದೆ ತನ್ನ ಕನಸಿನ ಪ್ರವರ ಬಿಚ್ಚಿದ. ಸ್ನೇಹಿತರೊಬ್ಬರು ಎಚ್ಚರಿಸಿದರು. ಕನಸಿನಲ್ಲಿ ರಾಜ ಬಂದು ಹೇಳಿದ, ಸಾಧು ಹೇಳಿದ ಎಂದೆಲ್ಲಾ ಬೂಸಿ ಬಿಡಬೇಡ ಮಾರಾಯ. ನಿನಗೆ ಹುಚು್ಚ ಹಿಡಿದಿದೆ ಅಂತಾರೆ ಅಷ್ಟೇ ಎಂದು ಸೂಚನೆ ಕೊಟ್ಟರು.

‘ಕರ್ನಾಟಕದಲ್ಲಿರುವ ಎಲ್ಲ ಮಠಗಳ ಸುತ್ತ ಅಗೆದರೆ ಹತ್ತು ಸಾವಿರ ಕೋಟಿಗೂ ಹೆಚ್ಚು ನಗದು, ಚಿನ್ನ ಸಿಗುತ್ತದೆ. ಬಳ್ಳಾರಿ ಸುತ್ತ ತೋಡಿದರೆ ನಲವತ್ತು ಸಾವಿರ ಕೋಟಿಗೂ ಹೆಚ್ಚು ಸಿಗುತ್ತದೆ. ಎಲ್ಲ ಮಾಜಿ ರಾಜಕಾರಣಿಗಳು, ಹಾಲಿ ರಾಜಕಾರಣಿಗಳ ಮನೆ, ತೋಟ ಹೀಗೆ ಎಲ್ಲ ಕಡೆ ಅಗೆದರೆ ಹತ್ತು ಸಾವಿರ ಕೋಟಿ ಟನ್‌ಗೂ ಹೆಚ್ಚು ಚಿನ್ನ ಸಿಗುತ್ತದೆ..... ಇನ್ನು ನಮ್ಮ ನಾಡು ಚಿನ್ನದ ಬೀಡು ಆಗದೆ ಇನ್ನೇನು? ’ ಪೆಕರ ಹೇಳುತ್ತಲೇ ಹೋದ..... ಸುತ್ತ ಇದ್ದವರೆಲ್ಲಾ ತಪ್ಪಿಸಿಕೊಂಡರೆ ಸಾಕು ಎಂದು ಪರಾರಿಯಾಗಿದ್ದರು!
–ಜಿಎಮ್ಮಾರ್.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT