ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತ: ನೀರಸ ವಹಿವಾಟು?

Last Updated 2 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌–ಡಿಸೆಂಬರ್‌ ತ್ರೈಮಾ­­ಸಿ­ಕದಲ್ಲಿ ‘ಜಿಡಿಪಿ’ ಪ್ರಗತಿ ಶೇ4.7ಕ್ಕೆ ಕುಸಿತ ಕಂಡಿದೆ. ಮೂಲ­ಸೌಕರ್ಯ ವಲಯದ ಪ್ರಗತಿ­ಯೂ ಜನವರಿಯಲ್ಲಿ ಶೇ 1.6ಕ್ಕೆ ಇಳಿದಿದೆ. ಈ ಸಂಗತಿ ಈ ವಾರ ಷೇರು­ಪೇಟೆ ವಹಿವಾ­ಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಮಾರು­ಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಟಾಟಾ ಮೋಟಾರ್ಸ್‌, ಮಾರುತಿ ಸುಜುಕಿ ಮತ್ತು ಮಹೀಂದ್ರಾ ಕಂಪೆನಿಗಳ ವಾಹನ ಮಾರಾಟ ಫೆಬ್ರುವರಿಯಲ್ಲಿ ಕುಸಿತ ಕಂಡಿದೆ. ಇದರಿಂದ ವಾಹನ ಉದ್ಯಮ ವಲಯದ ಷೇರು ಮೌಲ್ಯ ಈ ವಾರ ಇಳಿಕೆ ಕಾಣಬಹದು ಎಂದು ಬೊನಾಂಜಾ ಪೋರ್ಟ್‌ಪೊಲಿಯೊ ಸಂಸ್ಥೆ ಹೇಳಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಯಿಂದ ಕಳೆದ ವಾರದಲ್ಲಿ ಸೂಚ್ಯಂಕ ಒಟ್ಟಾರೆ 419 ಅಂಶಗಳಷ್ಟು ಏರಿಕೆ ಕಂಡಿದೆ. 2013ರ ನವೆಂಬರ್‌ 29ರ ನಂತರ ದಾಖಲಾ­ಗಿರುವ ಗರಿಷ್ಠ ಮಟ್ಟ ಇದಾಗಿದೆ.  ಹಣಕಾಸು ಸಚಿವಾಲಯ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ.5.24 ಲಕ್ಷ ಕೋಟಿಯಷ್ಟು ವಿತ್ತೀಯ ಕೊರತೆ ಅಂದಾಜು ಮಾಡಿದೆ. ಆದರೆ, ಹಣ­ಕಾಸು ವರ್ಷದ ಮೊದಲ 10 ತಿಂಗಳ­ಲ್ಲೇ ಈ ಗಡಿ ದಾಟಲಾಗಿದೆ. ಚಾಲ್ತಿ ಖಾತೆ ಕೊರತೆಯೂ (ಸಿಎಡಿ) ಹೆಚ್ಚಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಜಿಡಿಪಿ ಪ್ರಗತಿ ಮತ್ತು ವಿತ್ತೀಯ ಕೊರತೆ ಅಂಕಿ ಅಂಶಗಳು ಈ ವಾರ ಷೇರುಪೇಟೆ ವಹಿವಾಟಿನ ಗತಿ ನಿರ್ಧ­ರಿಸಲಿವೆ’ ಎಂದು ರೆಲಿಗೇರ್‌ ಸೆಕ್ಯುರಿ­ಟೀಸ್‌ನ ರಿಟೇಲ್‌ ವಿಭಾಗದ ಮುಖ್ಯಸ್ಥ ಜಯಂತ್‌ ಮಂಗಳೀಕ್‌ ಅಭಿಪ್ರಾಯ­ಪಟ್ಟಿದ್ದಾರೆ. 

‘ಬಿಎಸ್‌ಇ’ ಈ ವಾರ 20,850 ಅಂಶಗಳಿಂದ 21,500 ಅಂಶಗಳ ನಡುವೆ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 6,150 ರಿಂದ 6350 ಅಂಶಗಳ ನಡುವೆ ವಹಿವಾಟು ನಡೆಸ­ಬಹುದು ಎಂದು ವೆರಾಸಿಟಿ ಬ್ರೊಕಿಂಗ್‌  ಸಂಸ್ಥೆಯ ಜಿಗ್ನೇಶ್‌ ಚೌಧರಿ ಹೇಳಿದ್ದಾರೆ.

ಎಫ್‌ಐಐ ಹೂಡಿಕೆ ಹೆಚ್ಚಳ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಫೆಬ್ರುವರಿಯಲ್ಲಿ ಭಾರ­ತೀಯ ಷೇರುಪೇಟೆಗಳಲ್ಲಿ ಒಟ್ಟು ರೂ.11,­337 ಕೋಟಿ  ಹೂಡಿಕೆ ಮಾಡಿದ್ದಾರೆ  ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT