ಇಮ್ರಾನ್‌ ವಿರುದ್ಧ ಅಬ್ಬಾಸಿ ಟೀಕೆ

ಮಂಗಳವಾರ, ಜೂನ್ 18, 2019
31 °C

ಇಮ್ರಾನ್‌ ವಿರುದ್ಧ ಅಬ್ಬಾಸಿ ಟೀಕೆ

Published:
Updated:
Prajavani

`ಇಸ್ಲಾಮಾಬಾದ್‌: ’ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮಾನಸಿಕ ಆರೋಗ್ಯ ತಪಾಸಣೆಗೆ ಆಯೋಗ ರಚನೆ ಮಾಡಬೇಕು‘ ಎಂದು ಮಾಜಿ ‍ಪ್ರಧಾನಿ ಶಾಹಿದ್‌ ಖಕನ್‌ ಅಬ್ಬಾಸಿ ಹೇಳಿದ್ದಾರೆ.

ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಬೃಹತ್‌ ಮೊತ್ತದ ಸಾಲ ಮಾಡಿ ದೇಶ ಆರ್ಥಿಕ ಸ್ಥಿತಿ ಬಿಕ್ಕಟ್ಟಿಗೆ ಸಿಲುಕುವಂತೆ ಮಾಡಿರುವವರ ವಿರುದ್ಧ ತನಿಖೆ ನಡೆಸಲು ಆಯೋಗ ರಚಿಸಲಾಗುವುದು ಎಂದು ಇಮ್ರಾನ್‌ ಖಾನ್‌ ಅವರು ಮಂಗಳವಾರ ಮಧ್ಯರಾತ್ರಿ ದೇಶವನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಘೋಷಿಸಿದ್ದರು.

‘ದೇಶದ ಇತಿಹಾಸದಲ್ಲೇ ಇದುವರೆಗೆ ಯಾವುದೇ ಪ್ರಧಾನಿ ಮಧ್ಯರಾತ್ರಿ ವೇಳೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿಲ್ಲ‘ ಎಂದು ವಿರೋಧ ಪಕ್ಷದ ನಾಯಕರೂ ಆಗಿರುವ ಅಬ್ಬಾಸಿ ಕಟುವಾಗಿ ಟೀಕಿಸಿದ್ದಾರೆ.

‘ಯಾವುದೇ ತನಿಖೆ ಎದುರಿಸಲು ಸಿದ್ಧ‘ ಎಂದೂ ಅವರು ತಿಳಿಸಿದ್ದಾರೆ. 2017 ಆಗಸ್ಟ್‌ನಿಂದ 2018 ಮೇ ವರೆಗೆ ಅಬ್ಬಾಸಿ ಪ್ರಧಾನಿಯಾಗಿದ್ದರು.

ಇವನ್ನೂ ಓದಿ... 

ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲ ರಾಷ್ಟ್ರಗಳು ಒಂದಾಗಬೇಕು: ಮೋದಿ

ಮೋದಿ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಷಿ ಜಿನ್‌ಪಿಂಗ್‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !