ಗುರುವಾರ , ಆಗಸ್ಟ್ 5, 2021
21 °C

ದೈವಭಕ್ತಿಯ ಪುನರುಜ್ಜೀವನಕ್ಕೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಶಿ ಸಂಸ್ಥಾನ ಮಠದ 21ನೇ ಯತಿಗಳಾದ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಮಂಗಳೂರಿನ ಕೊಂಚಾಡಿ ಶಾಖಾ ಮಠದಲ್ಲಿ ಆರಂಭವಾಗಲಿದೆ. 

ಜುಲೈ 10ರಂದು ಶ್ರೀಗಳು ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದು, ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯವರೆಗೂ ನಡೆಯಲಿದೆ. ಈ ಸಂದರ್ಭದಲ್ಲಿ ಬರುವ ಹಬ್ಬ ಹರಿದಿನಗಳನ್ನು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡಲಾಗುವುದು. ನಾಲ್ಕು ತಿಂಗಳು ಶ್ರೀಗಳ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ನಿರಂತರವಾಗಿ ನಡೆಯುತ್ತವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಎಚ್ಚರಿಕೆ ವಹಿಸಲಾಗಿದೆ. ಶ್ರೀಗಳ ಪ್ರವಚನ, ಧಾರ್ಮಿಕ ಉಪದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಭಕ್ತಾದಿಗಳ ಮನೆಗೆ ತಲುಪಿಸಲು ಸಿದ್ಧತೆ ಮಾಡಲಾಗಿದೆ.

'ಕೋವಿಡ್–19 ಕಾರಣದಿಂದ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮಗಳು ನಡೆಯಲಿವೆ. ನಮ್ಮ ದೈವಭಕ್ತಿ, ನಿಷ್ಠೆ, ಅರ್ಪಣಾ ಮನೋಭಾವಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ಇದೊಂದು ಉತ್ತಮ ಅವಕಾಶವಾಗಿದೆ. ಚಾತುರ್ಮಾಸ್ಯದಲ್ಲಿ ನಡೆಯುವ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತಾದಿಗಳು ಧರ್ಮಪೀಠ, ಧರ್ಮಗುರುಗಳಿಗೆ ಭಕ್ತಿಯನ್ನು ಸಮರ್ಪಿಸಬೇಕು’ ಎಂದು ಸಂಯಮೀಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.