ಮಂಗಳವಾರ, ನವೆಂಬರ್ 19, 2019
29 °C

ಲಕ್ಷ್ಮಿ

Published:
Updated:

ಈಕೆ ಮಹಾವಿಷ್ಣುವಿನ ಪತ್ನಿ. ಸೌಂದರ್ಯ ಮತ್ತು ಸಂಪತ್ತಿನ ದೇವತೆ ಕೂಡ ಹೌದು. ಸಿಂಹಾಸನದಂತಹ ಕಮಲದ ಮೇಲೆ ಕುಳಿತಿರುವ ಈಕೆ ಜನಿಸಿದ್ದು ಅಮೃತಕ್ಕಾಗಿ ದೇವ–ದಾನವರ ನಡುವೆ ಸಮುದ್ರ ಮಥನ ನಡೆದ ಸಂದರ್ಭದಲ್ಲಿ.

ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ವೀರಲಕ್ಷ್ಮಿ, ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಧನಲಕ್ಷ್ಮಿ... ಇವು ಲಕ್ಷ್ಮಿ ಎಂಟು ರೂಪಗಳು.

ಹಿಂದೂಗಳು ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸುವ ರೀತಿಯಲ್ಲೇ, ಜಪಾನಿಯರು ಕಿಷಿಜೊತೆನ್ ದೇವತೆಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿ ಪೂಜೆ ಮಾಡುತ್ತಾರೆ.

ಲಕ್ಷ್ಮಿಯನ್ನು ಜೈನ ಧರ್ಮದಲ್ಲೂ ಕಾಣಬಹುದು. ಬೌದ್ಧ ಧರ್ಮೀಯರಿಗೆ ಕೂಡ ಲಕ್ಷ್ಮಿ ಸಮೃದ್ಧಿಯ ದೇವತೆ. ಭಾರತೀಯ ಚಿತ್ರಕಲೆಯಲ್ಲಿ ಲಕ್ಷ್ಮಿಯನ್ನು ಸೃಜನಾತ್ಮಕವಾಗಿ ಚಿತ್ರಿಸಲಾಗಿದೆ.

ಪ್ರತಿಕ್ರಿಯಿಸಿ (+)