ಮಂಗಳವಾರ, ಜನವರಿ 21, 2020
17 °C
ರಾಶಿ ಭವಿಷ್ಯ

ಮಕರ ಸಂಕ್ರಾಂತಿ: ದ್ವಾದಶ ರಾಶಿಗಳ ಮೇಲೆ ಏನೇನು ಪರಿಣಾಮ?

ಭವಿಷ್ಯ Updated:

ಅಕ್ಷರ ಗಾತ್ರ : | |

Horoscope

ಸೌರ ಮಂಡಲದ ಅಧಿಪತಿ ಸೂರ್ಯನು ಮಕರ ರಾಶಿ ಪ್ರವೇಶಿಸುವ ಮಹಾಪುಣ್ಯ ಕಾಲವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದು ಉತ್ತರಾಯಣದ ಪುಣ್ಯ ಕಾಲ. ಸೂರ್ಯ ತನ್ನ ಪಥ ಬಲಿಸಿ ಮಕರಕ್ಕೆ ಪ್ರವೇಶಿಸುವುದರಿಂದ ದ್ವಾದಶ ರಾಶಿಗಳ ಮೇಲೂ ಪರಿಣಾಮಗಳು ಉಂಟಾಗುತ್ತವೆ. ಅದನ್ನು ಇಲ್ಲಿ ವಿವರಿಸಲಾಗಿದೆ. 

ಮೇಷ: ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವವರಿಗೆ ನೌಕರಿ ಸಿಗುವ ಶುಭ ಸೂಚನೆಯಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿಯು ಸುಧಾರಣೆಯಾಗಲಿದೆ ಪರಿಹಾರ

ಪರಿಹಾರ: ಪಳನಿ ಸುಬ್ರಹ್ಮಣ್ಯೇಶ್ವರನ ದರ್ಶನ, ಶಿವ ಪಂಚಾಕ್ಷರಿ ಮಂತ್ರ ಪಠಣೆಯಿಂದ ಅನುಕೂಲ. 

ವೃಷಭ: ಮಕ್ಕಳ ವಿಷಯದಲ್ಲಿ ನೆಮ್ಮದಿ ಕಾಣುವಿರಿ.  ಹೊಸ ಉದ್ಯಮ ಮತ್ತು ಹೊಸ ಕೆಲಸಗಳು ನಿಮಗೆ ದೊರೆಯಲಿವೆ.  ಉನ್ನತ ಸ್ಥಾನಮಾನಗಳು ಪ್ರಾಪ್ತಿಯಾಗುತ್ತವೆ. ಆದರೆ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

ಪರಿಹಾರ: ಅಮ್ಮನವರ ದರ್ಶನ, ಸಮುದ್ರ ಸ್ಥಾನದಿಂದ ಹೆಚ್ಚಿನ ಫಲವಿದೆ. 

ಮಿಥುನ: ಕೆಲಸದಲ್ಲಿ ನಾನಾ ರೀತಿಯ ತೊಂದರೆಗಳು ಎದುರಾಗುವುವು. ಮನಸಿಕ ವ್ಯಾದಿಯೂ ಹೆಚ್ಚುತ್ತದೆ. ಅಧಿಕ ತಿರುಗಾಟದಿಂದ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು.  ಆಸ್ತಿ ಅಥವಾ ಮನೆ, ಹೊಸ ವಾಹನವನ್ನು ತಾವು ಖರೀದಿಸುವುದರಿಂದ ಮನಸ್ಸಿಗೆ ಸ್ವಲ್ಪಮಟ್ಟಿನ ನೆಮ್ಮದಿ.  

ಪರಿಹಾರ : ಈಶ್ವರನ ದರ್ಶನದಿಂದ ಹೆಚ್ಚಿನ ಶುಭಫಲಗಳಿವೆ. 

ಕರ್ಕಾಟಕ: ಕುಟುಂಬ ಕಲಹದಿಂದ ಮನಸ್ಸಿಗೆ ನಾನಾ ರೀತಿಯ ಚಿಂತೆ. ಹೊಸ ಕೆಲಸ ಕಾರ್ಯಗಳಿಂದ ಮನಸ್ಸಿಗೆ ಉಲ್ಲಾಸ. ಸರ್ಕಾರಿ ಅಥವಾ ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ಕಾಣುವಿರಿ
ಪರಿಹಾರ : ನವ ಧಾನ್ಯ ದಾನ.  ಏಕವಾರ ರುದ್ರಾಭಿಷೇಕದಿಂದ ಲಾಭ. 

ಸಿಂಹ: ಕೆಲಸಕಾರ್ಯಗಳಲ್ಲಿ ಜಯ ಉಂಟಾಗಲಿದೆ.  ಆರೋಗ್ಯದಲ್ಲಿ ಏರುಪೇರು, ವಾಹನ ಸವಾರರು ಎಚ್ಚರಿಕೆಯನ್ನು ವಹಿಸಬೇಕು. ಬಂಧುಮಿತ್ರರ ವಿರೋಧದಿಂದ ಮಾನಸಿಕ ಚಿಂತೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ಮುಂದಿನ ದಿನಗಳಲ್ಲಿ ಕಾಣುತ್ತೀರಿ
ಪರಿಹಾರ: ತಿರುಪತಿ ತಿರುಮಲ ದರ್ಶನ ದಿಂದ ಹೆಚ್ಚಿನ ಲಾಭವನ್ನು ಕಾಣುತ್ತೀರಿ

ಕನ್ಯಾ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕು. ಉದ್ಯೋಗದಲ್ಲಿ ಅಲ್ಪ ಪ್ರಗತಿ.  ಮಾನಸಿಕ ಚಿಂತೆಯೂ ಕಾಡುತ್ತದೆ.

ಪರಿಹಾರ: ದುರ್ಗಾ ದೀಪ ನಮಸ್ಕಾರ, ದುರ್ಗಾಸಪ್ತಶತಿ ಯಿಂದ ಪರಿಹಾರ ಕಾಣುವಿರಿ

ತುಲಾ: ಕೆಲಸಕಾರ್ಯಗಳಲ್ಲಿ ಅಡಚಣೆ. ಸ್ಥಾನ ಬದಲಾವಣೆಯಿಂದ ಮನಸ್ಸಿಗೆ ಕೊಂತೆ ಚಿಂತೆ ಉಂಟಾಗುತ್ತದೆ. ವ್ಯಾಪಾರಸ್ಥರು ಹೆಚ್ಚಿನ ಲಾಭ ಕಾಣುವರು. ಮಕ್ಕಳ ವಿಚಾರವು ನಿಮಗೆ ಸಂತೋಷ ತಂದುಕೊಡಲಿದೆ. 

ಪರಿಹಾರ : ಅನ್ನಪೂರ್ಣೇಶ್ವರಿ ದರ್ಶನದಿಂದ ನೆಮ್ಮದಿ

ವೃಶ್ಚಿಕ ರಾಶಿ: ಕೆಲಸದಲ್ಲಿ ಉನ್ನತ ಪದವಿಯನ್ನು ಪಡೆಯುವಿರಿ.  ಉನ್ನತ ವ್ಯಾಸಂಗದಲ್ಲಿ ಹಿರಿಯರ ಸಲಹೆ ಮಾರ್ಗದರ್ಶನದಿಂದ ಹೆಚ್ಚಿನ ಲಾಭ ಉಂಟಾಗುತ್ತದೆ. ಹೊಸ ಜಾಗ ಅಥವಾ ನಿವೇಶನ ಖರೀದಿಯಿಂದ ಮನೆಯಲ್ಲಿ ಸಂತೋಷದ ವಾತಾವರಣ ಕಂಡು ಬರಲಿದೆ. 
ಪರಿಹಾರ : ಕುಕ್ಕೆ ಸುಬ್ರಹ್ಮಣ್ಯ ದರ್ಶನ. ಏಕವಾರ ರುದ್ರಾಭಿಷೇಕ ನವಗ್ರಹ ದಾನದಿಂದ ಅನುಕೂಲ. 

ಧನು: ವಾಹನ ಸವಾರರು ಹೆಚ್ಚಿನ ನಿಗಾ ವಹಿಸಬೇಕು.  ಮನೆಯಲ್ಲಿನ ಅಶಾಂತಿಯು ನೆಮ್ಮದಿ ಕಳೆದುಕೊಳ್ಳುವಂತೆ ಮಾಡುತ್ತದೆ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳಿತು. ಕೆಲಸ ಕಾರ್ಯಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. 
ಪರಿಹಾರ: ಕಟೀಲು ದುರ್ಗಾಪರಮೇಶ್ವರಿ ದರ್ಶನ, ಸಮುದ್ರ ಸ್ಥಾನದಿಂದ ಪರಿಹಾರ. 

ಮಕರ: ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಕೆಲಸಕಾರ್ಯಗಳಲ್ಲಿ ಅಲ್ಪಪ್ರಮಾಣದ ಪ್ರಗತಿ ಕಂಡರೂ ನಾನಾ ರೀತಿಯ ಚಿಂತೆ ಕಾಡುತ್ತದೆ. ಮಕ್ಕಳ ವಿಚಾರದಲ್ಲಿ ಸಂತೋಷ ಉಂಟಾಗಲಿದೆ.
ಪರಿಹಾರ: ಈಶ್ವರನ ದರ್ಶನದಿಂದ ಹೆಚ್ಚಿನ ಲಾಭ ಕಾಣುತ್ತೀರಿ

ಕುಂಭ: ಕೆಲಸಕಾರ್ಯಗಳಲ್ಲಿ ಅಧಿಕ ತಿರುಗಾಟ. ಮುಂದಿನ ದಿನಗಳಲ್ಲಿ ಉದ್ಯೋಗ ಅಥವಾ ಹೊಸ ಉದ್ಯಮದಿಂದ ಹೆಚ್ಚಿನ ಯಶಸ್ಸನ್ನು ಕಾಣುವಿರಿ. ವಿದೇಶ ಪ್ರಯಾಣದಿಂದ ಹೆಚ್ಚಿನ ಲಾಭವನ್ನು ಕಾಣುವಿರಿ. 
ಪರಿಹಾರ: ದುರ್ಗಾಸಪ್ತಶತಿ, ದೇವಿ ದರ್ಶನದಿಂದ ಹೆಚ್ಚನ ಲಾಭ. 

ಮೀನ: ಮಕ್ಕಳಿಂದ ಸಂತೋಷ ಕಾಣುವಿರಿ. ತೀರ್ಥ ಕ್ಷೇತ್ರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಮದುವೆ ವಿಚಾರದಲ್ಲಿ ಸಂತೋಷ ಉಂಟಾಗಲಿದೆ.  ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಿ.

ಪರಿಹಾರ: ಗಾಣಗಾಪುರ ದತ್ತಾತ್ರೇಯ ದೇವರ ಪಾದ ಪೂಜೆಯಿಂದ ದೋಷ ಪರಿಹಾರ.

-ಸುಬ್ರಹ್ಮಣ್ಯ, ಮೈಸೂರು 
ಮೊಬೈಲ್-7022036917

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು