ಮಂಗಳವಾರ, ಮೇ 18, 2021
22 °C

ಮಾಸ ಭವಿಷ್ಯ: 2021ರ ಮೇ 1 ರಿಂದ 31ರವರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ. ಉದ್ಯಮಿಗಳಿಗೆ ಉತ್ತಮ ಲಾಭವಿದೆ. ಆರೋಗ್ಯ ವಿಷಯದಲ್ಲಿ ಸ್ವಲ್ಪ ಏರುಪೇರು ಎಚ್ಚರವಿರಲಿ. ಜೀವನ ಸಂಗಾತಿಯೊಂದಿಗೆ ಉತ್ತಮ ಪ್ರೀತಿಯ ಜೀವನದ ಸಮಯ ಕಳೆಯಲು ಒಳ್ಳೆಯ ಅವಕಾಶ ಸಿಗುವುದು. ಅವಿವಾಹಿತರಿಗೆ ವೈವಾಹಿಕ ಯೋಗ. ವಾಹನ ಕ್ರಯ ವಿಕ್ರಯಕ್ಕೆ ಉತ್ತಮ ಸಮಯ.

ಶುಭ 6. 14. 22

ಅಶುಭ 7. 16. 28

ವೃಷಭ

ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ ಮತ್ತು ಉತ್ತಮ‌ಲಾಭ ದೊರಕುತ್ತದೆ. ಹಳೆಯ ಭೂ ವ್ಯಾಜ್ಯ ಪ್ರಕರಣವಿದ್ದಲ್ಲಿ ಸುಖಾಂತ್ಯವಾಗುತ್ತದೆ. ಕುಟುಂಬದವರೋಡನೆ ತೀರ್ಥ ಯಾತ್ರೆ ಕೈಗೊಳ್ಳುವ ಯೋಗವಿದೆ. ಮನೆಯಲ್ಲಿ ದಾರ್ಮಿಕ ಕಾರ್ಯ ನಡೆಸುವಿರಿ. ತಿಂಗಳಾಂತ್ಯದಲ್ಲಿ ಮನೆಯಲ್ಲಿ ಸಂತಸದ ವಾತಾವರಣವಿರುವುದು.

ಶುಭ 9. 12. 22

ಅಶುಭ 19. 24. 29.

ಮಿಥುನ

ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ನೀವು ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿರಿ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಭಿಸುವ ಸಾದ್ಯತೆ. ಹಲವಾರು ದಿನಗಳಿಂದ ಅಡೆತಡೆ ಉಂಟಾಗುತ್ತಿದ್ದ ಮಕ್ಕಳ ಮದುವೆ ವಿಷಯದಲ್ಲಿ ಶುಭವಾರ್ತೆ ಕೇಳುವಿರಿ. ವ್ಯಾಪಾರ ವ್ಯವಹಾರಸ್ಥರು ಉತ್ತಮ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು.

ಶುಭ 18. 24. 28

ಅಶುಭ 11. 16. 24

ಕಟಕ

ಆರ್ಥಿಕವಾಗಿ ಉತ್ತಮ ಸಮಯ. ಬರತಕ್ಕ ಬಾಕಿ ಹಣ ಅನಿರೀಕ್ಷಿತವಾಗಿ ಬರುವುದು.‌ ಮನೆಗೆ ಹಳೆಯ ಸ್ನೇಹಿತರ ಆಗಮನ, ಸಂತಸದ ವಾತಾವರಣ. ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾದ್ಯತೆಯಿದೆ. ಎಚ್ಚರಿಕೆ ವಹಿಸಿ. ಮಕ್ಕಳ ವಿಧ್ಯಾಭ್ಯಾಸದಲ್ಲಿ ಪ್ರಗತಿ. ಲೋಹದ ವಸ್ತು ಖರೀದಿ ಯೋಗವಿದೆ.

ಶುಭ 12. 19. 21

ಅಶುಭ 14. 16. 26

ಸಿಂಹ

ಕೌಟುಂಬಿಕ ಜೀವನ ತುಂಬ ಚೆನ್ನಾಗಿರುತ್ತದೆ. ಕುಟುಂಬ ಸದಸ್ಯರ ಮೇಲೆ ನಿಮಗಿರುವ ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ಸಂಗಾತಿ ಮತ್ತು ಮಕ್ಕಳ ಜತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ವ್ಯಾಪಾರ ಉದ್ಯಮದಲ್ಲಿ ಪ್ರಗತಿ ಸಾದಿಸುವಿರಿ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆದಾಯದಲ್ಲಿ ಏರಿಕೆಯಾಗುವುದು.

ಶುಭ 14. 22. 30

ಅಶುಭ 16.20.25

ಕನ್ಯಾ

ತಿಂಗಳ ಶುರುವಿನಲ್ಲಿ ಮಾರಾಟ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗುರಿ ತಲುಪುವುದು ಬಹಳ ಕಷ್ಟವಾಗುತ್ತದೆ. ತಿಂಗಳ ಮಧ್ಯ ಭಾಗದಲ್ಲಿ ವೈವಾಹಿಕ ಜೀವನದಲ್ಲಿ ಪ್ರಗತಿ ಇದೆ. ವ್ಯಾಪಾರದ ಅಭಿವೃದ್ಧಿಗೆ ಯತ್ನಿಸುತ್ತಿರುವವರಿಗೆ ಅತ್ಯುತ್ತಮ ಅವಕಾಶಗಳು ದೊರೆಯಲಿವೆ. ತಿಂಗಳ ಅಂತ್ಯ ಭಾಗಕ್ಕೆ ಸರಿಯುತ್ತಾ ಉದ್ಯೋಗಸ್ಥರಿಗೆ ಹಲವು ರೀತಿಯಲ್ಲಿ ಸವಾಲುಗಳು ಎದುರಾಗುತ್ತವೆ. ಸಂಗಾತಿ ಜತೆಗೆ ದಿಢೀರನೇ ಅಸಮಾಧಾನ ತಲೆದೋರಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಆರೋಗ್ಯ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಶುಭ 12.18.22

ಅಶುಭ 10. 15. 23

ತುಲಾ

ಎಲ್ಲ ಮೂಲಗಳಿಂದ ಧನಲಾಭ. ಜೀವನದ ಮಹತ್ವಾಕಾಂಕ್ಷೆ ಪೂರ್ಣಗೊಳ್ಳುವ ಸಮಯ. ಹಳೆಯ ಮಿತ್ರರು ಜೊತೆಯಾಗುವರು. ಸಂತಸ ಸಮಾರಂಭಕ್ಕಾಗಿ ಖರ್ಚು. ಹೊಸ ವಿವಾಹಿತರಿಗೆ ಸಂತಾನ ಪ್ರಾಪ್ತಿ. ಹಲವು ದಿನಗಳಿಂದ ಬಯಸಿದ ಅಧಿಕಾರ ಪ್ರಾಪ್ತಿಯಿಂದ ಸಂತಸ. ವಿಶೇಷ ವಸ್ತ್ರ ಖರೀದಿ ಸಾದ್ಯತೆ. ಕ್ರೀಡಾಪಟುಗಳಿಗೆ ಉತ್ತಮ ಅವಕಾಶ. ಕೌಟುಂಬಿಕ ಖರ್ಚು ಹಿಡಿತಕ್ಕೆ ಬರುವುದು. ಚಿಕ್ಕ ಪ್ರವಾಸದಿಂದ ಮನೋಲ್ಲಾಸ.

ಶುಭ 12. 19. 22

ಅಶುಭ 18. 20. 26

ವೃಶ್ಚಿಕ

ಬಂಧುಗಳ ಸಹಕಾರದಿಂದ ಸಂಕಟ ಮುಕ್ತಿಯಿಂದ ನಿರಾಳವಾಗುವಿರಿ. ಪತ್ನಿಯ ಮನೋಕಾಮನೆ ಪೂರ್ಣವಾಗುವುದು. ದೂರಪ್ರವಾಸ ಯೋಗ. ನಾಗರಿಕರಿಂದ ಪ್ರಶಂಸೆ ನುಡಿ. ನಾಗರಿಕ ಸನ್ಮಾನ. ಸರಕಾರಿ ನೌಕರರಿಗೆ ವರ್ಗಾವಣೆ ಸಾದ್ಯತೆ. ಹೊಸ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರು ಶ್ರಮವನ್ನು ಹೆಚ್ಚಿಸಬೇಕು. ಸಮಾಜದಲ್ಲಿ ಅತಿ ಮುಖ್ಯವಾದ ಹುದ್ದೆಗೆ ನಿಮ್ಮ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ. ಮನೆಯಲ್ಲಿ ದಾರ್ಮಿಕ ಕಾರ್ಯಕ್ರಮ ಆಯೋಜಿಸುವಿರಿ.

ಶುಭ 11. 18. 29

ಅಶುಭ 16. 23. 28

ಧನು

ಕುಟುಂಬ ಸದಸ್ಯರ ಜತೆಗೆ ಹೆಚ್ಚಿನ ಸಮಯ ಕಳೆಯುವಿರಿ. ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ತೊಡಗಿಕೊಳ್ಳಬೇಕಾದ ಅಗತ್ಯ ಕಂಡುಬರುತ್ತದೆ. ಆರೋಗ್ಯವು ಉತ್ತಮವಾಗಿರಲಿದೆ. ಈ ಹಿಂದಿನ ದೈಹಿಕ ಸಮಸ್ಯೆಗಳು ನಿವಾರಣೆಯಾಗಲಿವೆ. ಆತ್ಮವಿಶ್ವಾಸ- ಸಕಾರಾತ್ಮಕ ಆಲೋಚನೆ ವೃದ್ಧಿಯಾಗಲಿದೆ. ದೈನಂದಿನ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಮುಂದುವರಿಯಿರಿ. ಇನ್ನು ಹಣಕಾಸಿನ ಅನುಕೂಲ ಆಗಲಿದೆ.

ಶುಭ14. 26. 29

ಅಶುಭ 11.17.22

ಮಕರ

ತಿಂಗಳ ಆರಂಭದಿಂದಲೇ ನಿಮ್ಮ ಕೆಲಸಗಳಿಗೆ ವೇಗ ನೀಡುತ್ತೀರಿ. ದೊಡ್ಡ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಆಸೆ ಪೂರೈಸುತ್ತದೆ. ವೃತ್ತಿಪರ ಕಾರಣಗಳಿಗೆ ಅಥವಾ ಉನ್ನತ ವಿದ್ಯಾಭ್ಯಾಸಕ್ಕಾಗಿ ಸ್ಥಳಾಂತರ ಆಗುವ ಸಾಧ್ಯತೆಗಳಿವೆ. ಸೋಂಕು, ಅಲರ್ಜಿ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಜ್ವರ ಮತ್ತಿತರ ಆರೋಗ್ಯ ಬಾಧೆಗಳು ತಿಂಗಳ ಮಧ್ಯ ಭಾಗದ ತನಕ ಕಾಡಬಹುದು. ಈ ಕಾರಣಕ್ಕೆ ಮುಂಚಿನ ಉತ್ಸಾಹದಿಂದ ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತದೆ. ಸಂಗಾತಿ ಜತೆಗೆ ಸಂತಸದ ಸಮಯ ಕಳೆಯಲಿದ್ದೀರಿ.

ಶುಭ 10. 16. 24

ಅಶುಭ 09.21.28

ಕುಂಭ

ಈ ಹಿಂದೆ ನಿಮ್ಮನ್ನು ಮಾನಸಿಕವಾಗಿ ಚಿಂತೆಗೆ ಈಡು ಮಾಡಿದ್ದ ವಾತಾವರಣವು ಕರಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆ ಮೂಲಕ ಪೂರ್ಣ ಸಾಮರ್ಥ್ಯದಿಂದ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಆತ್ಮೀಯ ವ್ಯಕ್ತಿಗಳೊಡನೆ ವಿವಾದಗಳು ಹೆಚ್ಚಾಗಬಹುದು. ಭೂಮಿಗೆ ಸಂಬಂಧಪಟ್ಟಂತಹ ವ್ಯಾಜ್ಯಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು. ಅನಗತ್ಯವಾಗಿ ಮಾತಿನಲ್ಲಿ ಏನಾದರೂ ಹೇಳಿ ಸಿಲುಕಬೇಡಿ. ಕೆಲಸದ ವಿಷಯದಲ್ಲಿ ಸಮಸ್ಯೆಗಳು ಉದ್ಭವವಾಗಲಿದೆ ಆದಷ್ಟು ಸಮಸ್ಯೆಗಳನ್ನು ಆ ಕ್ಷಣದಲ್ಲೇ ಬಗೆಹರಿಸಲು ಪ್ರಯತ್ನಿಸಿ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತ ಕಾಣುತ್ತೀರಿ. ತಿಂಗಳ ಕೊನೆಯಲ್ಲಿ ವೈಯಕ್ತಿಕ ಬದುಕು ಸಂತಸದಾಯಕವಾಗಿ ಇರುತ್ತದೆ.

ಶುಭ 12. 18. 26

ಅಶುಭ 09.19.22

ಮೀನ

ಲೇವಾದೇವಿ ವ್ಯವಹಾರಗಳಿಂದ ದೂರವಿರುವುದು ಲೇಸು. ಪ್ರೇಕ್ಷಣೀಯ ಸ್ಥಳಗಳನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಕುಟುಂಬದ ಜೊತೆಗೆ ಹೆಚ್ಚಿನ ಕಾಲ ಕಳೆಯಲಿದ್ದೀರಿ. ಆತ್ಮೀಯರೊಡನೆ ಮನಸ್ತಾಪ ಆಗದಂತೆ ನೋಡಿಕೊಳ್ಳುವುದು ಒಳ್ಳೆಯದು. ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಸ್ವಯಂ ವೈದ್ಯ ಯಾವ ಕಾರಣಕ್ಕೂ ಬೇಡ. ಮುಂಬರುವ ದಿನಗಳಲ್ಲಿ ಹಲವು ಸಕಾರಾತ್ಮಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಯಾವುದಾದರೂ ಮೂಲದಿಂದ ತಿಂಗಳ ಅಂತ್ಯದ ವೇಳೆ ತುಂಬ ಒಳ್ಳೆ ಮೊತ್ತ ನಿಮ್ಮ ಪಾಲಿಗೆ ದೊರೆಯಲಿದೆ.

ಶುಭ 15.26.28

ಅಶುಭ. 13.16.22

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.