ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಗುಣ ಕ್ಷೀಣಿಸಿದರೆ ಆನಂದ ಮಾಯ

Published 23 ಮೇ 2023, 19:00 IST
Last Updated 23 ಮೇ 2023, 19:00 IST
ಅಕ್ಷರ ಗಾತ್ರ

ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ - ದಿಗಂಬರ ಜೈನ ಕ್ಷೇತ್ರ ಸ್ವಾದಿ, ಸೋಂದಾ, ಶಿರಸಿ

ಪ್ರಕೃತಿ ಹಾಗೂ ಮಾನವ ಜನ್ಮವು ಹಲವು ವಿಶೇಷತೆ, ವೈರುಧ್ಯಗಳಿಂದ ಕೂಡಿದೆ. ಇವುಗಳಲ್ಲಿ ಯಾವ ರೀತಿ ಬದುಕುತ್ತೇವೆ ಎಂಬುದರ ಮೇಲೆ ಶಾಶ್ವತ ಸುಖ, ದುಃಖಗಳು ಲಭಿಸುತ್ತವೆ. ಮರದ ಮೇಲೆ ರುಚಿಕರವಾದ ಹಣ್ಣುಗಳು ಇರುವವರೆಗೂ ಪಕ್ಷಿಗಳು ದೂರದಿಂದ ಬಂದು, ಕೊಂಬೆಗಳ ಮೇಲೆ ಕುಳಿತು ಅದರ ಹಣ್ಣುಗಳನ್ನು ತಿಂದು ಆನಂದಿಸುತ್ತವೆ. ಆದರೆ ಎಲ್ಲ ಹಣ್ಣುಗಳು ಮುಗಿದ ನಂತರ ಮತ್ತು ಹವಾಮಾನ ಬದಲಾವಣೆಯಿಂದಾಗಿ ಹೊಸ ಹಣ್ಣುಗಳ ಸಂಖ್ಯೆ ಕ್ಷೀಣಿಸಿದಾಗ ಪಕ್ಷಿಗಳು ಅದನ್ನು ಬಿಟ್ಟು ಬೇರೆಡೆಗೆ ಹೋಗುತ್ತವೆ.

ಇದು ಪ್ರಕೃತಿಯ ನಿಯಮವಾದರೂ ಮಾನವ ಇದರಿಂದ ಕಲಿಯುವುದು ಸಾಕಷ್ಟಿದೆ. ಮಾನವನಲ್ಲಿ ಸದ್ಗುಣಗಳು ಮತ್ತು ಅವುಗಳ ಪ್ರಭಾವ ಇರುವವರೆಗೆ, ವಿವಿಧ ರೀತಿಯ ಆನಂದಗಳು ಆತನ ಸುತ್ತ ಬಂದು ಸೇರುತ್ತವೆ.

ಸದ್ಗುಣಗಳು ಕ್ಷೀಣಿಸಿದಾಗ, ಕ್ರಮೇಣ ಆ ಎಲ್ಲ ಆನಂದಗಳು ಮಾಯವಾಗುತ್ತವೆ. ಕೊನೆಯಲ್ಲಿ ಸಂತೋಷದ ನೆನಪು ಮಾತ್ರ ಉಳಿಯುತ್ತದೆ. ಅದು ಮನುಷ್ಯನನ್ನು ದುಃಖಿತನನ್ನಾಗಿ ಮಾಡುತ್ತದೆ. ಈ ಕಾರಣ ಮಾನವ ಜನ್ಮದಲ್ಲಿ ಸದ್ಗುಣಗಳ ಕಾರಣಕ್ಕೆ ನಮಗೆ ಲಭ್ಯವಿರುವ ಆನಂದವನ್ನು ಮಾತ್ರ ಅನುಭವಿಸುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT