ಮಾನವನ ಮನಸ್ಸು ಅಸ್ಥಿರತೆಯ ಆಗರ; ಒಂದು ವಿಷಯದಲ್ಲಿ ಮಾತ್ರ ಸ್ಥಿರತೆ ಕಾಯ್ದುಕೊಳ್ಳುತ್ತದೆ; ಅದು ದ್ವೇಷಾಸೂಯೆ ಎಂಬ ವಿಷಯದಲ್ಲಿ ಮಾತ್ರ.

ಮನುಷ್ಯನ ದೇಹಕ್ಕೂ ಮನಸ್ಸಿಗೂ ಸಂಬಂಧವೇ ಇಲ್ಲ ಎನ್ನುವಷ್ಟು ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ ದೇಹ ಬೆಳೆದಂತೆ ಮನಸ್ಸು ಬೆಳೆಯುವುದಿಲ್ಲ; ದೇಹ ಕಿರಿದಾದಂತೆ ಮನಸ್ಸು ಕಿರಿದಾಗುವುದಿಲ್ಲ. ದೇಹದ ಬೆಳವಣಿಗೆಯು ಪ್ರಕೃತಿ ಸಹಜವಾಗಿದ್ದರೆ, ಮನಸ್ಸಿನ ಬೆಳವಣಿಗೆ ವಿಷಯ-ವಿಚಾರಗಳಿಂದಾಗುತ್ತದೆ. ಇಚ್ಛೆಗನುಸಾರ ಬೆಳೆಯುವ-ಕುಗ್ಗುವ ಪ್ರಕ್ರಿಯೆ ಮನಸ್ಸಿಗೆ ಮಾತ್ರ ಸಾಧ್ಯ. ದೇಹಕ್ಕೆ ಇಂಥ ಭಾಗ್ಯವಿರುವುದಿಲ್ಲ.

ಮಾನವನ ಮನಸ್ಸು ಖಾಲಿ ಪುಟವಿದ್ದಂತೆ. ಅದರಲ್ಲಿ ಎಷ್ಟು ಶಾಂತಿ, ಸಂಯಮದಿಂದ ಸೌಹಾರ್ದ ಅಕ್ಷರಗಳನ್ನು ಬರೆಯುತ್ತೇವೆಯೊ, ಅಷ್ಟೂ ನಮ್ಮ ಬದುಕು ಚೆನ್ನಾಗಿರುತ್ತದೆ. ಇಂಥ ಸುಂದರವಾದ ಸ್ವಸ್ಥ-ಸ್ವಚ್ಛ ಮನಸ್ಸಿನ ಮೇಲೆ ದ್ವೇಷ-ಅಸೂಯೆಗಳ ದೌರ್ಜನ್ಯದ ಅಕ್ಷರ ಬರೆದುಕೊಂಡರೆ ನಮ್ಮ ಬದುಕು ಬರ್ಬರವಾಗುತ್ತದೆ.

ಮಾನವರಿಗೆ ಭಗವಂತ ನೀಡುವ ಪರೀಕ್ಷಾ ಹಾಳೆಯೇ ಮನಸ್ಸು. ಅದರಲ್ಲಿ ನಾವು ಬರೆಯುವ ಉತ್ತಮ ನಡವಳಿಕೆ ಆಧಾರದ ಮೇಲೆ ಭಗವಂತ ಫಲಿ ತಾಂಶ ನೀಡುತ್ತಾನೆ. ಕೇವಲ ಪರಧರ್ಮ ನಿಂದನೆ, ಜಾತಿ ಶೋಷಣೆ, ಪರರ ಹಿಂಸಿಸುವ ಕುತ್ಸಿತ ಮನಸ್ಸಿಗೆ ಭಗವಂತ ನಪಾಸು ಮಾಡಿ ನರಕಕ್ಕೆಳೆಸುತ್ತಾನೆ.

ಆದಿ ಶಂಕರಾಚಾರ್ಯರು ಹೇಳಿದ್ದು ಇದೇ: ಜೀವನಪರೀಕ್ಷಾ ಚಕ್ರ. ಪ್ರತಿ ಜೀವಿಗೂ ಸೃಷ್ಟಿಚಕ್ರದಿಂದ ಮುಕ್ತಿ ಸಿಗಬೇಕಾದರೆ ಭಗವಂತ ನೀಡಿದ ಮನಸ್ಸಿನ ಪರೀಕ್ಷಾ ಹಾಳೆಯಲ್ಲಿ ದ್ವೇಷಾಸೂಯೆ ಇಲ್ಲದ ಉತ್ತಮ ವಿಚಾರಗಳನ್ನು ಬರೆಯಬೇಕು. ಮನಸ್ಸಿನಲ್ಲಿ ಆಗಾಗ್ಗೆ ಹುಟ್ಟುವ ಕೊಳೆಯನ್ನು ತೊಳೆಯದೆ, ಪರದ್ವೇಷದ ಕಳೆ ತೆಗೆಯಲಾಗುವುದಿಲ್ಲ. ಇಂಥ ಕೆಟ್ಟ ಮನಸ್ಸಿನಿಂದಾಗಿಯೇ, ಅನ್ಯ ಜಾತಿ-ಧರ್ಮಗಳಲ್ಲಿರಲಿ, ಒಂದೇ ರಕ್ತ ಹಂಚಿಕೊಂಡು ಹುಟ್ಟಿದ್ದರೂ ದ್ವೇಷಾಸೂಯೆಯಿಂದ ಬಳಲುತ್ತಿರುತ್ತಾರೆ. ಹಿರಿಯರು ಕಿರಿಯರ ಮೇಲೆ ಚಿಕ್ಕ ವಯಸ್ಸಿನಿಂದಲೆ ತುಂಬುವ ಮತ್ಸರದ ಬೀಜಗಳು ಮನಸಿನಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದಿರುತ್ತದೆ. ಹಿರಿಯರು ಮಾಡುವ ಈ ತಪ್ಪು ಮನೆ ಮಂದಿಯನ್ನೆಲ್ಲಾ ಕಿತ್ತು ತಿನ್ನುತ್ತದೆ. ಹೀಗೆ ಆನುವಂಶೀಯವಾಗಿ ಬೆಳೆವ ದಾಯಾದಿ ಮತ್ಸರ ಮನೋವ್ಯಾಧಿಯಾಗಿ ತಲತಲಾಂತರದವರೆಗೂ ಕಾಡುತ್ತದೆ.ದಾಯಾದಿ ಮತ್ಸರ ಎಂಥ ವಿಪತ್ತು ತರುತ್ತೆ ಎಂಬುದನ್ನು ‘ಮಹಾಭಾರತ‘ ಮತ್ತು ‘ಗರುಡ-ನಾಗ‘ದಂಥ ಪುರಾಣಗಳು ಸವಿಸ್ತಾರವಾಗಿ ಹೇಳುತ್ತವೆ.

ಸಣ್ಣ ವಯಸ್ಸಿನಲ್ಲಿ ಮಕ್ಕಳಾಡುವ ಸಣ್ಣ ಪುಟ್ಟ ಜಗಳವನ್ನು ತಡೆದು ಹಿರಿಯರಾದವರು ಮಕ್ಕಳಿಗೆ ಬುದ್ಧಿಯನ್ನು ಹೇಳುವ ಪ್ರಯತ್ನ ಮಾಡಿದರೆ ದಾಯಾದಿ ಮತ್ಸರ ಬರುವುದಿಲ್ಲ. ಹಿರಿಯರಾದವರು ತಮ್ಮ ಮಕ್ಕಳಿಗೆ ಸಂಬಂಧಿಕರ ಮಕ್ಕಳೊಂದಿಗೆ ಪ್ರೀತಿ-ವಿಶ್ವಾಸದಿಂದ ಕಾಣುವಂತೆ ತಿಳಿವಳಿಕೆಯನ್ನು ನೀಡಬೇಕು. ಇದಕ್ಕಾಗಿ ತಮ್ಮ ಮಕ್ಕಳಿಗೆ ನಿತ್ಯ ಉಪದೇಶ ಹೇಳಬೇಕಿಲ್ಲ; ತಾವು ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡರೆ ಸಾಕು, ಇದನ್ನು ನೋಡಿ ತಾವಾಗಿಯೇ ಅವರೊಂದಿಗೆ ಮಕ್ಕಳು ಉತ್ತಮ ಬಾಂಧವ್ಯ ರೂಪಿಸಿಕೊಳ್ಳುತ್ತಾರೆ. ಇದಕ್ಕೆ ಬೇಕಿರುವುದು ಒಳ್ಳೆಯ ಮನಸ್ಸು. ಹಿರಿಯರ ಮನಸ್ಸು ಶುದ್ಧವಾದರೆ ಆಗ ಸಹಜವಾಗಿಯೇ ಕಿರಿಯರ ಮನಸ್ಸು ಕೂಡ ಶುದ್ಧವಾಗುತ್ತದೆ. ಇದೇ ಶ್ರೀದತ್ತನ ‘ಸಚ್ಚಿದಾನಂದ‘ ಜೀವನಸಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.