ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸಿಗಂಧೂರು ಜಾತ್ರಾ ಮಹೋತ್ಸವ

Last Updated 11 ಜನವರಿ 2020, 13:02 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಗರ ತಾಲ್ಲೂಕು ಶರಾವತಿ ಹಿನ್ನೀರಿನಲ್ಲಿರುವ ಸಿಗಂಧೂರಿನ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಜ.14 ಮಂಗಳವಾರ ಮತ್ತು 15ರಂದು ನಡೆಯಲಿದೆ.

ಪ್ರತಿ ವರ್ಷ ಮಕರ ಸಂಕ್ರಮಣದ ದಿನ ಜಾತ್ರಾ ಮಹೋತ್ಸವನಡೆಯುತ್ತದೆ. ಅಂದುಬೆಳಿಗ್ಗೆ 7ಕ್ಕೆಮೂಲಸ್ಥಾನವಾದ ಸೀಗೆಕಣಿವೆಯಿಂದ ಜ್ಯೋತಿ ಮೆರವಣಿಗೆ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಕುಂಭ, ಕಳಶ ಹೊತ್ತಸಾವಿರಾರು ಮಹಿಳೆಯರು ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸವರು.

ಸಿಗಂದೂರಿಗೆ ಬರುವ ಭಕ್ತರಿಗೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಅಂಬಾರಗೋಡ್ಲು–ಕಳಸವಳ್ಳಿ ಲಾಂಚ್ ವ್ಯವಸ್ಥೆ ಇದೆ. ರಸ್ತೆ ಮೂಲಕ ಬರುವವರಿಗೆ ಶಿವಮೊಗ್ಗದಿಂದ ಹೊಸನಗರ ಮುಖೇನ ಸಿಗಂದೂರು ತಲುಪಬಹುದು.

ಈ ಮಹೋತ್ಸವದಲ್ಲಿ ಆನಂದ ಗುರೂಜಿಪ್ರವಚನ ನೀಡುವರು.ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ ಸಮಾರಂಭವಿರುತ್ತದೆ. ಧರ್ಮದರ್ಶಿ ಡಾ.ಎಸ್ ರಾಮಪ್ಪ, ಎಚ್‌.ಆರ್.ರವಿಕುಮಾರ್, ಪ್ರಧಾನ ಅರ್ಚಕ ಎಸ್.ಪಿ ಶೇಷಗಿರಿ ಭಟ್ ಉಪಸ್ಥಿತರಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT