ಸೋಮವಾರ, ಮಾರ್ಚ್ 20, 2023
24 °C

ವಾರ ಭವಿಷ್ಯ | ಡಿಸೆಂಬರ್ 25, 2022 ರಿಂದ ಡಿಸೆಂಬರ್ 31, 2022 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ   Updated:

ಅಕ್ಷರ ಗಾತ್ರ : | |

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕರಿದ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಶಿಸ್ತನ್ನು ಕಾಯ್ದುಕೊಳ್ಳುವುದು ಉತ್ತಮ. ಕೃಷಿ ಸಂಬಂಧಿತ ಉಪಕರಣಗಳನ್ನು ತಯಾರಿಸುವವರಿಗೆ ವ್ಯವಹಾರ ಹೆಚ್ಚುತ್ತದೆ. ಸಂಗಾತಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಮೂಡುವ ಗೊಂದಲಗಳಿಗೆ ಕಾರಣ ತಿಳಿದುಕೊಳ್ಳಲು ಪ್ರಯತ್ನ ಮಾಡಿರಿ. ವಸ್ತ್ರ ವಿನ್ಯಾಸ ಮಾಡುವಲ್ಲಿ ಪರಿಣತಿ ಪಡೆದಿರುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸದ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಗೊಳಿಸದಿರುವುದು ಉತ್ತಮ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಬಹುದು. ಧನಾದಾಯವು ಅಗತ್ಯಕ್ಕಿಂತ ಕಡಿಮೆ ಇರುತ್ತದೆ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)
ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಅನಿವಾರ್ಯವಾಗಬಹುದು. ವ್ಯಾಪಾರ ವ್ಯವಹಾರ ಮಾಡುವವರಿಗೆ ಅತಿಯಾದ ಲಾಭವಿರುವುದಿಲ್ಲ. ಹಾಗೆಂದು ನಷ್ಟವೂ ಇಲ್ಲ. ಕೃಷಿಯಿಂದ ಆದಾಯವಿರುತ್ತದೆ. ಹೈನುಗಾರಿಕೆ ಮಾಡುವವರು ಬಂದಿದ್ದ ಗಂಡಾಂತರದಿಂದ ಪಾರಾಗುವರು. ಕೆಲವರಿಗೆ ಕಚೇರಿಯಲ್ಲಿ ತರಬೇತಿ ಸಿಗುವ ಯೋಗವಿದೆ. ನೀವು ಕೈಗೆತ್ತಿಕೊಂಡ ಕೆಲಸಗಳು ಖರ್ಚಿಗೆ ಕಾರಣವಾದರೂ ಮುಂದೆ ಪ್ರಯೋಜನಕ್ಕೆ ಬರುತ್ತವೆ. ಪಾಲುದಾರರು ನಿಮ್ಮ ವಿರುದ್ಧ ತಿರುಗಿ ಬೀಳುವ ಲಕ್ಷಣಗಳಿವೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಸ್ತ್ರೀಯರ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ಸಂಗಾತಿಯ ನೆರವು ಅಗತ್ಯ ಕಾಲದಲ್ಲಿ ದೊರೆಯುತ್ತದೆ. ಪಿತ್ರಾರ್ಜಿತ ಆಸ್ತಿ ಒದಗುವ ಸಂದರ್ಭವಿದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ದಿನನಿತ್ಯದ ಕೆಲಸಗಳಲ್ಲಿ ಸಿಬ್ಬಂದಿಯಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಈ ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಿರಿ. ಖರ್ಚಿಗೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಶ್ರಮವಹಿಸಬೇಕು. ಸಮಾನಮನಸ್ಕರಲ್ಲಿ ಹಣಕಾಸಿನ ವಿಚಾರದಿಂದ ಸಂಬಂಧ ವ್ಯತ್ಯಾಸಗೊಳ್ಳಬಹುದು. ನಿಮ್ಮ ಮಕ್ಕಳ ಆಸೆಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಉಷ್ಣ ಪ್ರಕೃತಿ ಇರುವವರು ಎಚ್ಚರವಹಿಸಿರಿ. ದಂತ ವೈದ್ಯರಿಗೆ ಹೆಚ್ಚು ಆದಾಯವಿರುತ್ತದೆ. ತಾಯಿಯು ನಿಮ್ಮ ವ್ಯವಹಾರಕ್ಕೆ ಸಹಾಯ ಮಾಡಲು ನಿರಾಕರಿಸಬಹುದು. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ವಿದೇಶಿ ಕಚೇರಿಯ ಕೆಲಸಗಳು ಸುಲಭವಾಗಿ ಆಗುತ್ತವೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಸಹೋದರಿಯರಿಂದ ನಿಮ್ಮ ಕೆಲಸಗಳಿಗೆ ಪೂರಕ ಸಹಾಯ ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಬಂಧುಗಳ ಮನೆಯ ಸತ್ಕಾರಕೂಟದಲ್ಲಿ ಭಾಗವಹಿಸುವ ಅವಕಾಶಗಳಿವೆ. ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಆಸ್ತಿಯ ವಿಚಾರದಲ್ಲಿ ಹೊಸ ರೀತಿಯ ತಗಾದೆಗಳು ಬರಬಹುದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಯಶಸ್ಸಿರುತ್ತದೆ. ಈಗ ಸರ್ಕಾರಿ ಸಾಲಪಡೆದು ಕೈಸಾಲಗಳನ್ನು ತೀರಿಸಬಹುದು. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗುವುದು ಕಷ್ಟವಾಗಬಹುದು. ತಂದೆಯಿಂದ ಬದುಕಿನ ಪಾಠ ನಡೆಯುತ್ತದೆ. ವಿದೇಶದಲ್ಲಿ ಇದ್ದು ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.

ಸಿಂಹ ರಾಶಿ (ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಸ್ನೇಹಿತರ ಅನುಕೂಲದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಶಸ್ಸು ದೊರೆಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಸಮೀಪವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಕಫದ ಸಮಸ್ಯೆಯನ್ನು ನಿರ್ಲಕ್ಷ್ಯಮಾಡಬೇಡಿರಿ. ಉದ್ದಿಮೆದಾರರು ಶಾಂತಚಿತ್ತದಿಂದ ಕಾರ್ಮಿಕರ ಸಮಸ್ಯೆಯನ್ನು ಆಲಿಸುವುದು ಉತ್ತಮ. ಕೆಲಸದ ಒತ್ತಡ ಹೆಚ್ಚಿಗೆ ಇರುವಾಗ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಖರ್ಚುಗಳನ್ನು ಸರಿಯಾಗಿ ನಿಭಾಯಿಸುವುದು ಅತಿ ಅವಶ್ಯವಾಗಿರುತ್ತದೆ. ಗುರು ಹಿರಿಯರ ಮಾತಿಗೆ ಹೆಚ್ಚು ಬೆಲೆ ಕೊಡುವುದು ಉತ್ತಮ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಅವಕಾಶ ತೆರೆಯಲ್ಪಡುತ್ತದೆ. ತಾಯಿಯ ಆರೋಗ್ಯದ ಕಡೆ ಗಮನ ಇರಲಿ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಜಟಿಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಮಾರ್ಗದರ್ಶಕರನ್ನು ಹುಡುಕುವಿರಿ. ನಿಮ್ಮವರ ನಡುವೆ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಳ್ಳಿರಿ. ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಆದಾಯವು ನಿರೀಕ್ಷೆಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಯಾರನ್ನಾದರೂ ನಂಬಿ ಹಣ ಹೂಡುವ ಮುಂಚೆ ಅವರ ಬಗ್ಗೆ ಸರಿಯಾಗಿ ತಿಳಿಯಿರಿ. ಸಂಗಾತಿಯ ದುಂದುವೆಚ್ಚ ನಿಮ್ಮನ್ನು ಚಿಂತೆಗೀಡು ಮಾಡುತ್ತದೆ. ವೃತ್ತಿಯಲ್ಲಿ ಅನಿರೀಕ್ಷಿತ ಆಘಾತಗಳು ಎದುರಾಗಬಹುದು. ಕೃಷಿ ಮಾಡುವವರಿಗೆ ಉತ್ತಮ ನೆರವು ದೊರೆಯುತ್ತದೆ ಹಾಗೂ ಹೆಚ್ಚಿನ ಧನಸಂಪಾದನೆ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ಥಾನಕ್ಕೆ ತಕ್ಕಂತೆ  ನಡೆಯುವುದು ಉತ್ತಮ. ಕುಕ್ಕುಟೋದ್ಯಮವನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಲಾಭವಿದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಅತಿಯಾದ ಒರಟುತನ ನಿಮ್ಮನ್ನು ಜನಸಮೂಹದಲ್ಲಿ ಇಕ್ಕಟ್ಟಿಗೆ ಸಿಲುಕಿಸಬಹುದು. ಉಸಿರಾಟದಲ್ಲಿ ತೊಂದರೆ ಕಂಡುಬಂದಲ್ಲಿ ಎಚ್ಚರವಹಿಸಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮವಹಿಸಬೇಕಾದ ಅಗತ್ಯವಿದೆ. ದಿನಸಿ ಸಗಟು ದಾಸ್ತಾನುದಾರರಿಗೆ ಅಗತ್ಯವೆನಿಸುವಷ್ಟು ದಾಸ್ತಾನು ದೊರೆಯುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳು ಹುಟ್ಟಿಕೊಳ್ಳುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ನಿಮ್ಮ ಕೆಲಸ ಸರಾಗವಾಗಿ ಆಗುತ್ತದೆ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗುತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತ ಬೇಡವೇ ಬೇಡ.

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ ಜೇಷ್ಠ)
ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಯತೊಡಗುತ್ತದೆ. ಆತ್ಮೀಯರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಂತೋಷಪಡುವಿರಿ. ಪ್ರಯಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆಯಿದೆ, ಎಚ್ಚರವಹಿಸಿರಿ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ನಿರೀಕ್ಷಿತ ಆದಾಯ ಬಂದು ಸೇರುತ್ತದೆ. ಮನೆಯ ನಿರ್ಮಾಣದ ಬಗ್ಗೆ ಹಿತೈಷಿಗಳಿಂದ ಸಲಹೆ ದೊರೆಯುತ್ತದೆ. ಕಬ್ಬಿಣ, ಇಟ್ಟಿಗೆ ಮುಂತಾದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ಜಾಸ್ತಿ ಆಗುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪೊಲೀಸರಿಂದ ಪರಿಹಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಕೆಲವರಿಗೆ ಹೊಸ ವಾಹನ ಕೊಳ್ಳುವ ಯೋಗವಿದೆ. ಅನುವಂಶೀಯವಾಗಿ ಬಂದಿದ್ದ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಯಾರಿಗೂ ಯಾವುದೇ ರೀತಿಯ ಭರವಸೆಗಳನ್ನು ನೀಡಬೇಡಿರಿ. ವಾಹನ ಖರೀದಿಯು ನಿಮ್ಮಿಷ್ಟದಂತೆ ನಡೆಯುತ್ತದೆ.  ಉದ್ಯೋಗಕ್ಕೆ ಅನುಕೂಲವಾಗುವ ಹೊಸ ಜನರ ಪರಿಚಯವಾಗುತ್ತದೆ. ಮಿತ್ರರ ಜೊತೆ ಸೇರಿ ಸಣ್ಣಮಟ್ಟದ ಉತ್ಪಾದನಾ ಘಟಕವನ್ನು ಆರಂಭಿಸುವ ಆಲೋಚನೆ ಇರುತ್ತದೆ. ಧನಾದಾಯವು ಸಾಮಾನ್ಯವಾಗಿರುತ್ತದೆ. ರಾಜಕೀಯ ವ್ಯಕ್ತಿಗಳು ವೈಯಕ್ತಿಕ ಅನುಕೂಲಕ್ಕಾಗಿ ಹೆಚ್ಚು ಶ್ರಮಪಡುವರು. ರಬ್ಬರ್‌ನಿಂದ ವಿವಿಧ ಉಪಯೋಗದ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಸಂಬಂಧಿಕರಿಗೆ ಕೊಟ್ಟ ಸಾಲ ವಾಪಸ್ಸು ಬರುವುದಿಲ್ಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು ಹಾಗೂ ಲಾಭ ಸಿಗುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ, ಧನಿಷ್ಠ 1.2)
ನಿಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಿರಿ. ಮನೆಯಲ್ಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನ ಕೊಡಿರಿ. ನೀವು ಮಾಡಿದ್ದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯ ಯೋಗವಿರುತ್ತದೆ. ಬೋಧಕ ವರ್ಗದವರಿಗೆ ಹೆಚ್ಚಿನ ಸ್ಥಾನಮಾನ ದೊರೆಯುವ ಸಾಧ್ಯತೆಗಳಿವೆ. ಕಳೆದು ಹೋಗಿದ್ದ ವಸ್ತುವನ್ನು ಹುಡುಕುವಿರಿ. ನಿಮಗೆ ಅಚ್ಚರಿ ಪಡುವ ವಿಷಯವೊಂದು ಅನ್ಯರ ಮೂಲಕ ತಿಳಿದು ಬರುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಮಂದಗತಿ ಇರುತ್ತದೆ. ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಅದಿರು ಸಂಸ್ಕರಣೆಯ ಘಟಕಗಳನ್ನು ನಡೆಸುತ್ತಿರುವವರಿಗೆ ಲಾಭವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ತೂಕ ಇರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸಹಕಾರ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ಆದಾಯದಷ್ಟೇ ಖರ್ಚು ಇರುತ್ತದೆ. ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ನಿಮ್ಮ ಶ್ರಮದ ದುಡಿಮೆಗೆ ತಕ್ಕ ಫಲವಿರುತ್ತದೆ. ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ನಿಮ್ಮ ಇಷ್ಟದ ಆಸೆಗಳನ್ನು ಪೂರೈಸಿಕೊಳ್ಳಲು ಹಿರಿಯರ ಮನವೊಲಿಕೆ ಮಾಡಬೇಕಾಗುತ್ತದೆ. ಸಿಹಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಜಮೀನು ಕೊಳ್ಳುವ ನಿಮ್ಮ ಕನಸು ನನಸಾಗುತ್ತದೆ. ಉದ್ದಿಮೆದಾರರಿಗೆ ಇದ್ದ ಕಾನೂನಿನ ತೊಡಕು ನಿವಾರಣೆಯಾಗುತ್ತದೆ. ಸ್ತ್ರೀಯರಿಗೆ ಕೊಟ್ಟ ಹಣ ವಾಪಸ್ ಬರುವುದಿಲ್ಲ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ಹೊಸ ಆಸ್ತಿ ಖರೀದಿ ಮಾಡುವ ವಿಚಾರ ಮುನ್ನೆಲೆಗೆ ಬರುತ್ತದೆ. ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ನಡವಳಿಕೆಯಿಂದ ಬಂಧುಗಳು ದೂರವಾಗುವರು. ಅವಿವಾಹಿತರಿಗೆ ಸಂಬಂಧ ದೊರೆಯುವ ಸಾಧ್ಯತೆ ಇದೆ. ಕೆಲವರಿಗೆ ಭಾಷೆಗಳನ್ನು ಕಲಿಯುವ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಶ್ರಮವಹಿಸಿದರೂ ನಿರೀಕ್ಷಿತ ಫಲಿತಾಂಶ ಇರುವುದಿಲ್ಲ. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಷೇರು ವ್ಯವಹಾರ ಮಾಡುವವರಿಗೆ ಮಧ್ಯಮ ಮಟ್ಟದ ಫಲಿತಾಂಶವಿರುತ್ತದೆ. ಕುಟುಂಬ ಸಮೇತ ಪ್ರವಾಸ ಮಾಡುವ ಆಸೆ ಈಡೇರುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.