ಬುಧವಾರ, ಆಗಸ್ಟ್ 10, 2022
24 °C

ವಾರ ಭವಿಷ್ಯ 26-6-2022ರಿಂದ 2-7-2022ರ ವರೆಗೆ

ಎಂ. ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಸಂಕಲ್ಪಿತ ಕೆಲಸಗಳಲ್ಲಿ ನಿಮ್ಮ ಹಠಮಾರಿ ಧೋರಣೆಯಿಂದ ಕೆಲಸಗಳು ನಿಲ್ಲುತ್ತವೆ. ಅತಿಯಾದ ಅಹಂಕಾರದ ಮಾತುಗಳು ನಿಮ್ಮನ್ನು ಜನರಿಂದ ದೂರ ಮಾಡಬಹುದು. ಹಣದ ಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಆದರೆ ಅದರಷ್ಟೇ ಖರ್ಚು ಇರುತ್ತದೆ. ಮನೆ ಪಾಠವನ್ನು ಮಾಡುವವರಿಗೆ ಆದಾಯ ಹೆಚ್ಚಬಹುದು. ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿದೆ, ಎಚ್ಚರವಹಿಸಿರಿ. ರಿಯಲ್ ಎಸ್ಟೇಟ್ ಕೆಲಸ ಮಾಡುವ ಉದ್ಯಮಿಗಳು ನಿಧಾನ ಚೇತರಿಕೆಯನ್ನು  ಕಾಣಬಹುದು. ನಿಮ್ಮ ಆಸ್ತಿ ಸಂಬಂಧಿತ ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಬಹುದು. ಇದನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಆಭರಣ ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚಾಗುವುದು. ಸ್ವಂತ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಒಂದು ರೀತಿ ಆನಂದದಾಯಕ ವಾರವಾಗಿರುತ್ತದೆ. ವೃತ್ತಿಯಲ್ಲಿದ್ದ ಗೊಂದಲ ಗೋಜಲುಗಳು ನಿವಾರಣೆಯಾಗುತ್ತವೆ. ಕೃಷಿಕರಿಗೆ ನಿರೀಕ್ಷಿಸಿದಷ್ಟು ಆದಾಯ ಬರಲಿದೆ. ಅವರ ಇದ್ದ ಬೆಳೆಗೆ ಹೆಚ್ಚು ಆದಾಯ ಬರುತ್ತದೆ. ಹಣದ ಒಳಹರಿವು ತೃಪ್ತಿ ತರುವಷ್ಟು ಇರುತ್ತದೆ. ಸರ್ಕಾರದಿಂದ ಬರಬೇಕಾದ ಎಲ್ಲ ರೀತಿಯ ಸಹಾಯಧನಗಳು ಬರುತ್ತವೆ. ನಿಮ್ಮ ಸ್ಥಿರಾಸ್ತಿಯ ವ್ಯವಹಾರಗಳಲ್ಲಿ ಹೊಸ ಚೇತರಿಕೆಯನ್ನು ಕಾಣಬಹುದು. ದೊಡ್ಡ ಯೋಜನೆಗಳಲ್ಲಿ ಪಾಲುದಾರರಾಗಲು ಅವಕಾಶ ದೊರೆಯಬಹುದು. ವ್ಯಕ್ತಿತ್ವ ಮತ್ತು ನಡವಳಿಕೆಯಿಂದ ಜನರ ಮಧ್ಯೆ ಸಾಕಷ್ಟು ಗೌರವ ದೊರೆಯುತ್ತದೆ. ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ. ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕಂಪನಿಗಳಿಗೆ ಬೇಡಿಕೆ ಹೆಚ್ಚುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅತಿಯಾದ ಆತ್ಮಗೌರವ ನಿಮ್ಮನ್ನು ಮುಜುಗರಕ್ಕೆ ಈಡುಮಾಡಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರ ಆದಾಯ ನಿರೀಕ್ಷೆಗಿಂತ ಹೆಚ್ಚಾಗುತ್ತದೆ. ಉದ್ದಿಮೆದಾರರಿಗೆ ಜಾಣ್ಮೆಯಿಂದ ಕಾರ್ಮಿಕರ ಮನಸ್ಸನ್ನು ಗೆದ್ದು ಉತ್ಪಾದನೆ ಹೆಚ್ಚಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ನಿಮ್ಮ ಕೈಲಾದ ಸಹಾಯವನ್ನು ಸಂಕಷ್ಟದಲ್ಲಿ ಇರುವವರಿಗೆ ಮಾಡಲು ಉತ್ಸಾಹ ತೋರುವಿರಿ. ನ್ಯಾಯಾಲಯದ ಕಟ್ಟಲೆಗಳ ವಿಚಾರದಲ್ಲಿ ಸ್ವಲ್ಪಮಟ್ಟಿನ ಮಂದಗತಿಯನ್ನು ಕಾಣಬಹುದು. ರಾಜಕೀಯ ವ್ಯಕ್ತಿಗಳು ತಮ್ಮ ಭವಿಷ್ಯಕ್ಕಾಗಿ ಗಂಭೀರ ಚಿಂತನೆಯನ್ನು ನಡೆಸುವ ಅಗತ್ಯವಿದೆ. ಮಕ್ಕಳ ನಡವಳಿಕೆಯಿಂದ ಸಾಕಷ್ಟು ಬೇಸರವಾಗಬಹುದು. ಕಬ್ಬಿಣದ ಮಾರಾಟಗಾರರಿಗೆ ಹೆಚ್ಚು ಲಾಭ ಬರುವ ಸಾಧ್ಯತೆ ಇದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಸರ್ಕಾರಿ ಕೆಲಸಗಳಲ್ಲಿ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಬಹುದು. ಹಿರಿಯ ಅಧಿಕಾರಿಗಳಿಂದ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ನಿರೀಕ್ಷಿತ ಆದಾಯ ಕಡಿಮೆಯಾದರೂ ಖರ್ಚು ಹೆಚ್ಚಾಗುವ ಎಲ್ಲ ಲಕ್ಷಣಗಳಿವೆ. ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ಸ್ಥಾನ ಹೆಚ್ಚಾಗುತ್ತದೆ. ಆಸ್ತಿ ಸಂಬಂಧಿತ ಹೊಸ ವ್ಯಾಜ್ಯಗಳು ತಲೆದೋರಬಹುದು. ಮಕ್ಕಳ ಏಳಿಗೆಯ ಬಗ್ಗೆ ನಿರೀಕ್ಷಿತ ಸಮಾಚಾರಗಳು ಇರುವುದಿಲ್ಲ. ಉದರ ಸಂಬಂಧಿ ಕಾಯಿಲೆಗಳು ಕಾಡಬಹುದು. ಸಂಗಾತಿಯ ವಿಚಿತ್ರ ನಡವಳಿಕೆ ಬೇಸರ ತರಿಸುತ್ತದೆ. ಹಿರಿಯರಿಂದ ಆಸ್ತಿಒದಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ಮಾಡುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಬಟ್ಟೆ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ನಿಮ್ಮ ನಡವಳಿಕೆಯಲ್ಲಿ ಸ್ವಲ್ಪಮಟ್ಟಿನ ನಿಧಾನಗತಿಯನ್ನು ಕಾಣಬಹುದು. ಸರ್ಕಾರಿ ಮಟ್ಟದ ಕೆಲಸ ಕಾರ್ಯ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಹೆಚ್ಚಿನ ಶ್ರಮ ಹಾಕಲೇಬೇಕಾದ ಅನಿವಾರ್ಯತೆ ಇರುತ್ತದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ಇರುವವರಿಗೆ ಬದಲಿ ರೀತಿಯ ಚಿಕಿತ್ಸೆ ತಿಳಿಯಬಹುದು. ಸಂಗಾತಿಯ ನಡುವೆ ಕಾವೇರಿದ ಮಾತುಗಳು ಆಗುವ ಸಾಧ್ಯತೆಯಿದೆ, ಹೆಚ್ಚಿನ ತಾಳ್ಮೆ ಅಗತ್ಯ. ರೈತರ ಕೃಷಿ ಆದಾಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಗಳು ಇವೆ. ತಮ್ಮ ಮಕ್ಕಳ ಸಂಬಂಧವಾಗಿ ಹಿರಿಯರಿಗೆ ವಿದೇಶ ಪ್ರಯಾಣ ಒದಗಿಬರಬಹುದು. ನೀವು ಉದ್ಯೋಗ ಮಾಡುವ ಸ್ಥಳದಲ್ಲಿದ್ದ ಸಂಕಷ್ಟಗಳು ಕರಗಿ ಸಂತೋಷ ಮೂಡುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸ್ವಯಂ ಉದ್ಯೋಗ ಮಾಡುವವರಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಹೊಸ ವಿವಾದಗಳನ್ನು ಸೃಷ್ಟಿಸಿ ವೈರಿಗಳನ್ನು ಹೆಚ್ಚಿಸಿಕೊಳ್ಳುವಿರಿ. ಕೋರ್ಟು ಸಂಬಂಧಿ ವ್ಯಾಜ್ಯಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಆರ್ಥಿಕ ಭದ್ರತೆಗಾಗಿ ಹೋರಾಟ ನಡೆಸುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಸ್ವಜನರಿಂದಲೇ ಮೋಸವಾಗುವ ಸಾಧ್ಯತೆಗಳಿವೆ, ಎಚ್ಚರ. ವೃತ್ತಿಯಲ್ಲಿ ಗುರಿಸಾಧನೆಗಾಗಿ ತಾಳ್ಮೆ ವಹಿಸಬೇಕು. ಹಿರಿಯರ ಸಹಾಯದಿಂದ ವೃತ್ತಿಯಲ್ಲಿದ್ದ ತೊಡಕುಗಳು ನಿವಾರಣೆಯಾಗಬಹುದು. ಸಂಗಾತಿಯ ಕಡೆಯವರಿಂದ ಹಳೆಯ ವೈಷಮ್ಯಗಳು ಪುನಃ ಕಾಣಿಸಬಹುದು. ಉದರ ಸಂಬಂಧಿ ಕಾಯಿಲೆಗಳು ಕಾಣಿಸಬಹುದು. ಕೆಲವರಿಗೆ ಅನಿರೀಕ್ಷಿತವಾಗಿ ವಿದೇಶಿ ಕಂಪನಿಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸಂಗಾತಿಯೊಂದಿಗೆ ರಂಪಾಟ ಹೆಚ್ಚಾಗುವ ಸಾಧ್ಯತೆ ಇದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಮಾನಸಿಕ ನೆಮ್ಮದಿಗೆ ಕುತ್ತು ಬರಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೆಲವು ಬಂಧುವರ್ಗದವರ ಅನಿರೀಕ್ಷಿತ ಭೇಟಿಯಾಗಬಹುದು. ವಿರೋಧಿಗಳ ಮೇಲೆ ಹೂಡುವ ತಂತ್ರ ನಿಮಗೆ ತಿರುಗುಬಾಣವಾಗಬಹುದು. ಮಕ್ಕಳಿಂದ ನಿಮಗೆ ಬೇಸರ ತರುವ ಸಂಗತಿಗಳು ನಡೆಯುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ತಮ್ಮ ಅಭಿವೃದ್ಧಿಗಾಗಿ ಹೊಸ ಮಾರ್ಗಗಳು ಗೋಚರಿಸಬಹುದು. ದಿನಸಿ ವ್ಯಾಪಾರ ಮಾಡುವವರಿಗೆ ಹೆಚ್ಚುವ್ಯಾಪಾರ ನಡೆಯುತ್ತದೆ. ಸ್ವಂತ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿ ವೈದ್ಯರನ್ನು ಕಾಣುವ ಸಂದರ್ಭವಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ವೃಶ್ಚಿಕ ರಾಶಿ(ವಿಶಾಖಾ 4 ಅನುರಾಧ ಜೇಷ್ಠ)  

ವಾಸ್ತು ವಿನ್ಯಾಸಕಾರರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಗೃಹ ನಿರ್ಮಾಣ ಕಾರ್ಯ ನಿಧಾನವಾದರೂ ನಿಲ್ಲುವುದಿಲ್ಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುವ ಸಂದರ್ಭವಿದೆ. ಹಿರಿಯರ ಆರೋಗ್ಯದಲ್ಲಿ ಗಣನೀಯ ಚೇತರಿಕೆಯನ್ನು ಕಾಣಬಹುದು. ಮಕ್ಕಳಿಂದ ಗೌರವ ಮತ್ತು ನಿರೀಕ್ಷಿತ ಧನಸಹಾಯ ದೊರೆಯುವ ಸಂದರ್ಭವಿದೆ. ನ್ಯಾಯಯುತ ಮಾರ್ಗದಿಂದ ದುಡಿಮೆ ಮಾಡಿ ಸಂತಸಪಡುವಿರಿ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.  ವಿದೇಶಿ ಕಂಪನಿಗಳಲ್ಲಿ ಬಂಡವಾಳ ಹೂಡುವುದಕ್ಕಿಂತ ಮೊದಲು ಸರಿಯಾಗಿ ಆಲೋಚಿಸಿರಿ. ಪ್ರೇಮಿಗಳು ಪರಸ್ಪರ ಒಪ್ಪಿಗೆಯ ಮೂಲಕ ಪ್ರೇಮವನ್ನು ಮುಂದುವರಿಸಬಹುದು. ಸಂಬಂಧಪಟ್ಟ ದಾಖಲೆಪತ್ರಗಳನ್ನು ಸರಿಯಾಗಿ ಕಾಪಾಡಿರಿ.  ಹಿರಿಯರಿಂದ ವ್ಯವಹಾರದ ಗುಟ್ಟುಗಳು ನಿಮಗೆ ತಿಳಿಯುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ನೀವು ಯೋಜಿಸಿದ ಮಹತ್ತರವಾದ ಯೋಜನೆಗಳ ಬಗ್ಗೆ ಹಿತೈಷಿಗಳ ಜೊತೆ ಚರ್ಚೆಯನ್ನು ಮಾಡಿದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರಗಳು ದೊರೆಯುತ್ತವೆ. ಅಗ್ನಿಯ ಜೊತೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಇರುವುದು ಒಳ್ಳೆಯದು. ಶಸ್ತ್ರ ಚಿಕಿತ್ಸೆಯನ್ನು ಮಾಡುವ ವೈದ್ಯರಿಗೆ ಉತ್ತಮ ಹೆಸರು ಮತ್ತು ಧನಲಾಭವಾಗುತ್ತದೆ. ಕೆಲವರಿಗೆ ವಿದೇಶ ಪ್ರಯಾಣ ಯೋಗವಿದೆ. ಇಷ್ಟಪಟ್ಟು ಮಾಡಿದ ಕೆಲಸಗಳಲ್ಲಿ ಉತ್ತಮ ಫಲಿತಾಂಶವಿರುತ್ತದೆ. ಉದ್ಯೋಗ ಬದಲಾವಣೆಗಾಗಿ ಕಾಯುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸಾಮಾನ್ಯ ಗತಿಯಲ್ಲಿರುತ್ತದೆ. ವಿದೇಶಿ ಭಾಷೆಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ಸಂಗಾತಿ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ    ಧನಿಷ್ಠ 1.2)  

ವಾಹನಾದಿಗಳಿಂದ ಸಂತೋಷಪಡುವ ದಿನ. ಸಮಾಜದಿಂದ ನಿಮಗೆ ಗೌರವ ಪುರಸ್ಕಾರಗಳು ದೊರೆಯುವ ಸಂದರ್ಭವಿದೆ. ಹರಿತವಾದ ವಸ್ತುಗಳನ್ನು ಉಪಯೋಗಿಸುವಾಗ ಎಚ್ಚರಿಕೆ ಇರಲಿ. ಬಹಳ ದಿನಗಳಿಂದ ಇದ್ದ ಕೆಲಸದ ಒತ್ತಡ ನಿವಾರಣೆಯಾಗಿ ಸ್ವಲ್ಪ ಆರಾಮವೆನಿಸುತ್ತದೆ. ಧಾರ್ಮಿಕ ವಿಚಾರಗಳತ್ತ ಹೆಚ್ಚು ಸೆಳೆತ ಬರುತ್ತದೆ. ನೆರೆಹೊರೆಯವರೊಂದಿಗೆ ಸಂಬಂಧ ಉತ್ತಮಗೊಳ್ಳುತ್ತದೆ. ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹೊಸ ಸ್ಥಿರಾಸ್ತಿ ಖರೀದಿಯ ಬಗ್ಗೆ ಈಗ ಅವಸರ ಬೇಡ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಮುನ್ನಡೆ ಇರುತ್ತದೆ. 

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಹಿರಿಯರು ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗುವರು. ಅವರ ಮಾರ್ಗದರ್ಶನವನ್ನು ಸಾಕಷ್ಟು ಮಂದಿ ಬಳಸಿಕೊಳ್ಳುವರು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹೆಚ್ಚಿನ ಮುನ್ನಡೆಯನ್ನು ಕಾಣಬಹುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಹಾಗೆ ಆದಾಯವೂ ಹೆಚ್ಚುತ್ತದೆ. ಮಕ್ಕಳ ಬಗ್ಗೆ ಶುಭ ಸಮಾಚಾರಗಳು ಕೇಳಿಬರುತ್ತವೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭಾಗವಹಿಸುವುದು ಬೇಡ. ಹೊಸ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಂದರ್ಭವಿದೆ. ಶೀತಬಾಧೆ ಇರುವವರು ಹೆಚ್ಚಿನ ಎಚ್ಚರ ತೆಗೆದುಕೊಳ್ಳಬೇಕು. ಸ್ಥಿರಾಸ್ತಿ ದಾಖಲೆಯಲ್ಲಿದ್ದ ತೊಂದರೆಗಳು ನಿವಾರಣೆಯಾಗುತ್ತವೆ. ಸಂಗಾತಿ ಕಡೆಯವರ ಶುಭಕಾರ್ಯಗಳಿಗೆ ಹೋಗಿಬರುವ ಸಂದರ್ಭವಿದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)     

ಉದ್ಯೋಗ ಸ್ಥಳದಲ್ಲಿ ಒತ್ತಡಗಳು ಹೆಚ್ಚಾಗಬಹುದು. ಭೂಮಿಯ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದೇಶಿ ಹಣದ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಮುನ್ನಡೆ ಇರುತ್ತದೆ. ದಿಢೀರ್‌ ಆರೋಗ್ಯ ವ್ಯತ್ಯಾಸಗಳನ್ನು ಎದುರಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ  ಫಲವಿರುತ್ತದೆ. ನೆರೆಹೊರೆಯವರೊಡನೆ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನಗಳಲ್ಲಿ ಹಿನ್ನಡೆಯಾಗಬಹುದು. ನಿಮ್ಮ ಹರಿತವಾದ ಮಾತು ಬಂಧುಗಳನ್ನು ದೂರಮಾಡುತ್ತದೆ. ಪಿತ್ರಾರ್ಜಿತ ಆಸ್ತಿಗಾಗಿ ಹೋರಾಟ ಮಾಡುವಿರಿ. ಆಭರಣ ಕೊಳ್ಳುವಾಗ ಮೋಸ ಹೋಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.