ಬುಧವಾರ, ನವೆಂಬರ್ 30, 2022
16 °C

ವಾರ ಭವಿಷ್ಯ 14-8-2022ರಿಂದ 20-8-2022ರವರೆಗೆ

ಎಂ. ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ನಯವಂಚಕರ ಜಾಲಕ್ಕೆ ಬಿದ್ದು ಒದ್ದಾಡುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರವಹಿಸಿರಿ. ಕೃಷಿಕರಿಗೆ ಆದಾಯ ಹೆಚ್ಚುವ ಸಂದರ್ಭವಿದೆ. ಆಹಾರದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ವಾಹನಗಳ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಹೆಚ್ಚು ಅಲೆದಾಟ ಆಗಬಹುದು. ಹಣದ ಒಳಹರಿವು ಈಗ ಸಾಮಾನ್ಯಗತಿಯಲ್ಲಿ ಇರುತ್ತದೆ. ಮನೆ ಅಥವಾ ಯಂತ್ರಗಳ ನವೀಕರಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ವಿದೇಶ ವ್ಯಾಸಂಗ ಮಾಡಬೇಕೆನ್ನುವ ಅಭಿಲಾಶಿಗಳಿಗೆ ಶುಭಸುದ್ದಿ ಇರುತ್ತದೆ. ಹಣ ಹೂಡಿಕೆಯ ಬಗ್ಗೆ ಸಾಕಷ್ಟು ತಿಳಿವಳಿಕೆಯನ್ನು ಪಡೆದು ಹಣ ಹೂಡಿರಿ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ನಿಮ್ಮ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತವಾದಂತೆ ಭಾಸವಾದರೂ ಮುಂದುವರೆಯುತ್ತವೆ. ಮಕ್ಕಳ ಪ್ರತಿಭೆಯ ಬಗ್ಗೆ ಬಂಧುಗಳು ಸಂತಸದ ಮಾತುಗಳಾಡುವುದನ್ನು ಕೇಳಿ ಸಂತಸಪಡುವಿರಿ. ಆಸ್ತಿ ವ್ಯವಹಾರಗಳನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಹಣದ ಒಳಹರಿವು ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಕೆಲವು ಸಮಸ್ಯೆಗಳನ್ನು ಯಥೋಚಿತವಾಗಿ ಬಗೆಹರಿಸಿಕೊಳ್ಳುವ ಅವಕಾಶಗಳು ಒದಗಿಬರುತ್ತವೆ. ಆತ್ಮೀಯ ಬಂಧುಗಳು ಮನೆಗೆ ಬರುವ ಸಾಧ್ಯತೆಗಳಿವೆ. ಕೆಲವು ಅಧಿಕಾರಿಗಳಿಗೆ ಸಹಾಯಕರಿಂದ ನಿರೀಕ್ಷಿಸಿದ ಸಹಾಯ ದೊರೆಯುತ್ತದೆ. ಹೂವು ಮಾರಾಟಗಾರರಿಗೆ ಹೆಚ್ಚು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ನಡೆಯುವ ಸಾಧ್ಯತೆಗಳಿವೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮೊಂಡುವಾದಗಳಿಂದ ಯಾವುದೇ ಪ್ರಯೋಜನ ಇರುವುದಿಲ್ಲ, ಬದಲಾಗಿ ಕಿರುಕುಳ ಆಗಬಹುದು. ಹಣದ ಒಳಹರಿವು ನಿಮ್ಮ  ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಒಡಹುಟ್ಟಿದವರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಹೈನುಗಾರಿಕೆಯನ್ನು  ಮಾಡುವವರಿಗೆ ಏಳಿಗೆ ಇರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಹೋದ್ಯೋಗಿಗಳೊಡನೆ ಸಂಬಂಧ ಹೆಚ್ಚಿಸಿಕೊಳ್ಳುವುದು ಬಹಳ ಉತ್ತಮ. ವಿಪರೀತ ತಲೆನೋವು ನಿಮ್ಮನ್ನು ಬಾಧಿಸಬಹುದು. ಮಾತುಗಳನ್ನು ಸಮಯೋಚಿತವಾಗಿ ಆಡುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸಾಮಾಜಿಕ ಕೆಲಸ ಮಾಡುವವರಿಗೆ ಸಂದರ್ಭೋಚಿತವಾದ ಸಹಾಯ ದೊರೆಯುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಬಹುದಿನಗಳ ನಂತರ ಕುಟುಂಬದ ಸದಸ್ಯರೊಡನೆ ಸಂತಸವಾಗಿ ಕಾಲ ಕಳೆಯುವಿರಿ. ನಿಮ್ಮ ನಡವಳಿಕೆ ವ್ಯಾವಹಾರಿಕವಾಗಿರುತ್ತದೆ. ಹೊಸ ಉದ್ಯೋಗ ಅವಕಾಶದಿಂದಾಗಿ ಜೀವನ ಶೈಲಿಯು ಬದಲಾವಣೆಯನ್ನು ಕಾಣುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಸಂಶೋಧನಾ ನಿರತರಿಗೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆಗಳಿವೆ. ಕೃಷಿ ಬಾಂಧವರಿಗೆ ಉತ್ತಮ ಸೌಲಭ್ಯ ದೊರೆಯುತ್ತದೆ. ನಿಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣಬಹುದು. ಸಂಗಾತಿಯೊಡನೆ ಕಾವೇರಿದ ಮಾತುಗಳು ಆಗುವ ಸಾಧ್ಯತೆಗಳಿವೆ. ಅತಿ ಪ್ರಯಾಣದಿಂದ ದೇಹಾಲಸ್ಯ ಆಗಬಹುದು. ಕುಶಲಕರ್ಮಿಗಳಿಗೆ ಹೆಚ್ಚು ಬೇಡಿಕೆ ಬರುವ ಸಾಧ್ಯತೆಗಳಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರಿಗೆ ಸಾಮಾನ್ಯವಾದ ದಿನವಾಗಿರುತ್ತದೆ. ಎಲ್ಲ ವ್ಯವಹಾರಗಳ ಬಗ್ಗೆ ಜಾಗರೂಕತೆ ಅತಿ ಮುಖ್ಯ. ನಿಮ್ಮ ಗೆಳೆಯರು ಸಹಾಯಕ್ಕಾಗಿ ನಿಮ್ಮ ಬಳಿ ಬರುವರು. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಹೊರೆಯವರ ಬಳಿ ಕಿರಿಕಿರಿಯಾಗಬಹುದು. ಕ್ರೀಡಾಪಟುಗಳಿಗೆ ಹೆಚ್ಚು ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ಉತ್ತಮ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಅವರಿಂದ ನೀವು ಪ್ರಭಾವಿತರಾಗುವಿರಿ. ನಿಮ್ಮ ಮೌನ ನಿಮ್ಮ ಕೆಲವೊಂದು ಸಮಸ್ಯೆಗಳನ್ನು ದೂರಮಾಡುವುದು. ಹಳೆಯ ಸಾಲಗಳನ್ನು ತೀರಿಸಲು ಮಾರ್ಗೋಪಾಯಗಳನ್ನು ಹುಡುಕುವಿರಿ. ಹಣದ ಒಳಹರಿವು ಅಗತ್ಯವನ್ನು ಪೂರೈಸುತ್ತದೆ. ಸರ್ಕಾರಿ ಸಂಬಂಧಿತ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಕುಟುಂಬದ ಸಮಸ್ಯೆಗಳತ್ತ ಹೆಚ್ಚು ಗಮನ ಹರಿಸುವಿರಿ. ಸಂಗೀತಗಾರರಿಗೆ ಒಳ್ಳೆಯ ಅವಕಾಶ ದೊರೆಯುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಹೊಸ ಸಂಪಾದನೆಯ ಮಾರ್ಗ ಒದಗಿ ಸಂತಸವಾಗುತ್ತದೆ. ಯಾವುದೇ ದುಡುಕಿನ ನಿರ್ಧಾರಗಳು ಖಂಡಿತ ಬೇಡ. ಸರಕು ಸಾರಿಗೆ ಮಾಡುವವರಿಗೆ ಹೆಚ್ಚು ಸಂಪಾದನೆಯಾಗುವ ಸಂದರ್ಭವಿದೆ. ಧೈರ್ಯ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಲ್ಲಿ ನೀವು ಹಿಡಿದ ಕೆಲಸವನ್ನು ಸಾಧಿಸಬಹುದು. ಸ್ನೇಹಿತರೊಡನೆ ಹಣಕಾಸಿನ ವ್ಯವಹಾರಗಳನ್ನು ಮಾಡುವಾಗ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮ ಹಾಕಬೇಕಾದ ಅಗತ್ಯ ಖಂಡಿತ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ಅನಿರೀಕ್ಷಿತ ವಿದೇಶ ಪ್ರಯಾಣಗಳು ವೃತ್ತಿಯಲ್ಲಿ ಬರಬಹುದು.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸಂಶೋಧನೆಗಳನ್ನು ಮಾಡುತ್ತಿರುವವರಿಗೆ ಹೆಚ್ಚಿನ ಸಹಕಾರ ಮತ್ತು ಸೌಲಭ್ಯಗಳು ದೊರೆಯುತ್ತವೆ. ಪ್ರವಾಸ ಮಾಡುವಾಗ ಹೆಚ್ಚಿನ ಎಚ್ಚರಿಕೆ ಇರಲಿ. ನೀರು ಮತ್ತು ಆಹಾರದಿಂದ ಅನಾರೋಗ್ಯವಾಗಬಹುದು. ನಿರ್ಮಾಣ ಕೆಲಸ ಮಾಡುವವರಿಗೆ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸುವಲ್ಲಿ ಹಿನ್ನಡೆ ಆಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಹಣ್ಣು-ತರಕಾರಿ ವ್ಯಾಪಾರಿಗಳಿಗೆ ಲಾಭ ಸಿಗುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ವಸೂಲಿ ಕಷ್ಟವಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸರ್ಕಾರಿ ವಲಯದಿಂದ ಆಗಬೇಕಾದ ಕೆಲಸಗಳಿಗೆ ಚಾಲನೆ ದೊರೆಯುತ್ತದೆ. ಕೃಷಿಕರಿಗೆ ಆದಾಯ ಕಡಿಮೆಯಾಗಬಹುದು. ಆದರೆ ಉತ್ತಮ ಬೆಳೆಯಾಗುವ ನಿರೀಕ್ಷೆಯಿದೆ.

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ನಿಮ್ಮ ಇಂದಿನ ಉತ್ತಮ ಯೋಚನೆಗಳು ಮುಂದೆ ಉತ್ತಮ ಫಲ ಕೊಡುತ್ತವೆ. ನಿರೀಕ್ಷೆಯಷ್ಟು ಆದಾಯವನ್ನು ಕಾಣಬಹುದು. ಶಿಲ್ಪಕಲೆ ಮತ್ತು ಮೂರ್ತಿ ತಯಾರಕರಿಗೆ ವ್ಯವಹಾರ ಹೆಚ್ಚುತ್ತದೆ. ಪತ್ರಿಕೋದ್ಯಮದಲ್ಲಿ ಇರುವವರಿಗೆ ಪ್ರಮುಖ ವ್ಯಕ್ತಿಗಳನ್ನು ಸಂದರ್ಶಿಸುವ ಅವಕಾಶ ದೊರೆಯುತ್ತದೆ. ರಾಜಕೀಯದಲ್ಲಿ ಇರುವವರಿಗೆ ಸ್ವಲ್ಪ ದುಗುಡ, ದುಮ್ಮಾನಗಳು ಎದುರಾಗಬಹುದು ಹಾಗೂ ಅವರ ಆಪ್ತ ಹಿಂಬಾಲಕರಿಂದ ಮೋಸಹೋಗುವ ಸಾಧ್ಯತೆಗಳಿವೆ. ವಾಕ್ಚಾತುರ್ಯದಿಂದ ಕೆಲಸಗಳನ್ನು ಸಾಧಿಸಿಕೊಳ್ಳಬಹುದು. ನಿಮ್ಮ ಶತ್ರುಗಳನ್ನು ಅವರದೇ ತಂತ್ರ ಬಳಸಿ ಮಟ್ಟಹಾಕುವಿರಿ. ಅನಿರೀಕ್ಷಿತ ಕಾಯಿಲೆಗಳಿಂದ ಕೊಂಚ ವಿಚಲಿತರಾಗುವಿರಿ. ಸಂಬಂಧಿಕರೊಡನೆ ಉತ್ತಮ ಸಂಬಂಧ ಏರ್ಪಡುತ್ತದೆ. ಹಿರಿಯರಿಂದ ಉತ್ತಮ ಧನಸಹಾಯ ದೊರೆಯುವ ಸಾಧ್ಯತೆ ಇದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ಬಹಳ ಚುರುಕಾಗಿ ಕೆಲಸ ಮಾಡುವಿರಿ. ನೀವು ಯೋಚಿಸುವ ಕೆಲವು ಕೆಲಸಗಳು ವಿಳಂಬವಾದರೂ ಕೆಲಸದಲ್ಲಿ ಪೂರ್ಣ ಯಶಸ್ಸು ದೊರೆಯುತ್ತದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪ್ರಕೃತಿ ಪ್ರಿಯರಿಗೆ ಗೌರವ ದೊರೆಯುವ ಸಾಧ್ಯತೆ ಇದೆ. ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ಹೊಸ ವ್ಯವಹಾರವನ್ನು ಆರಂಭಿಸುವಿರಿ. ಭೂ ಸಂಬಂಧಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ರಾಸಾಯನಿಕ ತಯಾರಿಕಾ ಕಾರ್ಖಾನೆಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ತಯಾರಿಕಾ ಬೇಡಿಕೆಗಳು ದೊರೆಯುತ್ತವೆ. ಕೃಷಿಯಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಸರ್ಕಾರಿ ದಾಖಲಾತಿಗಳನ್ನು ಪಡೆಯುವ ವಿಚಾರದಲ್ಲಿ ಹಿನ್ನಡೆ ಇರುತ್ತದೆ. ತಂದೆಯಿಂದ ಬಂದ ವ್ಯವಹಾರಗಳನ್ನು ಮುಂದುವರಿಸುವುದರಿಂದ ನಿಮಗೆ ಲಾಭವಿದೆ. 

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ನಿರುದ್ಯೋಗಿಗಳಿಗೆ ಹಿರಿಯ ಸ್ಥಾನದಲ್ಲಿರುವ ಜನರ ಪರಿಚಯವಾಗಿ ಅವರಿಂದ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಲಾಭ ಬರುತ್ತದೆ. ರಾಜಕಾರಣಿಗಳಿಗೆ ಕ್ಷೇತ್ರದ ಮೇಲೆ ಹಿಡಿತ ಹೊಂದುವ ಸಾಧ್ಯತೆ ಒದಗಿ ಬರುತ್ತದೆ. ಷೇರು ವ್ಯಾಪಾರಸ್ಥರ ವ್ಯವಹಾರ ಸ್ಥಿರವಾಗಿರುತ್ತದೆ. ವ್ಯಾಪಾರಸ್ಥರು ಜಾಹೀರಾತಿನ ಮೂಲಕ  ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬಹುದು. ದುಡ್ಡಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯನ್ನು ವಹಿಸಿರಿ. ಅನಿರೀಕ್ಷಿತ ಖರ್ಚು ಬರುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿನ ದಾವೆಗಳು ನಿಮ್ಮ ಪರವಾಗಿ ಆಗುವ ಲಕ್ಷಣಗಳಿವೆ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು. ಕ್ರೀಡಾಪಟುಗಳಿಗೆ ಅವರ ಉದ್ಯೋಗದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುವ ಸಾಧ್ಯತೆ ಇದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಕೆಲವು ಮುಖ್ಯ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳುವುದು ಉತ್ತಮ. ಕೆಲವರಿಗೆ ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗುವ ಸಾಧ್ಯತೆಗಳಿವೆ. ತಂದೆಯಿಂದ ಮನೆ ನಿರ್ಮಾಣದ ಖರ್ಚಿನ ಬಗ್ಗೆ ಪ್ರಸ್ತಾಪವಾಗಬಹುದು. ಈ ಬಗ್ಗೆ ಮನೆಯಲ್ಲಿ ಕಾವೇರಿದ ಮಾತುಗಳು ಆಗಬಹುದು. ಹಣದ ಒಳಹರಿವು ಸಮಾಧಾನಕರವಾಗಿರುತ್ತವೆ. ಯುವಕರು ಎಲ್ಲಾ ಕೆಲಸಗಳಲ್ಲೂ ಧನಲಾಭವನ್ನು ಆಲೋಚಿಸಬಾರದು. ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಕೆಲವು ಕೃಷಿಕರಿಗೆ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಒಡಹುಟ್ಟಿದವರಿಂದ ಯಾವುದೇ ಸಹಾಯವನ್ನು ನಿರೀಕ್ಷೆ ಮಾಡಬೇಡಿ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ನಿಧಾನಗತಿಯನ್ನು ಕಾಣಬಹುದು. ಕೆಲವು ವ್ಯಾಪಾರಸ್ಥರಿಗೆ ಅನಿರೀಕ್ಷಿತ ಲಾಭವಿರುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ದೂರವಾಗುತ್ತದೆ. ಸ್ವಯಂ ಉದ್ಯೋಗಿಗಳಿಗೆ ಅಧಿಕ ಪರಿಶ್ರಮದಿಂದ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ. ಸಮಾಜದ ಕೆಲವು ಧುರೀಣರಿಗೆ ಅಪಮಾನಕರ ಘಟನೆಗಳು ಎದುರಾಗಬಹುದು. ನೆರೆಹೊರೆಯವರೊಡನೆ ಸಂಬಂಧ ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಉತ್ತಮ. ಕೆಲವರಿಗೆ ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ ಹಾಗೂ ಸಂಪಾದನೆ ಇರುತ್ತದೆ. ಹಣದ ಒಳಹರಿವು ಹೇಳಿಕೊಳ್ಳುವಂತೆ ಇರುವುದಿಲ್ಲ. ಒಟ್ಟು ಕುಟುಂಬದ ವ್ಯವಹಾರದಲ್ಲಿ ಲಾಭವಿರುತ್ತದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.