ಸೋಮವಾರ, ಏಪ್ರಿಲ್ 26, 2021 ದೈನಂದಿನ ರಾಶಿ ಭವಿಷ್ಯ

ಮೇಷ
ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಬಂಧುಗಳ ಜೊತೆ ವಿಚಾರ ಮಾಡಿ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಹೊಸ ಉದ್ಯಮದ ಬಗ್ಗೆ ತಯಾರಿ.
ವೃಷಭ
ಹೊಸಬರಿಗೆ ಬರವಣಿಗೆ ಅಥವಾ ಅನುವಾದಗಳಲ್ಲಿ ಕೆಲಸಗಳಿಗೆ ಉತ್ತೇಜನ ನೀಡಲಿದ್ದೀರಿ. ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಪ್ರಯಾಣದಲ್ಲಿ ಸುಖಾನುಭವವಾಗಲಿದೆ.
ಮಿಥುನ
ಆಸ್ತಿಯನ್ನು ಖರೀದಿಸುವ ಸಾಧ್ಯತೆ. ವಾಹನ ರಿಪೇರಿ, ಮಾರಾಟಗಾರರಿಗೆ ಹೆಚ್ಚಿನ ಆದಾಯ. ಕಾನೂನಿಗೆ ಸಂಬಂಧಿಸಿದ ವಿಷಯದಲ್ಲಿ ಸೂಕ್ತ ಸಲಹೆ ಪಡೆದು ವ್ಯವಹರಿಸುವುದು ಒಳಿತು.
ಕಟಕ
ವರಮಾನದಲ್ಲಿ ಗಣನೀಯ ಸುಧಾರಣೆ. ವಿದೇಶದಿಂದ ಮಕ್ಕಳ ಅಥವಾ ಸಮೀಪ ಬಂಧುಗಳ ಆಗಮನಕ್ಕಾಗಿ ಎದುರು ನೋಡುವಿರಿ. ಗೃಹಾಲಂಕಾರ ವಸ್ತುಗಳ ಖರೀದಿ ಸಾಧ್ಯತೆ.
ಸಿಂಹ
ಕಳೆದುಹೋದ ವಸ್ತು ಅಥವಾ ಬಹುದಿನಗಳಿಂದ ಬರಬೇಕಾಗಿದ್ದ ಹಣ ಪುನಃ ಪಡೆದುಕೊಳ್ಳುವ ಸಾಧ್ಯತೆ. ಚರ ಆಸ್ತಿಗಳ ಖರೀದಿ. ದೇವತಾ ಕಾರ್ಯಗಳಲ್ಲಿ ತೊಡಗಿಕೊಂಡು ನೆಮ್ಮದಿ.
ಕನ್ಯಾ
ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ. ಶ್ರೀಮಂತ ಜೀವನ ಶೈಲಿಗಾಗಿ ವೆಚ್ಚ. ಸೋದರಿಯರ ವಿಚಾರದಲ್ಲಿ ಧಾರಾಳತನ. ಸಂಪನ್ಮೂಲಗಳ ವೃದ್ಧಗಾಗಿ ಹೊಸ ಯೋಜನೆ.
ತುಲಾ
ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವ ತವಕ. ನೆಮ್ಮದಿಯ ವಾತಾವರಣ. ಮನೆಯವರೊಂದಿಗೆ ಆತುರದ ವ್ಯವಹಾರ ತೋರುವುದು ತರವಲ್ಲ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ.
ವೃಶ್ಚಿಕ
ಮನೆಯಲ್ಲಿ ಮೃದುಭಾಷಿಯಾಗಿ ವ್ಯವಹರಿಸಿ. ಕೆಲಸಗಳು ನಿಧಾನಗತಿಯಲ್ಲಿದ್ದರೂ ಮನಸ್ಸಿನಲ್ಲಿನ ದುಗುಡವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ದೂರದ ಸಂಬಂಧಿಕರೊಬ್ಬರ ಆಗಮನ.
ಧನು
ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ. ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ. ವಿವಾಹಾದಿ ಶುಭಕಾರ್ಯಗಳಲ್ಲಿ ಮನೆಯವರೊಂದಿಗೆ ಭಾಗಿ.
ಮಕರ
ಆದಾಯದಲ್ಲಿ ಹೆಚ್ಚಳ. ಮನೆಯಲ್ಲಿ ಸಂತೋಷದ ವಾತಾವರಣ. ದಾಂಪತ್ಯ ಜೀವನ ಸುಖಕರ. ಸರ್ಕಾರಿ ನೌಕರರಿಗೆ ಬಿಡುವಿನ ದಿನವಾಗಿದ್ದರೂ, ಉನ್ನತ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ.
ಕುಂಭ
ಕ್ರೀಡಾಪಟುಗಳಿಗೆ ಉತ್ತೇಜನ ದೊರಕುವ ಸಂಭವವಿದ್ದು ಉತ್ತಮ ಸಾಧನೆ ತೋರಲಿದ್ದೀರಿ. ಸಾಧನೆಯ ಪುಟಗಳನ್ನು ಅವಲೋಕನ ಮಾಡಿಕೊಳ್ಳಲಿದ್ದೀರಿ.
ಮೀನ
ಸಾಹಿತ್ಯ, ಸಂಗೀತ ಕಲಾ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳೊಡನಾಟ ದಿನವಿಡೀ ದೊರಕುವ ಸಾಧ್ಯತೆ. ರಿಯಲ್ ಎಸ್ಟೇಟ್‌ನಂತಹ ಭೂ ಸಂಬಂಧಿ ವ್ಯವಹಾರಗಳಲ್ಲಿ ಅಧಿಕ ಲಾಭ
ದಿನ ಭವಿಷ್ಯ– ಪ್ರಜಾವಾಣಿ | ಯಾವ ರಾಶಿಗೆ ಇಂದು ಏನೇನು ಫಲಗಳಿವೆ ಎಂಬುದನ್ನು ತಿಳಿಯಿರಿ. PRAJAVANI | Know your daily horoscope