ಗುಂಡ್ಲುಪೇಟೆ: ತಬಲಾ ಮಾಸ್ಟರ್ ಆಗಿ ಗುರುತಿಸಿಕೊಂಡಿರುವ ರಾಘವಾಪುರ ಶಿವಣ್ಣ ಅವರ ತಲೆಗೆ ಓದು ಹತ್ತಲಿಲ್ಲ. ಆದರೆ, ಕಲಿತ ಕಲೆ ಅವರ ಕೈ ಬಿಡಲಿಲ್ಲ. ಶಾಲೆಗೆ ಹೋಗದಿದ್ದರೂ ತಬಲಾ ವಿದ್ಯೆಯನ್ನು ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಪ್ರಸಿದ್ಧಿಯನ್ನೂ ಪಡೆದಿದ್ದಾರೆ.

ಶಿವಣ್ಣ ಅವರು ಜಾನಪದ ಹಾಡುಗಾರರ ತಂಡವನ್ನು ಕಟ್ಟಿಕೊಂಡು ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ನೀಡುತ್ತಾ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೆಹಲಿ, ಅಸ್ಸಾಂ, ತಮಿಳುನಾಡು, ಮಣಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.

ಶಿವಣ್ಣ ಅವರಿಗೆ ಬಾಲ್ಯದಲ್ಲೇ ಶಿಕ್ಷಣ ಒಗ್ಗಲಿಲ್ಲ. ಒಂದನೇ ತರಗತಿ ನಂತರ ಶಾಲೆಗೆ ಅವರು ಹೋಗಲಿಲ್ಲ.ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ ಇನ್ನಿತರ ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾಗ ತಬಲಾ ಬಾರಿಸಬೇಕು ಎಂಬ ಆಸೆ ಉಂಟಾಯಿತು. ಆದರೆ, ಅದಕ್ಕೆ ಅವಕಾಶ ಇರಲಿಲ್ಲ.ನಂಜನಗೂಡು ತಾಲ್ಲೂಕಿನ ಹೊಸಪುರ ಗ್ರಾಮದ ಮರಿಸ್ವಾಮಿ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅವರ ಕನಸು ನನಸಾಯಿತು. ಮರಿಸ್ವಾಮಿ ಅವರೇ ಶಿವಣ್ಣ ಅವರಿಗೆ ತಬಲಾ ಬಾರಿಸುವುದನ್ನು ಕಲಿಸಿದರು.

‘ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಬಿಡುವಿನ ವೇಳೆಯಲ್ಲಿ ತಬಲಾ ಬಾರಿಸುವುದನ್ನು ಕಲಿಸಿ ಕೊಟ್ಟರು. ಅವರ ತಬಲಾ ವಾದನ ನಂಜನಗೂಡು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಪ್ರಸಿದ್ಧಿಯಾಗಿತ್ತು. ಅವರಿಂದ ಕಲಿತ ಕಲೆ ಇಂದು ಜೀವನಕ್ಕೆ ದಾರಿಯಾಗಿದೆ. ನಾನು ವಿದ್ಯಾವಂತನಾಗಿದ್ದರೆ ದೇಶ ಸುತ್ತಿ ಕಾರ್ಯಕ್ರಮ ನೀಡಲು ಸಾಧ್ಯವಾಗುತ್ತಿರಲಿಲ್ಲವೋ ಏನೋ... ಆದರೆ ನಾನು ಕಲಿತ ಕಲೆಯಿಂದ ಜನರು ಗುರುತಿಸುವಂತಾಗಿದೆ’ ಎಂದು ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗೆ ಸರಾಗವಾಗಿ ಮಾತನಾಡಲು ಆಗುವುದಿಲ್ಲ. ತೊದಲುತ್ತೇನೆ. ಹಾಗಾಗಿ ಹಾಡುಗಾರಿಕೆಯ ಮೇಲೆ ಆಸಕ್ತಿ ತೊರಲಿಲ್ಲ. ಜಾನಪದ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿತ್ತು. ಆದ್ದರಿಂದ ತಬಲಾ ವಾದನದಲ್ಲಿ ತೊಡಗಿಸಿಕೊಂಡೆ’ ಎಂದು ತಬಲಾ ವಾದನದ ಕಲೆಯನ್ನು ಆರಿಸಿಕೊಂಡ ಬಗೆಯನ್ನು ವಿವರಿಸಿದರು.

ಇದುವರೆಗೆ ಸುಮಾರು ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಶಿವಣ್ಣ ತಬಲಾ ಸಾಥ್ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ, ದಸರಾ ಕಾರ್ಯಕ್ರಮ, ಅಂತರರಾಜ್ಯ ಜಾನಪದ ಉತ್ಸವ, ಮಣಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅಥವಾ ಕಾರ್ಯಕ್ರಮಗಳಿಗೆ ಹೋದಾಗ ಆಸಕ್ತರಿಗೆ ತಬಲಾ ವಾದನವನ್ನು ಕಲಿಸಿಕೊಟ್ಟಿದ್ದಾರೆ. ಇವರಿಂದ ಕಲಿತವರುಒಂದೊಂದು ತಂಡವನ್ನು ಸೇರಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ.

‘ಕಲೆಗಳ ಬಗ್ಗೆ ಆಸಕ್ತಿ ಇಲ್ಲ’

ಈಗಿನ ಯುವಜನತೆಗೆ ನಮ್ಮ ಕಲೆಗಳ ಬಗ್ಗೆ ಆಸಕ್ತಿ ಇಲ್ಲ ಎಂದು ಬೇಸರಿಂದಲೇ ಹೇಳುತ್ತಾರೆ ಶಿವಣ್ಣ.

‘ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಜಾನಪದ ಕಲೆಗಳನ್ನು ಕಲಿಯುವುದಕ್ಕೆ ಮುಂದಾಗಬೇಕು. ಕಲಿತ ವಿದ್ಯೆ ಎಂದಿಗೂ ಕೈ ಬಿಡುವುದಿಲ್ಲ. ಯಾವಾಗಾದರೂ ನೆರವಿಗೆ ಬರುತ್ತದೆ’ ಎಂಬುದು ಅವರ ಅನುಭವದ ಮಾತು.

‘ಸರ್ಕಾರ ಮತ್ತು ಸಂಘಸಂಸ್ಥೆಗಳು ಜಾನಪದ ಕಲೆಯನ್ನು ಬೆಳೆಸುವ ಕೆಲಸ ಮಾಡಬೇಕು. ಸರ್ಕಾರದ ಕಾರ್ಯಕ್ರಮದಲ್ಲಿ ಈ ಕಲೆಗಳಿಗೆ ಹೆಚ್ಚಿನ ಅವಕಾಶ ನೀಡಿ, ಕಲಾವಿದರಿಗೆ ಪೋತ್ಸಾಹ ನೀಡಬೇಕು. ಆಗ ಕಲಿಯುವವರಿಗೆ ಆಸಕ್ತಿ ಹೆಚ್ಚಾಗುತ್ತದೆ’ ಎಂದು ಹೇಳುತ್ತಾರೆ ಶಿವಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.