ವಿದ್ಯುತ್ ಕಳ್ಳತನ: ಅಪರಾಧಿಗೆ ಒಂದು ವರ್ಷ ಜೈಲು

7

ವಿದ್ಯುತ್ ಕಳ್ಳತನ: ಅಪರಾಧಿಗೆ ಒಂದು ವರ್ಷ ಜೈಲು

Published:
Updated:

ರಾಮನಗರ: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬೆಸ್ಕಾಂಗೆ ಆರ್ಥಿಕ ನಷ್ಟವುಂಟುಮಾಡಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₨1.65 ಲಕ್ಷ ದಂಡ ವಿಧಿಸಿದೆ.

ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಇಂಡ್ಲವಾಡಿ ಪಂಚಾಯಿತಿ ಬೊಮ್ಮಂಡಹಳ್ಳಿ ಗ್ರಾಮದ ನಿವಾಸಿ ರೇವಣ್ಣ ಶಿಕ್ಷೆಗೆ ಒಳಗಾದ ವ್ಯಕ್ತಿ.

2012ರ ಏಪ್ರಿಲ್ 26ರಂದು ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಇಂಡ್ಲವಾಡಿ ಪಂಚಾಯಿತಿ ಬೊಮ್ಮಂಡಹಳ್ಳಿ ಗ್ರಾಮದ ನಿವಾಸಿ ರೇವಣ್ಣ ತಮ್ಮ ಜಮೀನಿನಲ್ಲಿ ನಡೆಸುತ್ತಿದ್ದ ಮರಳು ಫಿಲ್ಟರ್‌ ಘಟಕದ ವಿದ್ಯುತ್ ಸ್ಥಾವರ ಪರಿಶೀಲಿಸಿದಾಗ ಬೆಸ್ಕಾಂನಿಂದ ಅನುಮತಿ ಪಡೆಯದೆ ವಿದ್ಯುತ್ ಬಳಕೆ ಮಾಡುತ್ತಿರುವುದು ಕಂಡು ಬಂದಿತ್ತು. ಪಕ್ಕದಲ್ಲಿಯೇ ಇದ್ದ ಎಲ್.ಟಿ ಕಂಬದಿಂದ, 7.5 ಎಚ್.ಪಿ ಸಾಮರ್ಥ್ಯದ ಮೋಟಾರ್‍ ಗೆ ನೇರ ಹಾಗೂ ಅಕ್ರಮ ವಿದ್ಯುತ್ ಸಂಪರ್ಕ ಮಾಡಿಕೊಂಡು ವಿದ್ಯುತ್ ಕಳ್ಳತನ ಮಾಡಿ ಬೆಸ್ಕಾಂಗೆ ಆರ್ಥಿಕ ನಷ್ಟವುಂಟು ಮಾಡಿದ್ದರು.

ರೇವಣ್ಣ ವಿರುದ್ದ ರಾಮನಗರ ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣ ದಾಖಲಾಗಿ ದಂಡ ವಿಧಿಸಲಾಗಿತ್ತು. ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಲಾಗಿ, ವಿಚಾರಣೆ ನಡೆದು, ನ್ಯಾಯಾಲಯವು ರೇವಣ್ಣಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ₨1.65 ಲಕ್ಷ ದಂಡ ವಿಧಿಸಿದೆ.

ರೇವಣ್ಣ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ನ್ಯಾಯಾಲಯವು ಆರೋಪಿ ವಿರುದ್ಧ ಬಂಧನದ ವಾರೆಂಟ್‌ ಜಾರಿಗೊಳಿಸಿತ್ತು. ಇದೇ 5ರಂದು ಬೆಳಿಗ್ಗೆ 6.45ಕ್ಕೆ ಪೊಲೀಸ್ ಹಾಗೂ ಬೆಸ್ಕಾಂ ಸಿಬ್ಬಂದಿ ಬೊಮ್ಮಂಡಹಳ್ಳಿ ತೋಟದ ಮನೆಯ ಹತ್ತಿರ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಬೆಸ್ಕಾಂ ಜಾಗೃತ ದಳ ಪೊಲೀಸ್ ಇನ್ ಸ್ಪೆಕ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !