ರಾಜಕಾಲುವೆಯಾದ ತುಂಗಾನಾಲೆ

7
ತ್ಯಾಜ್ಯ ರಾಶಿ, ಈಡೇರದ ಉದ್ದೇಶ, ಕೃಷಿಗೆ ಸಿಗದ ನೀರು

ರಾಜಕಾಲುವೆಯಾದ ತುಂಗಾನಾಲೆ

Published:
Updated:
ರಾಜಕಾಲುವೆಯಾದ ತುಂಗಾನಾಲೆ

ಶಿವಮೊಗ್ಗ: ನಗರದಲ್ಲಿ ಹಾದು ಹೋಗಿರುವ ತುಂಗಾನಾಲೆ ರಾಜ ಕಾಲುವೆಯಾಗಿ ಮಾರ್ಪಟ್ಟಿದೆ. ನಾಲೆಯ ಪಕ್ಕದಲ್ಲಿ ಮನೆಗಳು ಇರುವುದರಿಂದ ಅವರ ಸ್ನಾನದ ನೀರು, ಶೌಚಾಲಯದ ನೀರು ನಾಲೆಗೆ ನೇರವಾಗಿ ಹರಿಯುತ್ತದೆ ಎಂಬುದು ಸ್ಥಳೀಯರ ದೂರು.

ತ್ಯಾಜ್ಯಗಳ ರಾಶಿ: ನಾಲೆಯ ಸಮೀಪದಲ್ಲಿ ವಾಸಿಸುವವರು ಅವರ ಮನೆಯ ತ್ಯಾಜ್ಯವನ್ನು ತಂದು ಹಾಕು

ತ್ತಾರೆ. ಮನೆಯ ಕಸ, ಬಳಸಿದ ಹೂವು, ಪ್ಲಾಸ್ಟಿಕ್‌, ಬೇಡವಾದ ವಸ್ತುಗಳನ್ನು ತಂದು ಸುರಿಯುವುದರಿಂದ ನೀರು ಸಂಪೂರ್ಣ ಕಲುಷಿತಗೊಂಡಿದೆ.

‘ಹಿಂದೆ ಇದ್ದ ಅಕ್ಕ–ಪಕ್ಕದಲ್ಲಿನ ತಡೆಗೊಡೆ ಕುಸಿದು ಬಿದ್ದಿತ್ತು, ತುಂಗಾ ಜಲಾಶಯದಿಂದ ನೀರು ಹರಿಸಿದರೆ ಮನೆಗಳಿಗೆ ನುಗ್ಗುತ್ತಿತ್ತು. ಅಲ್ಲಿನ ನಿವಾಸಿಗಳು ಅಲ್ಲಿಯೇ ಬಟ್ಟೆ, ಪಾತ್ರೆ ತೊಳೆಯುತ್ತಿದ್ದರು. ಈಚೆಗೆ ತಡೆಗೋಡೆ ನಿರ್ಮಾಣ, ನಾಲೆಯಲ್ಲಿದ್ದ ಹೂಳು, ಕಸವನ್ನು ಸ್ವಚ್ಛಗೊಳಿಸಲಾಗಿತ್ತು. ಅದಾದ ನಂತರವೂ ಪರಿಸ್ಥಿತಿ ಬದಲಾಗಿಲ್ಲ’ ಎಂದು ಸ್ಥಳೀಯರಾದ ಧನಂಜಯ ದೂರುತ್ತಾರೆ.

ಯಾವ ಮಾರ್ಗದಿಂದ ಹರಿಯುತ್ತದೆ?: ಕೃಷಿ ಚಟುವಟಿಕೆ ಉದ್ದೇಶದಿಂದ ಇದಕ್ಕೆ ಗಾಜನೂರು ಜಲಾಶಯದಿಂದ ನೀರು ಹರಿಸಲಾಗುತ್ತದೆ. ನ್ಯೂಮಂಡ್ಲಿ, ಟಿಪ್ಪುನಗರ, ಅಣ್ಣಾನಗರ, ಅಶೋಕ ನಗರ, ಶರಾವತಿ ನಗರ, ಹೊಸಮನೆ, ರವೀಂದ್ರ ನಗರ, ಕೀರ್ತಿನಗರ, ನವುಲೆ, ರಾಗಿಗುಡ್ಡ (ಶಾಂತಿ ನಗರ)ದ ಮೂಲಕ ಹೊನ್ನಾಳಿ ಮಾರ್ಗವಾಗಿ ಹರಿಯುತ್ತದೆ. ತ್ಯಾಜ್ಯಗಳೇ ತುಂಬಿರುವ ಅದರಲ್ಲಿ ನೀರು ಮುಂದಕ್ಕೆ ಹರಿಯುವುದೇ ಇಲ್ಲ, ಹಳ್ಳಿಗಳಿಗೆ ಈ ನೀರು ತಲುಪುವುದಿಲ್ಲ. ಇಂತಹ ಕಲುಷಿತ ನೀರನ್ನು ಕುಡಿಯಲು, ಕೃಷಿಗೆ ಬಳಸುವುದು ಹೇಗೆ ಸಾಧ್ಯ ಎಂಬುದು ರೈತರ ಪ್ರಶ್ನೆ.

ರೋಗ ಭೀತಿ: ನಾಲೆಯಲ್ಲಿ ತ್ಯಾಜ್ಯ ಸಂಗ್ರಹಗೊಂಡು ಸೊಳ್ಳೆಗಳ ಹಾವಳಿ ಹೆಚ್ಚಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಕ್ಕದಲ್ಲೇ ಗಿಡಗಳು ಬೆಳೆದಿದ್ದು, ವಿಷಜಂತುಗಳು ಸಂಚರಿಸುತ್ತವೆ ಎಂದು ಅವರು ಹೇಳುತ್ತಾರೆ.

‘ಇದೇ 5ರಂದು ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳು ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸನ್ನದ್ಧವಾಗಿವೆ. ಇನ್ನೊಂದೆಡೆ ನಗರದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಸ್ಮಾರ್ಟ್‌ಸಿಟಿ ಕಿರೀಟ ಮುಡಿಗೇರಿಸಿಕೊಂಡಿರುವ ನಗರದ ಸ್ವಚ್ಛತೆಯನ್ನು ಪಾಲಿಕೆ ಕಾಪಾಡಬೇಕು ಎಂದು ಧನಂಜಯ ಒತ್ತಾಯಿಸುತ್ತಾರೆ.

‘ಪಾಲಿಕೆಯು ನಾಲೆಯ ಸಮರ್ಪಕ ನಿರ್ವಹಣೆ ಮಾಡಬೇಕು. ತ್ಯಾಜ್ಯ ಹಾಕುವುದನ್ನು ಅಲ್ಲಿನ ನಿವಾಸಿಗಳು ಮೊದಲು ನಿಲ್ಲಿಸಬೇಕು. ಕೊಳಚೆ ನೀರು ಹರಿಸುವುದನ್ನು ನಿಲ್ಲಿಸಿದಾಗ ಮಾತ್ರ ನಾಲೆ ಸ್ವಚ್ಛವಾಗಿರಲು ಸಾಧ್ಯ’ ಎನ್ನುತ್ತಾರೆ ಉದ್ಯೋಗಿ ಕಿರಣ್ ಕುಮಾರ್.

ಜನಪ್ರತಿನಿಧಿಗಳು ನಾಲೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ರೆ ಗೃಹಿಣಿ ಸವಿತಾ ಹೇಳುತ್ತಾರೆ.

**

ಪಾಲಿಕೆಯಿಂದ ಬರುವ ಕಸದ ಗಾಡಿಗಳಿಗೆ ಸಾರ್ವಜನಿಕರು  ಕಸ ಹಾಕಬೇಕು. ನಾಲೆಗೆ ತ್ಯಾಜ್ಯ ಎಸೆಯಬಾರದು. ಆ ನೀರನ್ನು ಅಶುದ್ಧ ಮಾಡಬಾರದು ಎಂಬುದನ್ನು ಎಲ್ಲರೂ ಅರಿಯಬೇಕು

ನಾಗರಾಜ್‌ ಕಂಕಾರಿ, ಮೇಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry