ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆ ಘಾಟಿ ರಸ್ತೆ ಏ.1ರಿಂದ ಬಂದ್

Last Updated 30 ಮಾರ್ಚ್ 2019, 14:15 IST
ಅಕ್ಷರ ಗಾತ್ರ

ಶಿವಮೊಗ್ಗ: ಆಗುಂಬೆ ಘಾಟಿ ರಸ್ತೆಯತಿರುವುಗಳಲ್ಲಿ ಕುಸಿದಿರುವ ಗುಡ್ಡಗಳ ಶಾಶ್ವತ ದುರಸ್ತಿ ಕಾಮಾಗಾರಿಆರಂಭಿಸಲು ಏ.1ರಿಂದ 30ರ ವರೆಗೆ ಆ ಮಾರ್ಗದ ಎಲ್ಲ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169 ವ್ಯಾಪ್ತಿಯಯಲ್ಲಿ ಬರುವ ಆಗುಂಬೆ ಘಾಟಿಯ 33.70ಕಿ.ಮೀ.ನಿಂದ37.018 ಕಿ.ಮೀ.ವರೆಗಿನ ರಸ್ತೆಗಳಲ್ಲಿ ಗುಡ್ಡ ಕುಸಿದಿತ್ತು. ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದುರಸ್ತಿ ಕಾಮಾಗಾರಿ ಕೈಗೊಳ್ಳುತ್ತಿದೆ.

ಬದಲಿ ಮಾರ್ಗ: ಸಾಮಾನ್ಯ ಬಸ್‌ಗಳು, ಜೀಪು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ತೀರ್ಥಹಳ್ಳಿ–ಕೊಪ್ಪ–ಶೃಂಗೇರಿ–ಮಾಳಾ ಘಾಟ್–ಕಾರ್ಕಳ–ಉಡುಪಿ ಮಾರ್ಗವಾಗಿ ಸಂಚರಿಸಬೇಕು. ರಾಜಹಂಸ, ಐರಾವತ ಬಸ್‌ಗಳು, ಖಾಸಗಿ ಐಷಾರಾಮಿ ಬಸ್‌ಗಳು, ಬುಲೆಟ್ ಟ್ಯಾಂಕರ್ಸ್‌, ಷಿಪ್‌ ಕಾರ್ಗೋ ಕಂಟೈನರ್ಸ್‌,ಭಾರಿವಾಹನಗಳು ತೀರ್ಥಹಳ್ಳಿ–ಮಾಸ್ತಿಕಟ್ಟೆ–ಹೊಸಂಗಡಿ –ಸಿದ್ದಾಪುರ–ಕುಂದಾಪುರ–ಉಡುಪಿ ಮಾರ್ಗದಲ್ಲಿ ಸಂಚರಿಸಬೇಕು.

ವಿದ್ಯಾರ್ಥಿಗಳಿಗೆ ರಿಯಾಯಿತಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.4ರವರೆಗೆ ಇರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಆಗುಂಬೆಯ ಸರ್ಕಾರಿ ಶಾಲೆ, ಎಸ್‌ವಿಎಸ್‌ ಶಾಲೆ ವಿದ್ಯಾರ್ಥಿಗಳು ಓಡಾಡಲು ಮಿನಿ ಬಸ್‌ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಸ್‌ಗಳುತೀರ್ಥಹಳ್ಳಿ–ಆಗುಂಬೆ–ಬಿದರಗೋಡು–ಶೃಂಗೇರಿ ಮಾರ್ಗವಾಗಿಯೂ, ಸಾಮಾನ್ಯ ಬಸ್‌ಗಳು ತಿರ್ಥಹಳ್ಳಿ–ಕಲ್ಮನೆ–ಹೆಗ್ಗೋಡು–ರಾ ಮಕೃಷ್ಣಾಪುರ–ಕಮ್ಮರಡಿ–ಶೃಂಗೇರಿ ಮಾರ್ಗದಲ್ಲಿ ಸಂಚರಿಸಲು ಅವಕಾಶಮಾಡಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT