ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ್ ಬಳಸಿದ ಪದಗಳು ಸರಿಯಲ್ಲ: ಆಯನೂರು

Last Updated 1 ಮಾರ್ಚ್ 2020, 20:10 IST
ಅಕ್ಷರ ಗಾತ್ರ

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತು ಪರ ಮತ್ತು ವಿರೋಧದ ವಾದಗಳಿಂದ ಪ್ರಯೋಜನವಿಲ್ಲ. ಹೀಗೆ ಮಾಡುವುದರಿಂದ ಆ ಹಿರಿಯ ಜೀವಕ್ಕೆ ನೋವುಂಟಾಗುತ್ತದೆ ಎಂದು ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.

‘ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ನಿಜ. ಅವರ ಕುರಿತು ಶಾಸಕ ಯತ್ನಾಳ್ ಬಳಸಿದ ಪದಗಳು ಸರಿಯಲ್ಲ. ಅವರಿಗೆ ನಾವೆಲ್ಲರೂ ಗೌರವ ಕೊಡಬೇಕು. ಆದರೆ, ಈ ವಿಷಯವನ್ನಿಟ್ಟುಕೊಂಡು ದೊರೆಸ್ವಾಮಿ ಅವರನ್ನು ಎಲ್ಲರೂ ಅವಮಾನಿಸುತ್ತಿರುವುದು ಸರಿಯಲ್ಲ. ಇದು ಇಲ್ಲಿಗೆ ನಿಲ್ಲಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಧಾನಸಭೆ ವಿರೋಧಪಕ್ಷದ ನಾಯಕಸಿದ್ದರಾಮಯ್ಯ ಅವರು ದೊರೆಸ್ವಾಮಿ ಕುರಿತ ವಿವಾದವನ್ನು ಮುಗಿಸುವ ಔದಾರ್ಯ ತೋರಲಿಲ್ಲ. ಬದಲಾಗಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳಿ ತಮ್ಮ ದಡ್ಡತನ ಪ್ರದರ್ಶಿಸಿದ್ದಾರೆ ಎಂದು ದೂರಿದರು.

ಯಾವ ವಿಷಯವನ್ನು ಇಟ್ಟುಕೊಂಡು ಸದನದಲ್ಲಿ ಮಾತನಾಡಬೇಕು ಎಂಬ ಪ್ರಜ್ಞೆ ಅವರಿಗೆ ಇಲ್ಲ. ಅವರು ಒಳ್ಳೆಯ ರಾಜಕಾರಣಿ, ಮುಖ್ಯಮಂತ್ರಿ ನಿಜ. ಆದರೆ ಒಳ್ಳೆಯ ಸಂಸದೀಯ ಪಟುವಾಗಿಲ್ಲ ಎಂದರು.

‘ಪರ–ವಿರೋಧದ ವಾದ ಪ್ರಯೋಜನವಿಲ್ಲ’
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತು ಪರ ಮತ್ತು ವಿರೋಧದ ವಾದಗಳಿಂದ ಪ್ರಯೋಜನವಿಲ್ಲ. ಹೀಗೆ ಮಾಡುವುದರಿಂದ ಆ ಹಿರಿಯ ಜೀವಕ್ಕೆ ನೋವುಂಟಾಗುತ್ತದೆ ಎಂದು ಆಯನೂರು ಮಂಜುನಾಥ್ ಹೇಳಿದರು.

‘ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ನಿಜ. ಅವರ ಕುರಿತಂತೆ ಶಾಸಕ ಯತ್ನಾಳ್ ಬಳಸಿದ ಪದಗಳು ಸರಿಯಲ್ಲ. ಅವರಿಗೆ ನಾವೆಲ್ಲರೂ ಗೌರವ ಕೊಡಬೇಕು. ಆದರೆ, ಈ ವಿಷಯವನ್ನಿಟ್ಟುಕೊಂಡು ದೊರಸ್ವಾಮಿ ಅವರನ್ನು ಎಲ್ಲರೂ ಅವಮಾನಿಸುತ್ತಿದ್ದಾರೆ. ಇದು ಸರಿಯಲ್ಲ. ಇದು ಇಲ್ಲಿಗೆ ನಿಲ್ಲಬೇಕು’ ಎಂದರು.

ವಿಧಾನಸಭೆ ವಿರೋಧಪಕ್ಷದ ನಾಯಕಸಿದ್ದರಾಮಯ್ಯ ಅವರು ದೊರೆಸ್ವಾಮಿ ಕುರಿತ ವಿವಾದವನ್ನು ಮುಗಿಸುವ ಔದಾರ್ಯ ತೋರಲಿಲ್ಲ. ಬದಲಾಗಿ ಅಧಿವೇಶನವನ್ನು ನಡೆಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿ ತಮ್ಮ ದಡ್ಡತನವನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದರು.

ಯಾವ ವಿಷಯವನ್ನು ಇಟ್ಟುಕೊಂಡು ಸದನದಲ್ಲಿ ಮಾತನಾಡಬೇಕು ಎಂಬ ಪ್ರಜ್ಞೆ ಅವರಿಗೆ ಇಲ್ಲ. ಅವರು ಒಳ್ಳೆಯ ರಾಜಕಾರಣಿ, ಮುಖ್ಯಮಂತ್ರಿ ನಿಜ. ಆದರೆ ಒಳ್ಳೆಯ ಸಂಸದೀಯ ಪಟುವಾಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT