ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ ತಾಲ್ಲೂಕಿನಲ್ಲಿ ಸ್ಮಶಾನಗಳ ಕೊರತೆ: ಶವ ಸಂಸ್ಕಾರಕ್ಕೆ ತೊಂದರೆ

Last Updated 25 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಕೊರತೆಯಿಂದ ಶವ ಸಂಸ್ಕಾರ ಮಾಡುವುದು ದುಸ್ತರವಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಹಳ್ಳಿಗಳಿದ್ದು ಎಂಟ್ಹತ್ತು ಹಳ್ಳಿಗಳಲ್ಲಿ ಮಾತ್ರ ಸರಿಯಾದ ರೀತಿಯಲ್ಲಿ ಸ್ಮಶಾನಗಳಿವೆ. ಉಳಿದಂತೆ ಶವಗಳನ್ನು ತಮ್ಮ ಹೊಲದಲ್ಲಿ ಹೂಳುವ ಇಲ್ಲವೆ ಸುಡುವ ಪದ್ಧತಿಯನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದಾರೆ.

ಗ್ರಾಮ ಪಂಚಾಯ್ತಿಗಳು ಗ್ರಾಮಕೊಂದು ಸ್ಮಶಾನಕ್ಕಾಗಿ ಜಾಗ ಗುರುತಿಸದೇ ಇದ್ದುದ್ದರಿಂದ ಶವ ಸಂಸ್ಕಾರಕ್ಕೆ ತೊಂದರೆ ಎದುರಿಸುವಂತಾಗಿದೆ. ಆದರೆ ಇತ್ತೀಚೆಗೆ ಹೈಕೋರ್ಟ್‌ ಆದೇಶ ಮಾಡಿರುವುದರಿಂದ ಅದರಂತೆ ಹಳ್ಳಿಗೊಂದು ಸ್ಮಶಾನ ನೀಡಬೇಕೆಂಬ ಆದೇಶದಂತೆ ಸರ್ಕಾರಿ ಜಾಗದಲ್ಲಿ ತಹಶೀಲ್ದಾರರು ಅಧಿಕೃತ ದಾಖಲೆ ನೀಡಿದ್ದಾರೆ. ಆದರೆ ತಹಶೀಲ್ದಾರರು ನೀಡಿದ ಸ್ಮಶಾನ ಭೂಮಿ ಒಂದು ಗ್ರಾಮದ ಜನರು ಇನ್ನೊಂದು ಗ್ರಾಮಕ್ಕೆ ಹೋಗಿ ಶವ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ. ಎಲ್ಲರೂ ಹಿಡಿ ಶಾಪ ಹಾಕುವಂತಾಗಿದೆ ಎಂದು ಲಿಂಗಾಪೂರ ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಹಳದೂರು ಗ್ರಾಮ ಇಂಜೀನವಾರಿ ಗ್ರಾಮಕ್ಕೆ ಮೂರು ಕಿ.ಮೀ.ಅಂತರದಲ್ಲಿದ್ದರೂ ಸ್ಮಶಾನಕ್ಕೆ ಜಾಗ ಎರಡು ಗ್ರಾಮಗಳಿಗೆ ಹಳದೂರು ಗ್ರಾಮದಲ್ಲಿದೆ. ಇಂಜೀನವಾರಿ ಗ್ರಾಮಸ್ಥರಿಗೆ ಹಳದೂರಿಗೆ ಬರಲು ಸಾಧ್ಯವಿಲ್ಲದ್ದಾಗಿದೆ. ಇಂತಹದ್ದೆ ಸಮಸ್ಯೆ ಸಬ್ಬಲಹುಣಸಿ ಹಾಗೂ ನಾಗರಾಳ ಎಸ್.ಪಿ ಗ್ರಾಮದ ಸ್ಥಿತಿಯಾಗಿದೆ. ಸಬ್ಬಲಹುಣಸಿ ಪುನರ್ವಸತಿ ಗ್ರಾಮದ ಮದ್ಯದಲ್ಲಿ ಎರಡು ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ತೋರಿಸಿದ್ದರಿಂದ ಗ್ರಾಮಸ್ಥರು ಇದನ್ನು ವಿರೋಧಿಸಿದ್ದರು. ಅದಕ್ಕಾಗಿ ಹಳೆಯ ಗ್ರಾಮದ ಶಾಲಾ ಆವರಣ ತೋರಿಸಿದ್ದಾರೆ. ಲಾಯದಗುಂದಿ ಗ್ರಾಮಸ್ಥರು ಮೂರು ಕಿ.ಮೀ. ಅಂತರದಲ್ಲಿ ಕೋಟ್ನಳ್ಳಿ ಗ್ರಾಮದಲ್ಲಿ ಇರುವುದರಿಂದ ಅಲ್ಲಿಯೂ ಇದೆ ಸಮಸ್ಯೆಯಾಗಿದೆ.

ತಾಲ್ಲೂಕಿನ ಹಂಸನೂರಿನಲ್ಲಿ ತೆಗ್ಗಿ, ತಿಮ್ಮಸಾಗರ ಲಿಂಗಾಪೂರ ಗ್ರಾಮಗಳ ಜನರು ಶವ ಸಂಸ್ಕಾರಕ್ಕೆ ಹಂಸನೂರಿಗೆ ಹೋಗಬೇಕೆಂದರೆ 4 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಹಂಸನೂರು ಗ್ರಾಮಕ್ಕೆ ಹೋಗುವುದು ದುಸ್ತರವಾಗಿದೆ. ನಮ್ಮ ಜಮೀನು ಹಾಗೂ ಹಳ್ಳಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ ಹೈಕೋರ್ಡ್‌ಗೆ ಮಾಹಿತಿ ಸಲ್ಲಿಸಲು ಬೇಕಾಬಿಟ್ಟಿ ಒಂದು ಊರಿನವರಿಗೆ ಬೇರೆ ಗ್ರಾಮಕ್ಕೆ ಹೋಗುವ ಸ್ಥಿತಿ ಇದ್ದರೂ ಅದು ಇದುವರೆಗೆ ಸಾಧ್ಯವಾಗಿಲ್ಲ ಎಂದು ತೆಗ್ಗಿ ಗ್ರಾಮದ ಚಂದ್ರಶೇಖರ ಕಾಳನ್ನವರ ಹೇಳುತ್ತಾರೆ.

ಮುಕ್ತಿಧಾಮಗಳ ಅಭಿವೃದ್ಧಿ: ‘ಸ್ಮಶಾನ’ ಮೌನ

ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮುಕ್ತಿಧಾಮ ಸುಮಾರು ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ. ಜನಪ್ರತಿನಿಧಿಗಳು ಈ ವಿಷಯವಾಗಿ ಮೌನ ತಾಳಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಜಾತಿ, ಸಮಾಜದವರ ಶವಸಂಸ್ಕಾರ ಜರುಗುವ ಈ ಮುಕ್ತಿಧಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಲವಾರು ಸಮಸ್ಯೆಗಳ ನಡುವೆ ನಿತ್ಯ ಶವಸಂಸ್ಕಾರಗಳು ನಡೆಯುತ್ತಿವೆ.

ಪಟ್ಟಣದ ಮುಕ್ತಿಧಾನದ ಸಮಸ್ಯೆಗಳು: ಪಟ್ಟಣದಲ್ಲಿ 8ಕ್ಕೂ ಹೆಚ್ಚು ಮುಕ್ತಿಧಾಮಗಳಿದ್ದು ಶವ ಸುಡಲು ಸೌಲಭ್ಯಗಳೇ ಇಲ್ಲ. ಬಸವೇಶ್ವರ ನಗರದ ಸ್ಮಶಾನದಲ್ಲಿ ಬಳಸುವ ಕಬ್ಬಿಣದ ಎರಡು ಪರಿಕರಗಳು ದುರಸ್ತಿಯಲ್ಲಿವೆ. ಶವಸುಡುವ ಹಳೆಯ ಕಟ್ಟಡ ಹಾಳಾಗಿದೆ. ಶವದೊಂದಿಗೆ ತಂದಿರುವ ಹಾಸಿಗೆ ಬಟ್ಟೆಯಂತಹ ತ್ಯಾಜ್ಯ ವಸ್ತುಗಳು ಕಂಡಕಂಡಲ್ಲಿ ಬೀಸಾಡಿದ್ದಾರೆ. ಆಸನಗಳ ವ್ಯವಸ್ಥೆ ಹಾಗೂ ಬಿಸಿಲು, ಮಳೆಯ ಸಂದರ್ಭದಲ್ಲಿ ಜನರಿಗೆ ಆಸರೆಗೆ ನಿಲ್ಲಲು ದೊಡ್ಡ ತಂಗುದಾಣದ ವ್ಯವಸ್ಥೆಯಿಲ್ಲ. ಪುರಸಭೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲಾ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT