ಜಮಖಂಡಿ: ಮಾಜಿ ಶಾಸಕ ಬಾಬುರಡ್ಡಿ ತುಂಗಳ ನಿಧನ

7

ಜಮಖಂಡಿ: ಮಾಜಿ ಶಾಸಕ ಬಾಬುರಡ್ಡಿ ತುಂಗಳ ನಿಧನ

Published:
Updated:

ಬಾಗಲಕೋಟೆ: ಹಿರಿಯ ಪತ್ರಕರ್ತ  ಹಾಗೂ ಮಾಜಿ ಶಾಸಕ ಬಾಬುರಡ್ಡಿ ತುಂಗಳ (83) ಶುಕ್ರವಾರ ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ಜಮಖಂಡಿಯಲ್ಲಿ ನಿಧನರಾದರು.

ಮೃತರ ಅಂತ್ಯಕ್ರಿಯೆ ಇಂದು‌‌ ಮಧ್ಯಾಹ್ನ 3 ಗಂಟೆಗೆ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದಲ್ಲಿ ಜರುಗಲಿದೆ.

1984-89ರವರೆಗೆ ಬೀಳಗಿ ಕ್ಷೇತ್ರದ ಶಾಸಕರಾಗಿದ್ದ ಅವರು, ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ಒಡನಾಡಿಯಾಗಿ ಗುರುತಿಸಿಕೊಂಡಿದ್ದ ಬಾಬುರಡ್ಡಿ ‘ಕುರುಕ್ಷೇತ್ರ’ ಹೆಸರಿನ ಪತ್ರಿಕೆಯ ಸಂಪಾದಕರಾಗಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !