ಭಾನುವಾರ, ಏಪ್ರಿಲ್ 18, 2021
23 °C
ಸಸಿ ನೆಟ್ಟು ಪೋಷಿಸಲು ವಿದ್ಯಾರ್ಥಿಗಳಿಗೆ ಸಲಹೆ

‘ಹಸಿರು ಹಳಿಂಗಳಿ’ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ಮಕ್ಕಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ನಿರಂತರವಾಗಿ ಪೋಷಣೆ ಮಾಡಬೇಕು ಎಂದು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಂ ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದ ಅಹಿಂಸಾ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಹಸಿರು ಹಳಿಂಗಳಿ, ಸ್ವಚ್ಛ ಹಳಿಂಗಳಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ಬೆಳೆಸಿ, ಉಳಿಸುವ ಅಭಿಯಾನಕ್ಕೆ ಶಾಲೆಯ ಮಕ್ಕಳಿಂದಲೇ ಚಾಲನೆ ನೀಡಲಾಗಿದೆ. ನಾಗರಿಕರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ರಸ್ತೆಬದಿಯ ಮರಗಳನ್ನು ಸಂರಕ್ಷಿಸಬೇಕು. ಜಲಮೂಲಗಳನ್ನು ರಕ್ಷಿಸಿ, ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಗ್ರಾಮೀಣ ಜನರು ಶೌಚಾಲಯ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳು ವುದರ ಜತೆಗೆ ಸ್ವಚ್ಛಗ್ರಾಮದ ಆಂದೋಲನಕ್ಕೆ ಕೈಜೊಡಿಸಬೇಕು ಎಂದು ಕರೆ ನೀಡಿದರು.

ಜಮಖಂಡಿ ಇಒ ಅಶೋಕ ತೇಲಿ, ಬಿಇಒ ಎಂ.ಬಿ.ಮೊರಟಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಪ್ಪ ಹಿಪ್ಪರಗಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ನಂದೆಪ್ಪನವರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎ.ದೇಸಾಯಿ, ಅಹಿಂಸಾ ಸಂಸ್ಥೆ ಅಧ್ಯಕ್ಷ ಬಿ.ಆರ್.ಬಿ.ಪಾಟೀಲ, ತಹಶೀಲ್ದಾರ್ ಮಹಿಬೂಬಿ, ಶಿರಸ್ತೇದಾರ್ ಎಸ್.ಬಿ.ಕಾಂಬಳೆ, ವೃತ್ತ ನಿರೀಕ್ಷಕ ಶ್ರೀಕಾಂತ ಮಾಯನ್ನವರ, ಶಿಕ್ಷಣ ಸಂಯೋಜಕ ಎಸ್.ಬಿ.ಬುರ್ಲಿ, ಗ್ರಾಮಲೆಕ್ಕಾಧಿಕಾರಿ ನಾಗೇಶ ಲಮಾಣಿ, ಪಿಡಿಒಗಳಾದ ಮಂಜು ಬಡಿಗೇರ, ಗಿರೀಶ ಕಡಕೋಳ, ಬಸಲಿಂಗ ವಾಲಿ, ಎನ್.ಎಸ್.ಪತ್ರಿ, ಬುದಗೆನ್ನವರ ಇದ್ದರು. ಎಸ್.ಎಂ.ನಂದೆಪ್ಪನವರ ನಿರೂಪಿಸಿ, ಬಿ.ಆರ್.ಕವಟಗೊಪ್ಪ ಸ್ವಾಗತಿಸಿ, ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು