ಬಾಗಲಕೋಟೆ: ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಬಾಗಲಕೋಟೆ ತಾಲ್ಲೂಕಿನ ಹೊಸ ಮುರನಾಳದಲ್ಲಿ ಸಹಸ್ರಾರು ಭಕ್ತರ ಮಧ್ಯೆ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಬೇಳಗ್ಗೆ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರುತಿ, ಭಗವತದ್ಗೀತಾ ಪಾರಾಯಣ ನಡೆಯಿತು.

ಪುಷ್ಪಾಲಂಕಾರದೊಂದಿಗೆ ವಿಷೇಶ ಪೂಜಾ ಕೈಂಕರ್ಯ ಸಲ್ಲಿಸಲಾಯಿತು, ಹರಕೆಯೊತ್ತ ಅನೇಕ ಭಕ್ತಾದಿಗಳು ಡಿರ್ಗದಂಡ ನಮಸ್ಕಾರ ಹಾಕಿ ಹರಕೆ ತಿರಿಸಿಕೊಂಡರು. ಮಧ್ಯಾಹ್ನ ಸಾವಿರಾರು ಮಹಿಳೆಯರ ಆರತಿ ಸೇವೆಯೋಂದಿಗೆ ಮಳೆರಾಜೇಂದ್ರ ಸ್ವಾಮಿ ಮೂರ್ತಿ ಹೊತ್ತ ಪಲ್ಲಕ್ಕಿ, ಕುದುರೆಯನ್ನೆರಿದ ಆದಿತ್ಯಾನಂದ ಸ್ವಾಮಿಗಳ ಹಾಗೂ ನಂದಿಕೋಲು ಪುರವಂತರ ಸೇವೆಯೊಂದಿಗೆ ಸಣ್ಣ ತೇರು ಎಳೆಯಲಾಯಿತು.

ಮುಸ್ಲಿಂ ಮಹಿಳೆಯರು ದೀಪದ ಆರತಿಗಳಿಗೆ ಎಣ್ಣೆ ನಿಡಿ ಸೇವೆ ಮಾಡಿದರು. ಸಣ್ಣ ರಥೋತ್ಸವದ ನಂತರ ಮಠದಲ್ಲಿ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಮಠದ ಶ್ರೀಗಳಾದ ಗುರಲಿಂಗ ಸ್ವಾಮೀಜಿ ಹಾಗೂ ನವೀನ್ ಸ್ವಾಮೀಜಿ ಭಕ್ತಾದಿಗಳೊಡನೆ ವಿಷೇಶ ಮಂಗಳಾರತಿ ನೆರೆವೇರಿಸಿದರು.

ಸಂಜೆ ಸಹಸ್ರಾರು ಜನರ ಮಧ್ಯೆ ಮಳೆರಾಜೇಂದ್ರ ಸ್ವಾಮಿಯ ರಥೋತ್ಸವ ಜರುಗಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.