ಬಾಗಲಕೋಟೆ: ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ ಸೇರಿದಂತೆ ಇತರೆ ದಾಖಲೆ ನಿರ್ವಹಣೆ ಸುಧಾರಣೆ ಮಾಡುವಲ್ಲಿ ಮೇಲ್ವಿಚಾರಕರ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಆರೋಗ್ಯ ಇಲಾಖೆ ಸಭಾಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ವಾಸ್ತವ ಸ್ಥಿತಿಗೆ ಅನುಗುಣವಾಗಿ ಇರುವುದಿಲ್ಲ. ಪೋಷಣ್ ಟ್ರ್ಯಾಕ್ ಹಾಜರಾತಿ ಪರಿಶೀಲಿಸಿದಾಗ ನೂರರಷ್ಟು ಹಾಜರಾತಿ ಇರುತ್ತದೆ. ಇದನ್ನು ನೋಡಿದಾಗ ನಿರ್ವಹಣೆಯಲ್ಲಿ ಲೋಪ ಕಂಡು ಬರುತ್ತದೆ ಎಂದರು.

ಮಕ್ಕಳ ಹಾಜರಾತಿ ಬಗ್ಗೆ ಮೇಲ್ವಿಚಾರಕಿಯರಿಗೆ ತಿಳಿದಿದ್ದರೂ ಸುಧಾರಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಇಂತಹ ಮನಸ್ಥಿತಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮೇಲ್ವಿಚಾರಕರು ತಮ್ಮ ಮೇಲಿರುವ ಜವಾಬ್ದಾರಿ ಅರಿತು ಅಂಗನವಾಡಿ ಸುಧಾರಣೆಗೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿವೇಶನ ಗುರುತಿಸಿರುವ ಬಗ್ಗೆ ಪರೀಶೀಲಿಸಲಾಗಿ ಜಿಲ್ಲೆಯಲ್ಲಿ 545 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅದರಲ್ಲಿ ನಗರದ ಪ್ರದೇಶದಲ್ಲಿ 396, ಗ್ರಾಮೀಣ ಭಾಗದಲ್ಲಿ 149 ಇವೆ. ಬಾಗಲಕೋಟೆ ನಗರಕ್ಕೆ ಸಂಬಂಧಿಸಿದಂತೆ 12 ಬಾಡಿಗೆಯಲ್ಲಿದ್ದು, 8ಕ್ಕೆ ನಿವೇಶನ ಪಡೆಯಲಾಗಿದೆ. ಹಳೆ ನಗರದಲ್ಲಿ ಮುಳುಗಡೆ ಪ್ರದೇಶವಿರುವದರಿಂದ ನಿವೇಶನ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಮೇಲ್ವಿಚಾರಕಿ ವೀಣಾ ಸಭೆಗೆ ತಿಳಿದರು.

ಹುನಗುಂದಲ್ಲಿ ಆರು ಸಿಎ ನಿವೇಶನ, ಇಳಕಲ್ದಲ್ಲಿ 11 ಸಿಎ ನಿವೇಶನ ಗುರುತಿಸಲಾಗಿದೆ. ಮಾರ್ಚ್ ಒಳಗಾಗಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಗುರುತಿಸಿದಲ್ಲಿ ಹಸ್ತಾಂತರಕ್ಕೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ವಿವರ, ಮೂಲಸೌಕರ್ಯ, ಮಕ್ಕಳ ತೂಕ ಮತ್ತು ಅಪೌಷ್ಟಿಕ ಮಕ್ಕಳ ಮಾಹಿತಿ ಬಗ್ಗೆ ಚರ್ಚೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಪ್ರಭಾಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.