ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪತ್ರಕರ್ತನಾಗಲು ತಾಳ್ಮೆ, ವಾಸ್ತವದ ಅಧ್ಯಯನ ಅಗತ್ಯ’

Published 3 ಜುಲೈ 2024, 14:59 IST
Last Updated 3 ಜುಲೈ 2024, 14:59 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಬರವಣಿಗೆಯ ವಿಕಾಸಕ್ಕೆ ಭಾಷೆ ಹಾಗೂ ಓದು ಮುಖ್ಯ. ಪತ್ರಕರ್ತನಾಗಲು ತಾಳ್ಮೆ, ಸಂಯಮ, ನಿರಂತರ ವಾಸ್ತವದ ಅಧ್ಯಯನ ಅಗತ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಲೋಕೇಶ ಎಸ್.ಕೆ ಹೇಳಿದರು.

ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಬರವಣಿಗೆ ಕೌಶಲ ವಿಷಯದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.

‘ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪತ್ರಿಕೋದ್ಯಮದಲ್ಲಿ ಬರವಣಿಗೆಯಿಂದ ಗುರುತಿಸಿಕೊಳ್ಳಬಹುದು. ಯಾವುದೇ ವಿಷಯಗಳ ಕುರಿತು ಬರೆಯುವ ಮುನ್ನ ಅದರ ಪೂರ್ವಭಾವಿ ಅಧ್ಯಯನ ಅವಶ್ಯಕ. ಪೂರ್ವಾಗ್ರಹ ಪೀಡಿತರಾಗದೆ ವಾಸ್ತವಿಕ ಪರಿಸ್ಥಿತಿ ಅರ್ಥೈಸಿಕೊಂಡರೆ ಬರವಣಿಗೆ ಮೊನಚಾಗುತ್ತದೆ’ ಎಂದರು.

‘ಆಳವಾದ ಅಧ್ಯಯನ ಮಾಡುವ ಕಲೆ ರೂಢಿಸಿಕೊಳ್ಳಬೇಕು. ಸರಳ, ಸ್ಪಷ್ಟ ಮತ್ತು ನಿಖರತೆ ರೂಢಿಸಿಕೊಂಡರೆ ಒಳ್ಳೆಯ ಬರಹಗಾರರಾಗಬಹುದು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿಕ್ರಿಯಿಸುವುದನ್ನು ಕಲಿಯಬೇಕು. ಓದಿಸಿಕೊಂಡು ಹೋಗುವ ರೀತಿ ಬರೆಯುವ ಶೈಲಿ ಬೆಳೆಸಿಕೊಳ್ಳಬೇಕು’ ಎಂದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐ.ಬಿ.ಚಿಕ್ಕಮಠ, ಐಕ್ಯೂಎಸಿ ಘಟಕದ ಸಂಯೋಜಕ ಕರುಡಾ ರಾಠೋಡ, ಪ್ರಾಧ್ಯಾಪಕ ಎಂ.ಪಿ. ದೊಡವಾಡ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT