ರಬಕವಿ ಬನಹಟ್ಟಿ: ಗ್ರಂಥಾಲಯಗಳೇ ಶಾಲಾ ಕಾಲೇಜುಗಳು ನಿಜವಾದ ಆಸ್ತಿ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಇಲ್ಲಿನ ಎಸ್.ಟಿ.ಸಿ ಕಾಲೇಜು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು.

ಅವರು ಮಂಗಳವಾರ ಇಲ್ಲಿನ ಎಸ್ ಟಿ ಸಿ ಕಾಲೇಜಿನಲ್ಲಿ ಗ್ರಂಥಾಲಯಗಳ ಪಿತಾಮಹ ಡಾ.ಎಸ್.ಆರ್.ರಂಗನಾಥರ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಂಥಪಾಲಕ ಶಿವು ಇಟ್ನಾಳ ಮಾತನಾಡಿ, ಡಾ.ಎಸ್.ಆರ್ ರಂಗನಾಥರು ಗಣಿತಜ್ಞರಾಗಿದ್ದರೂ ಅವರು ಗ್ರಂಥಾಲಯಕ್ಕೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಗ್ರಂಥಾಲಯ ವಿಜ್ಞಾನದ ವರ್ಗೀಕರಣ ವ್ಯವಸ್ಥೆಯಾದ ಕೊಲೊನ್ ವರ್ಗೀಕರಣ ಗ್ರಂಥಾಲಯ ವಿಜ್ಞಾನ, ದಸ್ತಾವೇಜಿಕರಣ, ಮಾಹಿತಿ ಮತ್ತು ತಂತ್ರಜ್ಞಾನ ನಿಯಮಗಳನ್ನು ನೀಡಿದವರು ಡಾ.ರಂಗನಾಥರು ಎಂದರು.

ಮಂಜುನಾಥ ಬೆನ್ನೂರ, ಜಿ.ಎಸ್.ಪಾಟೀಲ, ಮನೋಹರ ಶಿರಹಟ್ಟಿ, ಪ್ರಕಾಶ ಕೆಂಗನಾಳ, ರೇಶ್ಮಾ ಗಜಾಕೋಶ, ಗೀತಾ ಸಜ್ಜನ, ಎಸ್.ಬಿ.ಉಕ್ಕಲಿ, ಮಹಾವೀರ ಸಂಕಾರ, ವಿ.ವೈ.ಪಾಟೀಲ, ಶ್ವೇತಾ ಮಠದ, ಕಾವೇರಿ ಜಗದಾಳ, ಅವಿನಾಶ ಹಟ್ಟಿ, ಉಜ್ವಲಾ ಬಾಣಕಾರ, ರಮೇಶ ಹೂಗಾರ, ಮಲ್ಲಿಕಾರ್ಜುನ ಹೂಲಿಕಟ್ಟಿ ಸೇರಿದಂತೆ ಅನೇಕರು ಇದ್ದರು. ನಂತರ ಪುಸ್ತಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.