ಮುಧೋಳ: ನಗರದಲ್ಲಿ ಶುಕ್ರವಾರ ರಾತ್ರಿ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆದ ವೈಯಕ್ತಿಕ ಜಗಳಕ್ಕೆ ಕೋಮುಬಣ್ಣ ಬಳಿದು ಯಾರೂ ಸಮಾಜದ ಸ್ವಾಸ್ಥ್ಯ ಹದಗೆಡಿಸಬಾರದು ಎಂದು ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಐ.ಎಚ್. ಅಂಬಿ ಮನವಿ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ ಅವಿನಾಶ ಮುಂಡಗನೂರ ಹಾಗೂ ಸೈಫನಸಾಬ್ ಎಂಬುವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಈ ಕುರಿತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ ಆದರೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ಯಾರು ಕೋಮುದ್ವೇಷಕ್ಕೆ ಮುಂದಾಗಬಾರದು’ ಎಂದು ತಿಳಿಸಿದರು.

‘ಮುಧೋಳ ನಗರ ಹಿಂದಿನಿಂದಲೂ ಸಹೋದರತ್ವಕ್ಕೆ ಮಾದರಿಯಾಗಿದೆ. ಅದಕ್ಕೆ ಯಾರೂ ಧಕ್ಕೆ ತರಲು ಮುಂದಾಗಬಾರದು’ ಎಂದರು.

ಅಂಜುಮನ್ ಕಮಿಟಿ ಅಧ್ಯಕ್ಷ ಆರೀಫ್ ಮೋಮಿನ್, ಉಪಾಧ್ಯಕ್ಷ ರಫೀಕ್ ಫಠಾಣ, ಇಲಾಹಿ ಮಹಿಷವಾಡಗಿ, ಇಸ್ಮಾಯಿಲ್ ವಾಲೀಕಾರ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.